ಸಂಗೀತ ಸಂಯೋಜಕ ರವಿ ಬಸ್ರೂರು ಅವರಿಗೆ ಕನ್ನಡ ಇದೆ, ಪರಭಾಷೆಯಲ್ಲೂ ಬೇಡಿಕೆ ಇದೆ. ‘ಕೆಜಿಎಫ್’, ‘ಕೆಜಿಎಫ್ 2’ ಬಳಿಕ ಅವರಿಗೆ ಪರಭಾಷೆಯಿಂದಲೂ ಆಫರ್ಗಳು ಬರುತ್ತಿವೆ. ಹೀಗಿರುವಾಗಲೇ ರವಿ ಬಸ್ರೂರಿಗೆ ಟಾಲಿವುಡ್ ಹೀರೋ 35 ಲಕ್ಷ ರೂಪಾಯಿಯ ರೊಲೆಕ್ಸ್ ವಾಚ್ ಗಿಫ್ಟ್ ಆಗಿದೆ. ಈ ಸಂದರ್ಭದ ಫೋಟೋ ವೈರಲ್ ಆಗಿದೆ. ವಾಚ್ ಅನ್ನು ರವಿ ಅವರು ಎಲ್ಲರ ಎದುರು ತೋರಿಸಿದ್ದಾರೆ.
ವಿಶ್ವಕ್ಸೇನ್ ಅವರು ‘#ಕಲ್ಟ್’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾಗೆ ಅವರದ್ದೇ ನಿರ್ದೇಶನ ಕೂಡ ಇದೆ. ವಿಶ್ವಕ್ಸೇನ್ ಮತ್ತು ಇತರ ಗೆಳೆಯರು ‘#ಕಲ್ಟ್’ ಹೆಸರಿನ ಪಾಸ್ ತೆಗೆದುಕೊಂಡರು ಪಬ್ ಒಂದಕ್ಕೆ ತೆರಳುತ್ತಾರೆ. ಅಲ್ಲಿ ಆಟ ಶುರುವಾಗುತ್ತದೆ. ಆಟದಲ್ಲಿ ಸೋತವರನ್ನು ಕೊಲ್ಲುವುದಿಲ್ಲ. ಸೇಮ್ ಟು ಸೇಮ್ ‘ಸ್ಕ್ವಿಡ್ ಗೇಮ್’ ವೆಬ್ ಸರಣಿಯ ರೀತಿಯಲ್ಲೇ. ಟೀಸರ್ ಹಿಂಸೆಯನ್ನು ತೋರಿಸಲಾಗಿದೆ. ಇದನ್ನು ನೋಡಿದವರಿಗೆ ಒಮ್ಮೆ ಎದೆ ಝಲ್ ಎನಿಸದೆ ಇರದು.
ಈ ಟೀಸರ್ ಲಾಂಚ್ ಈವೆಂಟ್ ನಲ್ಲಿ ರವಿ ಬಸ್ರೂರು ಕೂಡ ಇದ್ದರು. ರವಿ ಅವರ ಕೆಲಸವನ್ನು ವಿಶ್ವಕ್ ಸೇನ್ ಹೊಗಳಿದರು. ಈ ಚಿತ್ರದಲ್ಲಿರೋ ಕ್ರೂರತೆ ವೈಭವೀಕರಣ ಆಗಲು ಮ್ಯೂಸಿಕ್ ಸಹಕಾರಿ ಆಗಿದೆ ಎನ್ನುತ್ತಾರೆ ವಿಶ್ವಕ್ಸೇನ್. ಹೀಗಾಗಿ, 35 ಲಕ್ಷದ ವಾಚ್ನ ಕೊಟ್ಟರು. ಈ ಮೂಲಕ ಅವರು ಧನ್ಯವಾದ ಹೇಳಿದರು. ಸಾಮಾನ್ಯವಾಗಿ ನಿರ್ಮಾಪಕರು, ನಿರ್ದೇಶಕರು ಅಥವಾ ಸಿನಿಮಾ ಹೀರೋಗಳಿಗೆ ಕಾರ್ ಗಿಫ್ಟ್ ಕೊಡೋದು ವಾಡಿಕೆ. ಆದರೆ, ರಿಲೀಸ್ ಗೆ ಮೊದಲೇ ನಿರ್ದೇಶಕ ಸಂಗೀತ ಸಂಯೋಜಕನಿಗೆ ಈ ರೀತಿಯ ದುಬಾರಿ ವಾಚ್ ಕೊಟ್ಟಿದ್ದು ಅಪರೂಪ ಎನಿಸಿಕೊಂಡಿದೆ.
ಇದನ್ನೂ ಓದಿ: ‘ಟಾಕ್ಸಿಕ್’ನಲ್ಲಿ ಯಶ್ ಪಾತ್ರದ ಹೆಸರು ಟಿಕೆಟ್; ಮಾಸ್ಟರ್ ಪ್ಲ್ಯಾನ್ ಮಾಡಿದ ರಾಕಿಂಗ್ ಸ್ಟಾರ್
‘ಟಾಕ್ಸಿಕ್’ ಸಿನಿಮಾ ಮೂಲಕ ರವಿ ಬಸ್ರೂರು ಅವರು ಗಮನ ಸೆಳೆಯಲು ರೆಡಿ ಆಗಿದ್ದಾರೆ. ಈ ಚಿತ್ರಕ್ಕೆ ಯಶ್ ಹೀರೋ. ಈ ಸಿನಿಮಾದ ಟೀಸರ್ ಇತ್ತೀಚೆಗೆ ರಿಲೀಸ್ ಆಗಿದೆ. ಈ ಟೀಸರ್ಗೆ ಸಂಗೀತವನ್ನು ರವಿ ಅವರೇ ನೀಡಿದ್ದಾರೆ. ಹಿನ್ನೆಲೆ ಸಂಗೀತಕ್ಕೆ ಮಿಶ್ರ ಪ್ರತಿಕ್ರಿಯೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.