ಹಾರ್ದಿಕ್ ಪಾಂಡ್ಯ ನಾಯಕತ್ವದ ತಂತ್ರಗಳನ್ನು ಟ್ರೋಲ್ ಮಾಡಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ!

ಹಾರ್ದಿಕ್ ಪಾಂಡ್ಯ ನಾಯಕತ್ವದ ತಂತ್ರಗಳನ್ನು ಟ್ರೋಲ್ ಮಾಡಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ!



ಹಾರ್ದಿಕ್ ಪಾಂಡ್ಯ ನಾಯಕತ್ವದ ತಂತ್ರಗಳನ್ನು ಟ್ರೋಲ್ ಮಾಡಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ!
ಮುಂಬೈ ಇಂಡಿಯನ್ಸ್ ಸತತ ಮೂರನೇ ಸೋಲಿನ ಬಳಿಕ, ನಾಯಕ ಹಾರ್ದಿಕ್ ಪಾಂಡ್ಯ ಅವರ ಕ್ಯಾಪ್ಟನ್ಸಿ ನಿರ್ಧಾರಗಳ ವಿರುದ್ಧ ರವಿಚಂದ್ರನ್ ಅಶ್ವಿನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.<img>ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹೀನಾಯ ಸೋಲು ಕಂಡಿತ್ತು. ಇದರ ಬೆನ್ನಲ್ಲೇ, ಹಿರಿಯ ಆಟಗಾರ ರವಿಚಂದ್ರನ್ ಅಶ್ವಿನ್, ನಾಯಕ ಹಾರ್ದಿಕ್ ಪಾಂಡ್ಯ ಅವರ ನಿರ್ಧಾರಗಳನ್ನು ಕಟುವಾಗಿ ಟೀಕಿಸಿದ್ದಾರೆ.<img><p>ಸ್ಪಿನ್ನರ್‌ಗಳನ್ನು ಚೆನ್ನಾಗಿ ಎದುರಿಸುವ ಆರ್‌ಸಿಬಿ ನಾಯಕ ರಜತ್ ಪಾಟಿದಾರ್‌ಗೆ ಸ್ಪಿನ್ನರ್ ಮಯಾಂಕ್ ಮಾರ್ಕಂಡೆ ಅವರನ್ನು ಬೌಲಿಂಗ್‌ಗೆ ಇಳಿಸಿದ ಹಾರ್ದಿಕ್ ನಿರ್ಧಾರ ದೊಡ್ಡ ತಪ್ಪು. ಈ ಪಂದ್ಯದಲ್ಲಿ ಹಾರ್ದಿಕ್ ನಾಯಕತ್ವ ತೀರಾ ಸಾಧಾರಣವಾಗಿತ್ತು ಎಂದು ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.</p><img><p>2024ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡುವಾಗ ಪಾಟಿದಾರ್, ಮಯಾಂಕ್ ಮಾರ್ಕಂಡೆ ಅವರನ್ನು ಎದುರಿಸಿದ ರೀತಿಯನ್ನು ಅಶ್ವಿನ್ ನೆನಪಿಸಿಕೊಂಡಿದ್ದಾರೆ. ರಜತ್ ಪಾಟಿದಾರ್ ಒಬ್ಬ ಸ್ಪಿನ್ ಹಿಟ್ಟರ್ ಎಂದು ಜಗತ್ತಿಗೆ ಸಾರಿದ್ದು ಆ ಪಂದ್ಯದಲ್ಲಿ. ಅಂದು ಹೈದರಾಬಾದ್‌ನಲ್ಲಿ ಮಾರ್ಕಂಡೆಗೆ ಪಾಟಿದಾರ್ ಮನಬಂದಂತೆ ಥಳಿಸಿದ್ದರು. ಆವತ್ತು ಒಂದೇ ಓವರ್‌ನಲ್ಲಿ ನಾಲ್ಕು ಸಿಕ್ಸರ್‌ ಬಾರಿಸಿದ್ದರು, ಈ ಪಂದ್ಯದಲ್ಲಿ ಮೂರು ಸಿಕ್ಸರ್‌ಗಳನ್ನು ಹೊಡೆದರು. ಪಾಟಿದಾರ್ ಕ್ರೀಸ್‌ಗೆ ಬಂದ ತಕ್ಷಣ ಮತ್ತೆ ಮಾರ್ಕಂಡೆಗೆ ಬೌಲಿಂಗ್ ನೀಡುವುದು ಬುದ್ಧಿವಂತಿಕೆಯ ನಡೆಯಾಗಿರಲಿಲ್ಲ ಎಂದು ಅಶ್ವಿನ್ ಹೇಳಿದರು.</p><img>ಈ ಪಂದ್ಯದಲ್ಲಿ ಮುಂಬೈ ಸ್ಪಿನ್ನರ್‌ಗಳು ನೀಡಿದ ರನ್‌ಗಳೇ ಸೋಲು-ಗೆಲುವಿನ ನಡುವಿನ ವ್ಯತ್ಯಾಸವನ್ನು ನಿರ್ಧರಿಸಿತು ಎಂದು ಅಶ್ವಿನ್ ಹೇಳಿದರು. ಮಯಾಂಕ್ ಮಾರ್ಕಂಡೆ 2 ಓವರ್‌ಗಳಲ್ಲಿ 40 ರನ್ (ಎಕಾನಮಿ: 20.00) ನೀಡಿದರೆ, ಮಿಚೆಲ್ ಸ್ಯಾಂಟ್ನರ್ 4 ಓವರ್‌ಗಳಲ್ಲಿ 43 ರನ್ ಬಿಟ್ಟುಕೊಟ್ಟರು.<img><p>ಸ್ಪಿನ್ನರ್‌ಗಳು ಇಷ್ಟೊಂದು ರನ್ ಬಿಟ್ಟುಕೊಟ್ಟಿದ್ದರಿಂದಲೇ ಆರ್‌ಸಿಬಿ ಸ್ಕೋರ್ 210ರ ನಿರೀಕ್ಷೆಯಿಂದ 240ಕ್ಕೆ ಏರಿತು. ಪಾಟಿದಾರ್‌ರಂತಹ ಆಟಗಾರನಿಗೆ ಸೆಟ್ ಆಗಲು ಬೇಕಾದ ಎಸೆತಗಳನ್ನು ಹಾರ್ದಿಕ್ ನೀಡಿದರು. ಪಾಟಿದಾರ್ 17 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರಲ್ಲಿ ಯಾವುದೇ ಆಶ್ಚರ್ಯವಿಲ್ಲ ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.</p><img><p>ಐಪಿಎಲ್ 2026 ಪ್ರಾರಂಭವಾಗುವ ಮೊದಲೇ, ಭಾರತ ತಂಡದ ನಾಯಕನೂ ಆಗಿರುವ ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಬೇಕು ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದರು. ಹಾರ್ದಿಕ್ ನಾಯಕತ್ವದಲ್ಲಿನ ಲೋಪಗಳು ತಂಡವನ್ನು ಸಂಕಷ್ಟಕ್ಕೆ ದೂಡುತ್ತಿವೆ ಎನ್ನುವುದು ಅಶ್ವಿನ್ ವಾದವಾಗಿದೆ.</p><img>ನಾಲ್ಕು ಪಂದ್ಯಗಳಲ್ಲಿ ಮೂರು ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೆ ಕುಸಿದಿರುವ ಮುಂಬೈ, ತನ್ನ ಮುಂದಿನ ಪಂದ್ಯವನ್ನು ಗುರುವಾರ ಬಲಿಷ್ಠ ಪಂಜಾಬ್ ಕಿಂಗ್ಸ್ ವಿರುದ್ಧ ಆಡಲಿದೆ. ಈ ಪಂದ್ಯವೂ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದುವರೆಗೆ ಸೋಲರಿಯದ ಪಂಜಾಬ್, ನಾಲ್ಕು ಪಂದ್ಯಗಳಿಂದ 7 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.



Source link

Leave a Reply

Your email address will not be published. Required fields are marked *