Headlines

ಆರ್​​ಸಿಬಿ ಹೆಸರು ಬದಲಾವಣೆ ವಿಷಯ; ಅಭಿಮಾನಿಗಳಿಗೆ ಗುಡ್​ನ್ಯೂಸ್ ಕೊಟ್ಟ ಅನನ್ಯಾ ಬಿರ್ಲಾ

ಆರ್​​ಸಿಬಿ ಹೆಸರು ಬದಲಾವಣೆ ವಿಷಯ; ಅಭಿಮಾನಿಗಳಿಗೆ ಗುಡ್​ನ್ಯೂಸ್ ಕೊಟ್ಟ ಅನನ್ಯಾ ಬಿರ್ಲಾ


ಆರ್ಸಿಬಿ ಹೆಸರು ಬದಲಾವಣೆ ವಿಷಯ; ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟ ಅನನ್ಯ ಬಿರ್ಲಾ

ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಆರ್ ಸಿಬಿ (RCB) ತಂಡವನ್ನು ಆದಿತ್ಯ ಬಿರ್ಲಾ ಗ್ರೂಪ್‌ಗೆ ಮಾರಾಟ ಮಾಡಿದೆ. 16,706 ಕೋಟಿ ರೂಪಾಯಿಗೆ ಈ ಡೀಲ್ ಸಿಕ್ಕಿದೆ. ಟೈಮ್ಸ್ ಆಫ್ ಇಂಡಿಯಾ ಸೇರಿ ಕೆಲವು ಕಂಪನಿಗಳು ಆದಿತ್ಯಾ ಬಿರ್ಲಾಗೆ ಬೆಂಬಲ ನೀಡಿವೆ. ಈ ಮಧ್ಯೆ ಆರ್ ಸಿಬಿ ಹೆಸರು ಬದಲಾವಣೆ ಆಗುವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ವದಂತಿ ಬಗ್ಗೆ ಅನನ್ಯ ಬಿರ್ಲಾ ಸ್ಪಷ್ಟನೆ ಕೊಟ್ಟಿದ್ದಾರೆ. ಈ ವಿಷಯಗಳಿಗೆ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ರಾಯಲ್ ಚಾಲೆಂಜ್ ವಿಸ್ಕಿ ಬ್ರ್ಯಾಂಡ್ ಪ್ರಚಾರ ಮಾಡುವ ಉದ್ದೇಶದಿಂದ ವಿಜಯ್ ಮಲ್ಯ ಅವರು ರಾಯಲ್ ಚಾಲೆಂಜ್ ಹೆಸರನ್ನು ಆಯ್ಕೆ ಮಾಡಿಕೊಂಡಿದ್ದರು. ಮಲ್ಯ ಬೆಂಗಳೂರಿನವರು. ಹೀಗಾಗಿ, ತಂಡದಲ್ಲಿ ಬೆಂಗಳೂರು ಬರುವಂತ ನೋಡಿಕೊಂಡರು. ಎಲ್ಲವನ್ನೂ ಸೇರಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಹೆಸರು ಇಟ್ಟರು. ಈ ಹೆಸರು ಈಗ ಅಭಿಮಾನಿಗಳ ಜೊತೆ ಭಾವನಾತ್ಮಕವಾಗಿ ಕನೆಕ್ಟ್ ಆಗಿದೆ. ಹೀಗಾಗಿ, ಹೆಸರು ಬದಲಿಸಿದಂತೆ ಕೋರಿಕೊಳ್ಳಬಹುದು. ಇದಕ್ಕೆ ಅನನ್ಯ ಪಾಸಿಟಿವ್ ಆಗಿದ್ದಾರೆ.

ಈ ಮೊದಲು ಆರ್ಸಿಬಿ ಹೆಸರು ಇಂಗ್ಲಿಷ್ ಅಲ್ಲಿ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ಎಂದಿತ್ತು. ನಂತರ ಬೆಂಗಳೂರು ಎಂದು ಬೆಂಗಳೂರು ಎಂದು ಬದಲಿಸಲಾಗಿದೆ. ಈ ಮೂಲಕ ಕನ್ನಡಿಗರ ಭಾವನೆಗೆ ಬೆಲೆ ಕೊಡಲಾಗಿದೆ. ಈಗ ಹೊಸ ಆಯ್ಕೆ ತಂಡವನ್ನು ಬದಲಿಸುತ್ತಾರೆ ಎಂದು ಹೇಳಲಾಗುತ್ತಾ ಬರಲಾಯಿತು. ಆದರೆ, ಆ ರೀತಿ ಇಲ್ಲ ಎಂಬುದು ಅನನ್ಯಾ ಸ್ಪಷ್ಟನೆ. ‘ಆರ್‌ಸಿಬಿ ಹೆಸರು ಬದಲಾಗುವುದಿಲ್ಲ’ ಎಂದು ಇನ್ಸ್ಟಾ ಸ್ಟೇಟಸ್‌ನಲ್ಲಿ ಹಂಚಿಕೊಳ್ಳಲಾದ ಪೋಸ್ಟ್ ಅನ್ನು ಅನನ್ಯ ಶೇರ್ ಮಾಡಿಕೊಂಡಿದ್ದಾರೆ. ಈ ಮೂಲಕ ಅಭಿಮಾನಿಗಳ ಆತಂಕವನ್ನು ದೂರ ಮಾಡಿದೆ.

ಇದನ್ನೂ ಓದಿ: RCB ಮಾರಾಟದ ಬೆನ್ನಲ್ಲೇ ಮಹತ್ವದ ಕೋರಿಕೆ ಇಟ್ಟ ವಿಜಯ್ ಮಲ್ಯ

ಇಷ್ಟು ದಿನಗಳ ಕಾಲ ಹೈದರಾಬಾದ್ ತಂಡವಾದ ಕಾವ್ಯಾ ಮಾರನ್ ಅವರು ಸಾಕಷ್ಟು ಮಿಂಚುತ್ತಿದ್ದಾರೆ. ಅವರಿಗೆ ಕಾಂಪಿಟೇಷನ್ ಕೊಡೋಕೆ ಅನನ್ಯ ಬಂದಿದ್ದಾರೆ ಎಂಬ ಮಾತು ಕೂಡ ಕೇಳಿ ಬಂದಿದೆ. ಹೀಗಾಗಿ, ಆರ್ಸಿಬಿ ಪಂದ್ಯಗಳಲ್ಲಿ ಇವರು ಹೈಲೈಟ್ ಆಗಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.

 



Source link

Leave a Reply

Your email address will not be published. Required fields are marked *