ಸಣ್ಣ ಉದ್ದಿಮೆಗಳಿಗೆ ಅಡಮಾನರಹಿತ ಸಾಲದ ಮಿತಿ 20 ಲಕ್ಷ ರೂಗೆ ಏರಿಕೆ; ಸಣ್ಣ ಎನ್​ಬಿಎಫ್​ಸಿಗಳಿಗೆ ನೊಂದಣಿ ವಿನಾಯಿತಿ

ಸಣ್ಣ ಉದ್ದಿಮೆಗಳಿಗೆ ಅಡಮಾನರಹಿತ ಸಾಲದ ಮಿತಿ 20 ಲಕ್ಷ ರೂಗೆ ಏರಿಕೆ; ಸಣ್ಣ ಎನ್​ಬಿಎಫ್​ಸಿಗಳಿಗೆ ನೊಂದಣಿ ವಿನಾಯಿತಿ


ನವದೆಹಲಿ, ಫೆಬ್ರುವರಿ 6: ಸಣ್ಣ ಉದ್ದಿಮೆಗಳಿಗೆ ಪುಷ್ಟಿ ನೀಡಲು ಆರ್‌ಬಿಐ (RBI) ತನ್ನ ಅಡಮಾನರಹಿತ ಸಾಲದ (ಕೊಲ್ಯಾಟರಲ್-ಮುಕ್ತ ಸಾಲ) ಮಿತಿಯನ್ನು ಏರಿಸಿದೆ. ಆರ್‌ಬಿಐ ಎಂಪಿಸಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಈ ನಿರ್ಧಾರ ಪ್ರಕಟಿಸಿದ್ದಾರೆ. ಎಂಎಸ್‌ಎಂಇಗಳಿಗೆ ಅಡಮಾನರಹಿತವಾಗಿ ನೀಡಲಾಗುವ ಸಾಲದ ಮಿತಿಯನ್ನು ಎರಡು ಪಟ್ಟು ಹೆಚ್ಚಿಸಲಾಗಿದೆ. 10 ಲಕ್ಷ ರೂ ಇದ್ದ ಇಂಥ ಸಾಲದ ಮಿತಿಯನ್ನು 20 ಲಕ್ಷ ರೂಗೆ ಹೆಚ್ಚಿಸಲಾಗಿದೆ.

ಇದರೊಂದಿಗೆ, ಎಂಎಸ್‌ಎಂಐಗಳು ಯಾವುದೇ ಸೆಕ್ಯೂರಿಟಿ ಒದಗಿಸುವ ಅಗತ್ಯವಿದ್ದಲ್ಲಿ 20 ಲಕ್ಷ ರೂವರೆಗೆ ಸಾಲ ಪಡೆಯಲು ಅವಕಾಶವಿರುತ್ತದೆ. ಈ ಕ್ರಮವು ಮಧ್ಯಮ ಮತ್ತು ಸಣ್ಣ ಉದ್ದಿಮೆಗಳಿಗೆ ಸುಲಭ ಸಾಲಕ್ಕೆ ಅವಕಾಶ ನೀಡುತ್ತದೆ. ಎಂಎಸ್‌ಎಂಇಗಳು ದೇಶದ ಅರ್ಥ ವ್ಯವಸ್ಥೆಯ ಪ್ರಮುಖ ಭಾಗವಾಗಿರುವುದರಿಂದ, ಅವರ ಆರೋಗ್ಯ ಕಾಪಾಡಲು ಸರ್ಕಾರ ತೆಗೆದುಕೊಂಡ ಕ್ರಮಗಳಲ್ಲಿ ಇದು ಒಂದು.

ಇದನ್ನೂ ಓದಿ: ರಿಪೋ ಬಡ್ಡಿದರ ಶೇ. 5.25ರಲ್ಲಿ ಮುಂದುವರಿಸಿದ ಆರ್ಬಿಐ

ಸಣ್ಣ ಎನ್‌ಬಿಎಫ್‌ಸಿಗಳಿಗೆ ನೊಂದಣಿಯಿಂದ ವಿನಾಯಿತಿ

1,000 ಕೋಟಿ ರೂಗಿಂತ ಕಡಿಮೆ ಫಂಡಿಂಗ್ ಹೊಂದಿರುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ನೊಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. ಹೆಚ್ಚಿನ ಗಾತ್ರದ ಎನ್ ಬಿಎಫ್ ಸಿಗಳು ಮಾತ್ರ ಕಡ್ಡಾಯವಾಗಿ ನೊಂದಣಿ ಮಾಡಿಸಬೇಕು.

ಹಾಗೆಯೇ, ಕೆಲ ಎನ್ ಬಿಎಫ್ ಸಿಗಳು 1,000ಕ್ಕಿಂತ ಹೆಚ್ಚು ಶಾಖೆಗಳನ್ನು ತೆರೆಯಲು ಮುಂಗಡವಾಗಿ ಅನುಮತಿ ಪಡೆಯಲು ಬೇಕಾದ ನಿಯಮವನ್ನೂ ಸಡಿಲಿಸಲಾಗಿದೆ.

ಇದನ್ನೂ ಓದಿ: ವಾಣಿಜ್ಯಾತ್ಮಕವಾಗಿ ಲಾಭವಿದ್ದರೆ ವೆನೆಜುವೆಲಾದಿಂದಲೂ ತೈಲ ಪಡೆಯುತ್ತೇವೆ: ಭಾರತ ಸರ್ಕಾರದ ಹೇಳಿಕೆ

ಪೇಮೆಂಟ್ ವಂಚನೆಯಾದರೆ 25,000 ರೂ. ಪರಿಹಾರ

ಇದೆ ವೇಳೆ, ಆರ್ಬಿಐ ಗವರ್ನರ್ ಅವರು ಪೇಮೆಂಟ್ ವಂಚನೆಗೊಳಗಾದವರು 25,000 ರೂವರೆಗೆ ಪರಿಹಾರ ಒದಗಿಸುವ ಒಂದು ವ್ಯವಸ್ಥೆ ತರುತ್ತದ ಆವೃತ್ತಿ ಪ್ರಕಟಿಸಲಾಗಿದೆ. ಇದು ಸಣ್ಣ ಮೊತ್ತದ ವಂಚನೆಗೆ ಸಿಗಬಹುದಾದ ಪರಿಹಾರ. ಎಂಥ ಟ್ರಾನ್ಸಾಕ್ಷನ್ಗಳಿಗೆ ಇದು ಅನ್ವಯವಾಗುತ್ತದೆ ಎಂಬಿತ್ಯಾದಿ ಮಾಹಿತಿ ಗೊತ್ತಾಗಬೇಕಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *