ಇಂಡಿಯನ್ ಪ್ರಿಮಿಯರ್ ಲೀಗ್‌ನ (IPL) ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿಯ ಸ್ಥಾನಕ್ಕೆ ಬದಲಾಗುವುದು ಖಚಿತವಾಗಿದೆ. ಅದು ಕೂಡ ಮುಂದಿನ ಐಪಿಎಲ್ ಸೀಸನ್ ಮುಂಚಿತವಾಗಿ..! ಹೌದು, ಆರ್ಸಿಬಿ ಫ್ರಾಂಚೈಸಿಯನ್ನು ಮಾರಾಟ ಮಾಡಲು ಡಿಯಾಜಿಯೋ ಕಂಪನಿ ಮುಂದಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಾರಾಟಕ್ಕಿಡಲಾಗುತ್ತಿರುವ ಬಗ್ಗೆ ಖುದ್ದು ಡಿಯಾಜಿಯೊ ಮಾಹಿತಿ ನೀಡಿದೆ. ಜೊತೆಗೆ “ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ (RCSPL) ನಲ್ಲಿನ ಹೂಡಿಕೆಯ ಮೌಲ್ಯಮಾಪನಕ್ಕೆ ಮುಂದಾಗಿದೆ.
“USL ತನ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ RCSPL ನಲ್ಲಿ ಹೂಡಿಕೆಯ ಕಾರ್ಯತಂತ್ರದ ಪರಿಶೀಲನೆಯನ್ನು ಪ್ರಾರಂಭಿಸುತ್ತಿದೆ” ಎಂದು ಕಂಪನಿಯು ತನ್ನ ಪ್ರಕಟಣೆಯಲ್ಲಿದೆ. RCSPL ನ ವ್ಯವಹಾರವು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ವಾರ್ಷಿಕವಾಗಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮತ್ತು ಮಹಿಳಾ ಪ್ರೀಮಿಯರ್ ಲೀಗ್ (WPL) ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಭಾಗವಹಿಸುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸ್ ತಂಡಗಳ ಮಾಲೀಕತ್ವವನ್ನು ಒಳಗೊಂಡಿದೆ.
ಷೇರು ವಿನಿಮಯ ಕೇಂದ್ರಕ್ಕೆ ಬರೆದಿರುವ ಕವರಿಂಗ್ ಲೆಟರ್‌ನಲ್ಲಿ, ಡಿಯಾಜಿಯೊ ಮತ್ತು ಯುಎಸ್‌ಡಿಎಲ್, ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾದ ನಿಯಮ 30 ರ ಅಡಿಯಲ್ಲಿ ಫ್ರಾಂಚೈಸಿಯ ಮಾರಾಟವನ್ನು ಕುರಿತು ತಿಳಿಸಲಾಗಿದೆ. ಜೊತೆಗೆ ಈ ಪ್ರಕ್ರಿಯೆಯು ಮಾರ್ಚ್ 31, 2026 ರೊಳಗೆ ಪೂರ್ಣಗೊಂಡಿದೆ ಎಂದು ಹೇಳಲಾಗಿದೆ. ಅಂದರೆ ಮುಂದಿನ ಸೀಸನ್ ಐಪಿಎಲ್ ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಬದಲಾಗುವುದು ಖಚಿತ.
ಇದಕ್ಕೂ ಮುನ್ನ ಐಪಿಎಲ್‌ನ ಮಾಜಿ ಅಧ್ಯಕ್ಷ ಲಲಿತ್ ಮೋದಿ, ಡಿಯಾಜಿಯೊ ಕಂಪನಿಯು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯನ್ನು ಮಾರಾಟ ಮಾಡಲು ಮುಂದಾಗಿದೆ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: WPL 2026: RCB ನಾಲ್ವರನ್ನು ಮಾತ್ರ ಉಳಿಸಿಕೊಳ್ಳಲು ಇದು ಅಸಲಿ ಕಾರಣ..!
ಜೊತೆಗೆ ಐಪಿಎಲ್ 2026 ಕ್ಕೂ ಮುನ್ನ ಒಟ್ಟಾರೆಯಾಗಿ ಏಕೈಕ ತಂಡವಾಗಿ ಆರ್ಸಿಬಿ ಮಾರಾಟವಾಗಿದೆ. ಬಿಗ್ ಗ್ಲೋಬಲ್ ಫಂಡ್‌ಗಳಲ್ಲಿ ಒಂದು ಅಥವಾ ಬೃಹತ್ ಹೂಡಿಕೆದಾರರು ಆರ್ಸಿಬಿ ತಂಡವನ್ನು ಖರೀದಿಸುವ ಸಾಧ್ಯತೆಯಿದೆ ಎಂದು ಲಲಿತ್ ಮೋದಿ ತಿಳಿಸಿದ್ದಾರೆ. ಅದರಂತೆ ಇದೀಗ ಡಿಯಾಜಿಯೋ ಕಂಪನಿ ಆರ್ಸಿಬಿ ಫ್ರಾಂಚೈಸಿಯ ಮಾರಾಟಕ್ಕೆ ಮುಂದಾಗಿದೆ, ಬೆಂಗಳೂರು ಫ್ರಾಂಚೈಸಿಯನ್ನು ಯಾರು ಖರೀದಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ಆರ್ಸಿಬಿ ಫ್ರಾಂಚೈಸಿಯ ಮೌಲ್ಯ ಎಷ್ಟು?
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪುರುಷರ ತಂಡದ ಮೌಲ್ಯ ಸುಮಾರು 17 ಸಾವಿರ ಕೋಟಿ ರೂ. ಜೊತೆಗೆ ಮಹಿಳಾ ತಂಡದ ಮೌಲ್ಯ 3 ರಿಂದ 5 ಸಾವಿರ ಕೋಟಿ ಇರಬಹುದು. ಹೀಗಾಗಿ ಆರ್ಸಿಬಿ ಫ್ರಾಂಚೈಸಿಯನ್ನು ಅಂದಾಜು 25 ಸಾವಿರ ಕೋಟಿ ರೂ.ಗೆ ಡಿಯಾಜಿಯೋ ಕಂಪನಿ ಮಾರಾಟ ಮಾಡುವ ಸಾಧ್ಯತೆಯಿದೆ.