Headlines

ಚೆನ್ನೈ ಸೂಪರ್ ಕಿಂಗ್ಸ್‌ ತಂಡದಲ್ಲಿ ಎಲ್ಲವೂ ಸರಿ ಇಲ್ವಾ? ₹10 ಕೋಟಿ ಆಟಗಾರನ ದಿಢೀರ್ ನಿವೃತ್ತಿಗೆ ಇದೇ ಕಾರಣ!

ಚೆನ್ನೈ ಸೂಪರ್ ಕಿಂಗ್ಸ್‌ ತಂಡದಲ್ಲಿ ಎಲ್ಲವೂ ಸರಿ ಇಲ್ವಾ? ₹10 ಕೋಟಿ ಆಟಗಾರನ ದಿಢೀರ್ ನಿವೃತ್ತಿಗೆ ಇದೇ ಕಾರಣ!

ಚೆನ್ನೈ ಸೂಪರ್ ಕಿಂಗ್ಸ್‌ ತಂಡದಲ್ಲಿ ಎಲ್ಲವೂ ಸರಿ ಇಲ್ವಾ? ₹10 ಕೋಟಿ ಆಟಗಾರನ ದಿಢೀರ್ ನಿವೃತ್ತಿಗೆ ಇದೇ ಕಾರಣ!

ಬೆಂಗಳೂರು: ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಈಗ ಎಲ್ಲವೂ ಸರಿಯಿಲ್ವಾ ಎನ್ನುವ ಪ್ರಶ್ನೆ ಇದೀಗ ಕಾಡಲಾರಂಭಿಸಿದೆ. ಸಿಎಸ್‌ಕೆ ತಂಡದ ಡ್ರೆಸ್ಸಿಂಗ್ ರೂಮ್ ವಾತಾವರಣದ ಬಗ್ಗೆ ರವಿಚಂದ್ರನ್ ಅಶ್ವಿನ್ ಅಚ್ಚರಿಯ ಮಾತುಗಳನ್ನಾಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ತಮ್ಮ ತವರು ತಂಡವಾದ ಚೆನ್ನೈ ಪರ ವೃತ್ತಿಜೀವನ ಆರಂಭಿಸಿದ ಅಶ್ವಿನ್, ಈಗ ಅದೇ ತಂಡದ ಆಂತರಿಕ ಪರಿಸ್ಥಿತಿಗಳ ಬಗ್ಗೆ ಟೀಕೆ ಮಾಡಿದ್ದಾರೆ. 10 ಕೋಟಿ ರುಪಾಯಿಗೆ ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗಿದ್ದ ಅಶ್ವಿನ್ ತಾವೇಕೆ ಐಪಿಎಲ್‌ಗೆ ವಿದಾಯ ಘೋಷಿಸಿದ್ದು ಎನ್ನುವ ಬಗ್ಗೆ ತುಟಿಬಿಚ್ಚಿದ್ದಾರೆ.

ಐಪಿಎಲ್ 2025ರ ಸೀಸನ್ ತಮಗೆ ಮಾನಸಿಕವಾಗಿ ಬಹಳಷ್ಟು ನೋವು ನೀಡಿದೆ ಎಂದು ಆರ್. ಅಶ್ವಿನ್ ಹೇಳಿದ್ದಾರೆ. ಡಿಸೆಂಬರ್ 2024ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಅವರು, ಕಳೆದ ಆಗಸ್ಟ್‌ನಲ್ಲಿ ಐಪಿಎಲ್‌ನಿಂದಲೂ ಹಿಂದೆ ಸರಿದಿದ್ದರು.

ಚೆನ್ನೈ ತಂಡದಲ್ಲಿ ಹಿಂದಿನ ಸಕಾರಾತ್ಮಕ ವಾತಾವರಣ ಈಗ ಇಲ್ಲ ಎಂದು ಅಶ್ವಿನ್ ಹೇಳಿದ್ದಾರೆ. "ಕಳೆದ ಸೀಸನ್ ನನಗೆ ವೈಯಕ್ತಿಕವಾಗಿ ತುಂಬಾ ನೋವು ಕೊಟ್ಟಿತು. ತಂಡದಲ್ಲಿ ಎಲ್ಲವೂ ಸರಿಯಿರಲಿಲ್ಲ" ಎಂದು ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಅನುಪಸ್ಥಿತಿಯಲ್ಲಿ ಐಪಿಎಲ್ 2026ರಲ್ಲಿ ಸಿಎಸ್‌ಕೆ ಸತತ ಮೂರು ಸೋಲು ಕಂಡಿದೆ. ತಂಡದ ಬೌಲಿಂಗ್ ತಂತ್ರಗಳನ್ನು ಅಶ್ವಿನ್ ಟೀಕಿಸಿದ್ದಾರೆ. ಬೌಲರ್‌ಗಳ ಮೇಲೆ ವೈಡ್ ಯಾರ್ಕರ್‌ಗಳನ್ನು ಎಸೆಯಲು ಒತ್ತಡ ಹೇರುತ್ತಿರುವುದು ತಂಡಕ್ಕೆ ನಷ್ಟ ತರುತ್ತಿದೆ ಎಂದು ಅವರು ಹೇಳಿದ್ದಾರೆ.

ಐಪಿಎಲ್ 2025ರಲ್ಲಿ ಸಿಎಸ್‌ಕೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು. ಆ ಸೀಸನ್‌ನಲ್ಲಿ ಅಶ್ವಿನ್ 9 ಪಂದ್ಯಗಳಿಂದ ಕೇವಲ 7 ವಿಕೆಟ್ ಪಡೆದಿದ್ದರು. ತಂಡದೊಳಗಿನ ಭಿನ್ನಾಭಿಪ್ರಾಯವೇ ಈ ಕಳಪೆ ಪ್ರದರ್ಶನಕ್ಕೆ ಕಾರಣ ಎನ್ನಲಾಗಿದೆ.

ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೋತ ಬಗ್ಗೆ ಅಶ್ವಿನ್ ಮಾತನಾಡಿದ್ದಾರೆ. ಹಾಲಿ ಚಾಂಪಿಯನ್ ಆರ್‌ಸಿಬಿ 251 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಈ ಮೂಲಕ ಆರ್‌ಸಿಬಿ ಉಳಿದ ತಂಡಗಳಿಗೆ ಅಪಾಯದ ಮುನ್ಸೂಚನೆ ನೀಡಿದೆ ಎಂದು ಅಶ್ವಿನ್ ಹೇಳಿದ್ದಾರೆ.

Source link

Leave a Reply

Your email address will not be published. Required fields are marked *