RBI slash repo ಆರ್‌ಬಿಐ ಮಹತ್ವದ ನಿರ್ಧಾರ, ರೆಪೋ ದರ ಬದಲಾವಣೆಯಿಂದ ಸಾಲದ ಬಡ್ಡಿ ಭಾರಿ ಇಳಿಕೆ | Rbi Cuts Repo Rate From 5 5 To 5 25 Percent Benefits Cheaper Loans

RBI slash repo ಆರ್‌ಬಿಐ ಮಹತ್ವದ ನಿರ್ಧಾರ, ರೆಪೋ ದರ ಬದಲಾವಣೆಯಿಂದ ಸಾಲದ ಬಡ್ಡಿ ಭಾರಿ ಇಳಿಕೆ | Rbi Cuts Repo Rate From 5 5 To 5 25 Percent Benefits Cheaper Loans


16

ರೆಪೊ ದರ ಇಳಿಕೆ

Image Credit : stockPhoto

ರೆಪೊ ದರ ಇಳಿಕೆ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ರೆಪೊ ದರ ಇಳಿಕೆ ಮಾಡಿದೆ. ಇಂದು ಬೆಳಗ್ಗೆ RBI ಗವರ್ನರ್ ಸಂಜಯ್ ಮಲ್ಹೋತ್ರ ಮಹತ್ವದ ನಿರ್ಧಾರ ಘೋಷಿಸಿದ್ದಾರೆ. ಇದೀಗ 25 ಪಾಯಿಂಟ್‌ಗಳನ್ನು ರೆಪೊ ದರ ಇಳಿಕೆ ಮಾಡಲಾಗಿದೆ. ಶೇಕಡಾ 5.5 ರಷ್ಟಿದ್ದ ರೆಪೊ ದರ ಇದೀಗ 5.25ಕ್ಕೆ ಇಳಿಕೆ ಮಾಡಲಾಗಿದೆ. ಇದರಿಂದ ಸಾಲದ ಮೇಲಿನ ಬಡ್ಡಿ ಮತ್ತಷ್ಟು ಇಳಿಕೆಯಾಗಲಿದೆ. ಜನರಿಗೆ ಸುಲಭವಾಗಿ ಸಾಲ ಸೌಲಭ್ಯ ಲಭ್ಯವಾಗಲಿದೆ.

26

ರೆಪೊ ದರ ಇಳಿಕೆಯಿಂದ ಪ್ರಯೋಜನವೇನು

Image Credit : Getty

ರೆಪೊ ದರ ಇಳಿಕೆಯಿಂದ ಪ್ರಯೋಜನವೇನು

ಆರ್‌ಬಿಐ ರೆಪೊ ದರ ಇಳಿಕೆಯಿಂದ ಗೃಹ ಸಾಲ, ವಾಹನ ಸಾಲ ಸೇರಿದಂತೆ ಚಿಲ್ಲರೆ ಸಾಲಗಾರರಿಗೆ ಕಡಿಮೆ ಬಡ್ಡಿ ದರ ಹಾಗೂ ಸುಲಭ ರೀತಿಯಲ್ಲಿ ಸಾಲ ಸೌಲಭ್ಯಗಳು ಲಭ್ಯವಾಗಲಿದೆ. ಈ ಮೂಲಕ ಸಾಲ ಪಡೆದುಕೊಳ್ಳುವ ಮಂದಿ ನಿರಾಳರಾಗಿದ್ದಾರೆ. ಸುಲಭ ಕಂತು, ಅತೀ ಕಡಿಮೆ ಇಎಂಐ ಸೇರಿದಂತೆ ಹಲವು ಸೌಲಭ್ಯಗಳು ಗ್ರಾಹಕರಿಗೆ ಲಭ್ಯವಾಗಲಿದೆ.

36

ರೂಪಾಯಿ ಮೌಲ್ಯ ಕುಸಿತದ ನಡುವೆ ಆರ್ಥಿಕ ಬೆಳವಣಿಗೆ

Image Credit : social media

ರೂಪಾಯಿ ಮೌಲ್ಯ ಕುಸಿತದ ನಡುವೆ ಆರ್ಥಿಕ ಬೆಳವಣಿಗೆ

ಇತ್ತೀಚೆಗೆ ರೂಪಾಯಿ ಮೌಲ್ಯ ಕುಸಿತ ತೀವ್ರ ಆತಂಕ ಸೃಷ್ಟಿಸಿದೆ. ಸತತ ಕುಸಿತದ ನಡುವೆ ಇದೀಗ ಆರ್‌ಬಿಐ ಮಹತ್ವದ ನಿರ್ಧಾರ ಕೈಗೊಂಡಿದೆ. ರೂಪಾಯಿ ಮೌಲ್ಯ ಕುಸಿತ ಆತಂಕದ ನಡುವೆ ಆರ್‌ಬಿಐ ಆರ್ಥಿಕ ಬೆಳವಣಿಗೆ ಉತ್ತೇಜಿಸುವ ನಿಟ್ಟಿನಲ್ಲಿ ರೆಪೊ ದರ ಇಳಿಕೆ ಸೇರಿದಂತೆ ಮಹತ್ವದ ನಿರ್ಧಾರ ಕೈಗೊಂಡಿದೆ.

46

ಒಮ್ಮತದ ನಿರ್ಧಾರ ಘೋಷಿಸಿದ ಆರ್‌ಬಿಐ

Image Credit : stockPhoto

ಒಮ್ಮತದ ನಿರ್ಧಾರ ಘೋಷಿಸಿದ ಆರ್‌ಬಿಐ

ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರ ನೇತೃತ್ವದಲ್ಲಿ ಕಳೆದ ಮೂರು ದಿನಗಳಿಂದ ಆರ್‌ಬಿಐ ಮಾನಿಟರ್ ಪಾಲಿಸಿ ಕಮಿಟಿ (MPC) ಕಳೆದ ಕೆಲ ತಿಂಗಳಿನಿಂದ ರೂಪಾಯಿ ಮೌಲ್ಯ, ದೇಶದ ಆರ್ಥಿಕ ಬೆಳವಣಿಗೆ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿ ಇಂದು ಒಮ್ಮತದ ನಿರ್ಧಾರ ಘೋಷಿಸಿದೆ.

ಒಮ್ಮತದ ನಿರ್ಧಾರ ಘೋಷಿಸಿದ ಆರ್‌ಬಿಐ

56

ಜೂನ್ ತಿಂಗಳಲ್ಲಿ ರೆಪೊ ದರ ಇಳಿಕೆ ಮಾಡಿದ್ದ ಆರ್‌ಬಿಐ

Image Credit : Asianet News

ಜೂನ್ ತಿಂಗಳಲ್ಲಿ ರೆಪೊ ದರ ಇಳಿಕೆ ಮಾಡಿದ್ದ ಆರ್‌ಬಿಐ

ಹಣದುಬ್ಬರದ ಪರಿಣಾಮ ಕಳೆದ ಜೂನ್ ತಿಂಗಳಲ್ಲಿ ಆರ್‌ಬಿಐ ರೆಪೊ ದರವನ್ನು ಶೇಕಡಾ 6 ರಿಂದ ಶೇಕಡಾ 5.5ಕ್ಕೆ ಇಳಿಕೆ ಮಾಡಿತ್ತು. ಈ ಬಾರಿ ಹಣದುಬ್ಬರ ಒತ್ತಡ ಕಡಿಮೆಯಾಗಿದೆ. 2025-26 ಸಾಲಿನ ಆರ್ಥಿಕ ವರ್ಷಕ್ಕೆ ಹಣದುಬ್ಬರವನ್ನು ಶೇಕಡಾ 2.0ಕ್ಕೆ ಇಳಿಕೆ ಮಾಡಲಾಗಿದೆ. 2026-27 ಆರ್ಥಿಕ ವರ್ಷದ ಹಣದುಬ್ಬರಳ ಲೆಕ್ಕಾಚಾರ ಮಾಡಿದರೆ ಲೋಹಗಳ ಬೆಲೆ ಏರಿಕೆಯಾಗುವ ಸಾಧ್ಯತ ಇದೆ.

66

ಜಿಡಿಪಿ ಹೆಚ್ಚಳ

Image Credit : Getty

ಜಿಡಿಪಿ ಹೆಚ್ಚಳ

ಪ್ರಸಕ್ತ ವರ್ಷದ ದೇಶಿಯ ಉತ್ಪನ್ನ(ಜಿಡಿಪಿ ) ಹೆಚ್ಚಳದ ಮೂನ್ಸೂಚನೆ ನೀಡಿದೆ. ಅಂದಾಜು ಪ್ರಕಾರ ಶೇಕಡಾ 6.8 ರಿಂದ ಶೇಕಡಾ 7.3ಕ್ಕೆ ಹೆಚ್ಚಿಸಲಾಗಿದೆ. ಪ್ರಸಕ್ತ ತ್ರೈಮಾಸಿಕದ ವೇಳೆ(ಕ್ವಾರ್ಟರ್ 3) ಜಿಡಿಪಿ ಮನ್ಸೂಚನೆ ನೀಡಿದ 6.4 ರಿಂದ ಇದೀಗ ಶೇಕಡಾ 6.7ರಷ್ಟು ಏರಿಕೆಯಾಗಿದೆ.

ಜಿಡಿಪಿ ಹೆಚ್ಚಳ

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.



Source link

Leave a Reply

Your email address will not be published. Required fields are marked *