ಬೆಂಗಳೂರು: ಮುಂಬರುವ 2026ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಂದ್ಯಗಳು ನಗರದ ಎಂ ಚಿನ್ನಸ್ವಾಮಿ ಸ್ಟೇಡಿಯಂನಿಂದ ಬೇರೆ ಕಡೆ ಶಿಫ್ಟ್ ಆಗಲಿದೆ ಎನ್ನುವ ಸುದ್ದಿ ಜೋರಾಗಿ ಕೇಳಿ ಬರುತ್ತಿರುವ ಬೆನ್ನಲ್ಲೇ, ಆರ್‌ಸಿಬಿ ಫ್ರಾಂಚೈಸಿಯು ಇದೀಗ ಅಧಿಕೃತ ಅಪ್‌ಡೇಟ್ಸ್ ನೀಡಿದೆ.

2026ರ ಐಪಿಎಲ್ ಟೂರ್ನಿ ಅರಂಭಕ್ಕೂ ಮುನ್ನ ಎಲ್ಲಾ ಅಭಿಮಾನಿಗಳ ಚಿತ್ತ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೇಲಿದೆ. ಯಾಕೆಂದರೆ ಆರ್‌ಸಿಬಿ ತಂಡವು ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಡಲು ಒಲವು ತೋರುತ್ತಿಲ್ಲ ಎಂದೆಲ್ಲಾ ವರದಿಯಾಗಿತ್ತು.

ಕಳೆದ ಜೂನ್ 04ರಂದು ನಡೆದ ಆರ್‌ಸಿಬಿ ಸಂಭ್ರಮಾಚರಣೆ ವೇಳೆಯಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತದಲ್ಲಿ 11 ಮಂದಿ ಕೊನೆಯುಸಿರೆಳೆದಿದ್ದರು. ಇದಾದ ಬಳಿಕ ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಪಂದ್ಯಗಳು ನಡೆದಿಲ್ಲ.

ಒಂದು ವೇಳೆ ಕರ್ನಾಟಕ ರಾಜ್ಯ ಸರ್ಕಾರವೇ ಐಪಿಎಲ್ ಆಯೋಜಿಸಲು ಅನುಮತಿ ನೀಡಿದರೂ, ಆರ್‌ಸಿಬಿ ಫ್ರಾಂಚೈಸಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯವನ್ನಾಡಲು ಮನಸ್ಸು ಮಾಡಿತ್ತಿಲ್ಲ ಎಂದು ವರದಿಯಾಗಿತ್ತು.

ಇದೆಲ್ಲದರ ನಡುವೆ ಕೆಲ ದಿನಗಳ ಹಿಂದಷ್ಟೇ ನಡೆದ ಬೆಳವಣಿಗೆಯಲ್ಲಿ ಆರ್‌ಸಿಬಿ ತಂಡವು ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಐದು ಹಾಗೂ ರಾಯ್ಪುರದಲ್ಲಿ ಎರಡು ಪಂದ್ಯಗಳನ್ನು ಆಡಲು ರೆಡಿಯಾಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ ಎಂದೆಲ್ಲಾ ವರದಿಯಾಗಿತ್ತು.

ಇದೀಗ ಈ ಎಲ್ಲಾ ಸುದ್ದಿಗಳ ನಡುವೆ ಆರ್‌ಸಿಬಿ ಫ್ರಾಂಚೈಸಿಯು ತನ್ನ ಅಧಿಕೃತ ಮಾಹಿತಿ ಹಂಚಿಕೊಂಡಿದ್ದು, ಅಭಿಮಾನಿಗಳ ಸುರಕ್ಷತೆಯನ್ನು ಸುಧಾರಿಸಲು, ಪ್ರೇಕ್ಷಕರ ನಿರ್ವಹಣೆಯನ್ನು ಹೆಚ್ಚಿಸಲು ಆರ್‌ಸಿಬಿ ಫ್ರಾಂಚೈಸಿಯು ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 300ರಿಂದ 350 AI ಆಧಾರಿತ ಸಕ್ರಿಯ ಕ್ಯಾಮರಾಗಳನ್ನು ಅಳವಡಿಸುವ ಪ್ರಸ್ತಾವನೆಯನ್ನು ಕೆಎಸ್‌ಸಿಎ ಮುಂದಿಟ್ಟಿದೆ.

ಆರ್‌ಸಿಬಿ ಪ್ರಕಾರ, ಪ್ರಸ್ತಾವಿತ AI ವ್ಯವಸ್ಥೆಯು, ಕಾಲ್ತುಳಿತದಂತಹ ಹಿಂಸೆ, ಜನಸಂದಣಿ ಮತ್ತು ಅನಧಿಕೃತ ಪ್ರವೇಶದಂತಹ ಘಟನೆಗಳನ್ನು ಪತ್ತೆಹಚ್ಚಲು ಈ ರಿಯಲ್ ಟೈಮ್ ವಿಡಿಯೋ ವಿಶ್ಲೇಷಣೆ ನೀಡಲು ಈ ಎಐ ಆಧಾರಿತ ಕ್ಯಾಮರಗಳು ನೆರವಾಗಲಿವೆ.

ಈ ಸುಧಾರಿತ ಕಣ್ಗಾವಲು ಕ್ಯಾಮರ ವ್ಯವಸ್ಥೆಯು ಕೆಎಸ್‌ಸಿಎ ಮತ್ತು ಪೊಲೀಸ್ ಅಧಿಕಾರಿಗಳಿಗೆ ಜನಸಂದಣಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು, ಶಿಸ್ತುಬದ್ದ ಸರತಿ ಸಾಲಿನಲ್ಲಿ ನಿಲ್ಲುವುದನ್ನು ಖಚಿತಪಡಿಸಿಕೊಳ್ಳಲು ಒಟ್ಟಾರೆ ಅಭಿಮಾನಿಗಳ ಸುರಕ್ಷತೆಯನ್ನು ಗಮರ್ನಾಹವಾಗಿ ಹೆಚ್ಚಿಸಲು ನೆರವಾಗಲಿದ ಎಂದು ಆರ್‌ಸಿಬಿ ಫ್ರಾಂಚೈಸಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

’ಸುಮಾರು 4.5 ಕೋಟಿ ರುಪಾಯಿ ವೆಚ್ಚದ ಈ ಯೋಜನೆಯನ್ನು ಆರ್‌ಸಿಬಿ ಕೇರ್ಸ್ ಮೂಲಕ ಭರಿಸಲು ಆರ್‌ಸಿಬಿ ಫ್ರಾಂಚೈಸಿಯು ಬದ್ದವಾಗಿರುವುದಾಗಿ ತಿಳಿಸಿದೆ. ಆರ್‌ಸಿಬಿ ಫ್ರಾಂಚೈಸಿಯು ಈಗಾಗಲೇ ಭಾರತದಾದ್ಯಂತ ಹಲವಾರು ರಾಜ್ಯ ಪೊಲೀಸ್ ಪಡೆಗಳೊಂದಿಗೆ ನಿಕಟವಾಗಿ ಕೆಲಸ ಮಾಡಿರುವ ತಂತ್ರಜ್ಞಾನ ಸಂಸ್ಥೆಯಾದ ಸ್ಟಾಕ್ ಜತೆ ಆರ್‌ಸಿಬಿ ಫ್ರಾಂಚೈಸಿಯು ಪಾಲುದಾರಿಕೆ ಹೊಂದಿದೆ.

ಆರ್‌ಸಿಬಿ ತನ್ನ ಹೋಮ್ ಗ್ರೌಂಡ್ ಬೇರೆಡೆಗೆ ಶಿಫ್ಟ್ ಮಾಡಲಿದೆ ಎಂದು ಗಾಳಿ ಸುದ್ದಿ ಜೋರಾಗಿರುವ ಬೆನ್ನಲ್ಲೇ ಆರ್‌ಸಿಬಿ ಫ್ರಾಂಚೈಸಿಯ ಈ ನಡೆ, ಪರೋಕ್ಷವಾಗಿ ಐಪಿಎಲ್ ಪಂದ್ಯಗಳು ಬೆಂಗಳೂರಿನಲ್ಲೇ ಆಯೋಜಿಸಲು ಆರ್‌ಸಿಬಿ ಫ್ರಾಂಚೈಸಿ ಒಲವು ತೋರಿದಂತೆ ಕಂಡು ಬರುತ್ತಿದೆ.

Source link
ಆರ್‌ಸಿಬಿ ಮ್ಯಾಚ್ ಬೆಂಗಳೂರು ಬಿಟ್ ಎಲ್ಲಿಗೂ ಶಿಫ್ಟ್ ಆಗೊಲ್ಲ! ಮಹತ್ವದ ಅಪ್‌ಡೇಟ್ಸ್ ಕೊಟ್ಟ ಬೆಂಗಳೂರು ಫ್ರಾಂಚೈಸಿ