‘ಊಟ ಸರಿ ಇಲ್ದಿದ್ಮೇಲೂ ಹೋಟೆಲ್​​ಗೆ ಏಕೆ ಬರ್ಬೇಕು?’; ರವಿಚಂದ್ರನ್ ಹೇಳಿಕೆ ಪ್ರಶ್ನೆ ಮಾಡಿದ ನೆಟ್ಟಿಗರು

‘ಊಟ ಸರಿ ಇಲ್ದಿದ್ಮೇಲೂ ಹೋಟೆಲ್​​ಗೆ ಏಕೆ ಬರ್ಬೇಕು?’; ರವಿಚಂದ್ರನ್ ಹೇಳಿಕೆ ಪ್ರಶ್ನೆ ಮಾಡಿದ ನೆಟ್ಟಿಗರು


ನಟ, ನಿರ್ಮಾಪಕ ರವಿಚಂದ್ರನ್ (ರವಿಚಂದ್ರನ್) ಅವರ ಚಿತ್ರರಂಗದ ಬಗ್ಗೆ ಅಪಾರ ಗೌರವ. ಚಿತ್ರರಂಗ ಮೇಲಕ್ಕೆ ಬರಬೇಕು ಎಂಬುದು ಅವರ ಆಸೆ. ಈ ಕಾರಣಕ್ಕೆ ಇತ್ತೀಚೆಗೆ ಅವರು ಮಾತನಾಡಿದರು. 100 ರೂಪಾಯಿ ಕೊಟ್ಟು ಕನ್ನಡ ಸಿನಿಮಾ ನೋಡಿ ಏನಾಗಲ್ಲಎಂದು ಅವರು ಹೇಳಿದ್ದರು. ಈ ಹೇಳಿಕೆಯ ಬಗ್ಗೆ ಚರ್ಚೆ ಆರಂಭವಾಗಿದೆ. ‘ಹೋಟೆಲ್‌ನಲ್ಲಿ ಊಟ ಸರಿ ಇಲ್ಲ ಎಂದು ಗೊತ್ತಿದ್ದ ಮೇಲೂ ಜನರು ಏಕೆ ಅಲ್ಲಿಗೆ ಹೋಗಬೇಕು’ ಎಂಬ ಪ್ರಶ್ನೆಯನ್ನು ಕೆಲವರು ಎತ್ತಿದ್ದಾರೆ.

ಸತೀಶ್ ನೀನಾಸಂ ನಟನೆಯ ‘ದಿ ರೈಸ್ ಆಫ್ ಅಶೋಕ’ ಸಿನಿಮಾದ ಟ್ರೇಲರ್ ಲಾಂಚ್ ಈವೆಂಟ್ ಇತ್ತೀಚೆಗೆ ನಡೆದಿದೆ. ಈ ವೇಳೆ ಮಾತನಾಡಿದ ರವಿಚಂದ್ರನ್ ಅವರು, ‘ಜನರು ಹೆಚ್ಚೆಚ್ಚು ಥಿಯೇಟರ್ ಗೆ ಹೋಗಬೇಕು. 100 ರೂಪಾಯಿ ಕೊಟ್ಟು ಸಿನಿಮಾ ನೋಡಲ್ವಾ? ಸಿನಿಮಾ ಚೆನ್ನಾಗಿಲ್ಲ ಎಂದರೂ 100 ರೂಪಾಯಿ ಕಳೆಯಿರಿ ತೊಂದರೆ ಇಲ್ಲ. ಒಂದಷ್ಟು ಸಿನಿಮಾ ಗೆಲ್ಲಿಸಿ, ಗಂಟೇನು ಹೋಗಲ್ಲ’ ಎಂದು ಅವರು ಹೇಳಿದ್ದರು.

