ನವೆಂಬರ್, ಡಿಸೆಂಬರ್ 5: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನ ರಿಪೋ ದರವನ್ನು ಶೇ. 5.25ಕ್ಕೆ ಇಳಿಸುವುದರ ಜೊತೆಗೆ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಒಂದು ಲಕ್ಷ ಕೋಟಿ ರೂ ಮೌಲ್ಯದ ಓಪನ್ ಮಾರ್ಕೆಟ್ ಆಪರೇಷನ್ ಖರೀದಿಗಳನ್ನು (ಓಪನ್ ಮಾರ್ಕೆಟ್ ಆಪರೇಷನ್ಸ್ ಪರ್ಚೇಸ್) ಮಾಡಲು ನಿರ್ಧರಿಸಲಾಗಿದೆ. ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಎಂಪಿಸಿ ಸಭೆಯಲ್ಲಿ ಕೈಗೊಂಡ ನಿರ್ಧಾರಗಳನ್ನು ಪ್ರಕಟಿಸುತ್ತಾ ಈ ವಿಷಯ.
ಏನಿದು ಒಎಂಒ ಖರೀದಿ?
ದೇಶದ ಹಣದ ಹರಿವನ್ನು ಹೆಚ್ಚಿಸಲು ಆರ್ ಬಿಐಗೆ ಇರುವ ಪ್ರಮುಖ ದಾರಿಗಳಲ್ಲಿ ಓಪನ್ ಮಾರ್ಕೆಟ್ ಆಪರೇಷನ್ಸ್ ಖರೀದಿ. ಈ ಕಾರ್ಯಾಚರಣೆಯಲ್ಲಿ ಆರ್ಬಿಐ ದೇಶದ ಬ್ಯಾಂಕುಗಳಿಂದ ಗವರ್ನ್ಮೆಂಟ್ ಸೆಕ್ಯುರಿಟಿಗಳನ್ನು ಖರೀದಿಸಲಾಗುತ್ತದೆ. ಹೀಗೆ ಖರೀದಿಸಿದಾಗ ಬ್ಯಾಂಕುಗಳಿಗೆ ಹಣ ಬಿಡುಗಡೆ ಮಾಡುತ್ತದೆ.
ಇದನ್ನೂ ಓದಿ: RBI MPC ಮೀಟ್: ಬಡ್ಡಿದರ 25 ಮೂಲಾಂಕಗಳನ್ನು ಇಳಿಸಿದ ಆರ್ ಬಿಐ; ರಿಪೋ ದರ ಶೇ. 5.25ಕ್ಕೆ ಇಳಿಕೆ
ಈ ಕ್ರಮದಿಂದ ಬ್ಯಾಂಕುಗಳಿಗೆ ಹೆಚ್ಚಿನ ಹಣ ಹರಿದುಬರುತ್ತದೆ. ಸಾಲ ಕೊಡಲು ಬ್ಯಾಂಕುಗಳಿಗೆ ಸುಲಭವಾಗುತ್ತದೆ. ಆರ್ಥಿಕತೆಯಲ್ಲೂ ಹಣದ ಓಟ ಹೆಚ್ಚುತ್ತಿದೆ. ಜಿಡಿಪಿ ಬೆಳವಣಿಗೆಗೂ ಸಹಕಾರಿಯಾಗುತ್ತದೆ.
ಐದು ಬಿಲಿಯನ್ ಡಾಲರ್ ಕರೆನ್ಸಿ ಖರೀದಿ…
ಹಣದ ಹರಿವು ಖರೀದಿಸಲು ಆರ್‌ಬಿಐಐ ಈ ತಿಂಗಳ 5 ಬಿಲಿಯನ್ ಡಾಲರ್ ಕರೆನ್ಸಿಯ ನಿರ್ಧಾರವನ್ನೂ ಮಾಡಿದೆ. ಇಲ್ಲಿಯೂ ಕೂಡ ಬ್ಯಾಂಕುಗಳಿಂದ ಆರ್ ಬಿಐ ಡಾಲರ್ಗಳನ್ನು ಖರೀದಿಸಲಾಗುತ್ತದೆ. 5 ಬಿಲಿಯನ್ ಡಾಲರ್ ಹಣವನ್ನು ಖರೀದಿಸಿ ಅದರ ಮೌಲ್ಯದ ರೂಪಾಯಿ ಕರೆನ್ಸಿಯನ್ನು ಬ್ಯಾಂಕುಗಳಿಗೆ ನೀಡಬೇಕು. ಸದ್ಯ ಮೂರು ವರ್ಷಕ್ಕೆ ಈ ಕ್ರಮ ಇರುತ್ತದೆ. ಅಂದರೆ, ಮೂರು ವರ್ಷದ ಬಳಿಕ ಬ್ಯಾಂಕುಗಳಿಗೆ ಆರ್ ಬಿಐ ಡಾಲರ್ ಅನ್ನು ಮರಳಿಸುತ್ತದೆ.
ಇದನ್ನೂ ಓದಿ: ಕೇಂದ್ರೀಯ ಅಬಕಾರಿ ತಿದ್ದುಪಡಿ ಮಸೂದೆಗೆ ಸಂಸತ್ತು; ರಾಜ್ಯಗಳಿಗೆ ಲಾಭ ಹಂಚಿಕೆ ಎಂದ ನಿರ್ಮಲಾ ಸೀತಾರಾಮನ್
ಬ್ಯಾಂಕುಗಳಲ್ಲಿ ರುಪಾಯಿ ರೂಪದ ಹಣ ಹೆಚ್ಚು ಚಾಲನೆಯಲ್ಲಿ ಇರಲಿ, ಹಣದ ಹರಿವು ಸುಗಮವಾಗಿರಲಿ ಎಂಬ ಉದ್ದೇಶದಿಂದ ಆರ್ ಬಿಐ ಈ ಎರಡು ಕ್ರಮ ಕೈಗೊಂಡಿದೆ. ಹಣಕಾಸು ವ್ಯವಸ್ಥೆಗೆ ಲಿಕ್ವಿಡಿಟಿ ಹೆಚ್ಚಿಸುವ ಅವಶ್ಯಕತೆ ಇದ್ದಾಗ ಆರ್ಬಿಐ ಅಷ್ಟೇ ಅಲ್ಲ ವಿಶ್ವದ ಎಲ್ಲಾ ಕೇಂದ್ರ ಬ್ಯಾಂಕುಗಳೂ ಇಂಥ ಕೆಲ ಕ್ರಮಗಳನ್ನು ಕೈಗೊಳ್ಳುವುದು.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