ರವಿಚಂದ್ರನ್ ಹೇಳಿಕೆ ಬಗ್ಗೆ ಚರ್ಚೆ ಶುರುವಾಗಿದೆ. ಯಾವುದೇ ಥಿಯೇಟರ್‌ನಲ್ಲಿ ಈಗ 100 ರೂಪಾಯಿಗೆ ಸಿನಿಮಾ ಟಿಕೆಟ್ ಸಿಗೋದಿಲ್ಲ. 150-200 ರೂಪಾಯಿ ಟಿಕೆಟ್ ದರ ನಿಗದಿ ಮಾಡಲಾಗುತ್ತಿದೆ. ಕುಟುಂಬ ಇದ್ದಾಗ ಒಬ್ಬನೇ ಸಿನಿಮಾಗೆ ತೆರಳೋಕೆ ಸಾಧ್ಯವಿಲ್ಲ. ಇಡೀ ಕುಟುಂಬ ತೆರಳಿತು ಎಂದರೆ ಏನಿಲ್ಲ ಎಂದರೂ ಸಾವಿರ ರೂಪಾಯಿ ಖರ್ಚಾಗುತ್ತದೆ. ಜೊತೆಗೆ ಒಂದಷ್ಟು ಸಮಯ ವ್ಯರ್ಥವಾಗುತ್ತದೆ. ಇಷ್ಟೆಲ್ಲ ಮಾಡಿ ಮನರಂಜನೆ ಸಿಕ್ಕರೆ ಓಕೆ. ಸಿನಿಮಾ ಚೆನ್ನಾಗಿಲ್ಲದೆ, ಮತ್ತಷ್ಟು ಫ್ರಸ್ಟ್ರೇಟ್ ಆದರೆ ಕೊಟ್ಟ ಹಣ ವ್ಯರ್ಥ.

ಇದನ್ನೂ ಓದಿ: ‘ಯಾವನು ಕೇಳಿದ ನಿಮ್ಮ ಕಮೆಂಟ್?’; ರವಿಚಂದ್ರನ್ ಗರಂ ಆಗಿದ್ದು ಯಾರ ಬಗ್ಗೆ?

ಇನ್ನು, ಕನ್ನಡದಲ್ಲಿ ವರ್ಷಕ್ಕೆ 200 ಸಿನಿಮಾಗಳು ಬರುತ್ತವೆ. 200 ಚಿತ್ರಗಳು ಮೇಲಕ್ಕೆ 100 ಸಿನಿಮಾ ಗೆಲ್ಲಿಸ್ತೀನಿ ಹೋದರು, 1 ಲಕ್ಷ ರೂಪಾಯಿ ಖರ್ಚಾಗುತ್ತದೆ. ಮಧ್ಯಮ ವರ್ಗದವರ ದುಡಿಮೆಯೇ ಕಡಿಮೆ. ಹೀಗಿರುವಾಗ ಒಂದು ಲಕ್ಷ ರೂಪಾಯಿ ಹಣವನ್ನು ಸಿನಿಮಾಗೆ ಸುರಿಯೋಕೆ ಸಾಧ್ಯವೇ ಎಂಬುದು ಜನಸಾಮಾನ್ಯರ ಪ್ರಶ್ನೆ. ಬರುವ ಬಹುತೇಕ ಸಿನಿಮಾಗಳ ಕಥೆ, ನಿರೂಪಣೆ, ನಿರ್ದೇಶನ ಚೆನ್ನಾಗಿರೋದಿಲ್ಲ. ಎಲ್ಲೋ ಅಲ್ಲೋ, ಇಲ್ಲೋ ಒಂದು ಒಳ್ಳೆಯ ಸಿನಿಮಾ ಬಂದಾಗ ಜನರು ಅದನ್ನು ಗೆಲ್ಲಿಸಿದ್ದಾರೆ. ‘ಸು ಫ್ರಮ್ ಸೋ’, ‘ಶಾಖಾಹಾರಿ’ ಸಿನಿಮಾಗಳಿಗೆ ಉತ್ತಮ ಉದಾಹರಣೆ.

‘ಹೋಟೆಲಿನಲ್ಲಿ ಊಟ ಚೆನ್ನಾಗಿಲ್ಲ, ಹೋಟೆಲ್ ನಲ್ಲಿ ಧೋರಣೆ ಸರಿಯಿಲ್ಲ ಎಂದರೆ ಎಷ್ಟು ಹೊಟ್ಟೆ ಹಸಿದಿದ್ದರೂ ಜನ ಅಲ್ಲಿಗೆ ಹೋಗುವುದಿಲ್ಲ. ನಮ್ಮ ಅಡುಗೆ ಇರುವುದೇ ಹೀಗೆ ಸುಮ್ಮನೆ ಬಂದು ತಿಂದು ನಮ್ಮನ್ನು ಬೆಂಬಲಿಸಿ ಅಂದರೆ ಯಾರು ತಾನೇ ಬೆಂಬಲಿಸಲು ಸಾಧ್ಯ’ ಎಂದು ಅಮರನಾಥ್ ಶಿವಶಂಕರ್ ಎಂಬುವವರು ಪ್ರಶ್ನೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *