Headlines

ಆರ್​​​ಸಿಬಿ ಮಾರಾಟದಿದ ವಿಜಯ್ ಮಲ್ಯಗೆ ಸಿಕ್ಕ ಹಣ ಎಷ್ಟು?

ಆರ್​​​ಸಿಬಿ ಮಾರಾಟದಿದ ವಿಜಯ್ ಮಲ್ಯಗೆ ಸಿಕ್ಕ ಹಣ ಎಷ್ಟು?


ಆರ್ಸಿಬಿ ಮಾರಾಟದ ವಿಜಯ್ ಮಲ್ಯಗೆ ಸಿಕ್ಕ ಹಣ ಎಷ್ಟು?

ಐಪಿಎಲ್ ನಲ್ಲಿ ಸಾಕಷ್ಟು ಹೆಸರು ಮಾಡಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾರಾಟ ನಡೆದಿದೆ. 16,600 ಕೋಟಿ ರೂಪಾಯಿಗೆ ಈ ಡೀಲ್ ನಡೆದಿದೆ. ಆದಿತ್ಯ ಬಿರ್ಲಾ ಗ್ರೂಪ್ ನೇತೃತ್ವದ ಒಕ್ಕೂಟವು ಇದನ್ನು ಖರೀದಿಸಿದೆ. ಬಿಸಿಯಾದ ಒಪ್ಪಿಗೆ ಬಳಿಕ ತಂಡ ಅಧಿಕೃತವಾಗಿ ಆದಿತ್ಯ ಬಿರ್ಲಾ ಗ್ರೂಪ್ ತೆಕ್ಕೆಗೆ ಸೇರಲಿದೆ. ಈ ತಂಡವನ್ನು ಮೊದಲು ಖರೀದಿಸಿದ್ದು ಮಲ್ಯ. ಹಾಗಾದರೆ, ಆರ್ಸಿಬಿ ತಂಡದ ಮಾರಾಟದಿಂದ ಅವರಿಗೆ ಸಿಕ್ಕ ಹಣ ಎಷ್ಟು? ಆ ಬಗ್ಗೆ ಇಲ್ಲಿದೆ ವಿವರ.

ಮಲ್ಯ ಅವರು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (ಯುಎಸ್ ಎಲ್) ಒಡೆತನಿದ್ದರು. ರಾಯಲ್ ಚಾಲೆಂಜ್ ವಿಸ್ಕಿ ಬ್ರ್ಯಾಂಡ್ ಪ್ರಚಾರಕ್ಕಾಗಿ ವಿಜಯ್ ಮಲ್ಯ ಅವರು 2008ರಲ್ಲಿ 446 ಕೋಟಿ ರೂಪಾಯಿ ಕೊಟ್ಟು ಐಪಿಎಲ್ ತಂಡವನ್ನು ಖರೀದಿಸಿದರು. ಈ ತಂಡಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಹೆಸರಿಟ್ಟರು. ಕ್ರಿಕೆಟ್ ಕ್ಷೇತ್ರ, ವಿಸ್ಕಿ ಬ್ರ್ಯಾಂಡ್ ಪ್ರಚಾರಕ್ಕೂ ಏನು ಸಂಬಂಧ ಎಂದು ಎಲ್ಲರೂ ನಕ್ಕರು. ಆದರೆ, ಊಹೆ ತಪ್ಪಾಗಿತ್ತು. ಆರ್ಸಿಬಿ ತಂಡ ಬಹುಬೇಗನೆ ತನ್ನ ಮೌಲ್ಯವನ್ನು ಹೆಚ್ಚಿಸಿಕೊಂಡಿತು.

2012 ರಲ್ಲಿ ಬ್ರಿಟಿಷ್ ಮೂಲದ ಡಿಯಾಜಿಯೋ ಕಂಪನಿ ಮಲ್ಯ ಅವರ ಯುಎಸ್‌ಡಿಎಲ್‌ನ ಶೇ.53.4 ಶೇರನ್ನು ಖರೀದಿಸಿತು. ಈ ಡೀಲ್ 11,166 ಕೋಟಿ ರೂಪಾಯಿಗೆ. ಆರಂಭದಲ್ಲಿ ಮಲ್ಯಗೆ 3,635 ಕೋಟಿ ರೂಪಾಯಿ ಸಿಕ್ಕಿತು. 2013-14ರ ಅವಧಿಯಲ್ಲಿ ಮಲ್ಯ ಅವರ ಕಿಂಗ್ ಫಿಶರ್ ಏರ್‌ಲೈನ್ಸ್ ಮುಳಗಿ ಸ್ಥಗಿತಗೊಂಡಿತು. 9000 ಕೋಟಿ ರೂಪಾಯಿ ಸಾಲವನ್ನು ಹೊಂದಿದ್ದರು. ಯುಎಸ್ಎಎಲ್ ಮಾರಾಟದಿಂದ ಬಂದ ಹಣವನ್ನು (1,225 ಕೋಟಿ ರೂಪಾಯಿ) ಮಲ್ಯ ಎಫ್ 1ತಂಡ, ಏರ್ಲೈನ್ಸ್ ಮತ್ತು ವಿದೇಶಿ ಖಾತೆಗೆ ವರ್ಗಾವಣೆ ಮಾಡಲಾಗಿದೆ.

ಡಿಯಾಜಿಯೋ ಯುಎಸ್ಎಎಲ್ ಸ್ಟೇಕ್ಸ್ನ ಶೇ.56ಕ್ಕೆ ಏರಿಕೆಯಾಯಿತು. ಆ ಸಂದರ್ಭದಲ್ಲಿ ಮಲ್ಯ ಅವರು ಅಧ್ಯಕ್ಷ ಸ್ಥಾನದಿಂದ ಕೆಳಕ್ಕೆ ಇಳಿದರು. ಹೆಚ್ಚುವರಿ ಷೇರುಗಳಿಗಾಗಿ ಅವರಿಗೆ 515 ಕೋಟಿ ರೂಪಾಯಿಗಳನ್ನು ಪಾವತಿಸಲಾಗಿದೆ.2016ರಲ್ಲಿ ಮಲ್ಯ ಅವರು 17 ಸಾವಿರ ಕಿಂಗ್ ಫಿಶರ್ ಸಾಲದೊಂದಿಗೆ ಇಂಗ್ಲೆಂಡ್‌ಗೆ ಹಾರಿದರು. ಈ ವೇಳೆ ಯುಎಸ್ಡ್ ಸಂಪೂರ್ಣವಾಗಿ ಡಿಯಾಜಿಯೋ ಟೆಕ್ಕೆಗೆ ಸ್ಥಗಿತಗೊಂಡಿದೆ. ಆ ಸಂದರ್ಭದಲ್ಲಿ ಆರ್ಸಿಬಿ ವ್ಯಾಲ್ಯೂ 1,200 ಕೋಟಿ ರೂಪಾಯಿ ಎಂದು ಪರಿಗಣಿಸಿ ಡಿಯಾಜಿಯೋ ಸಂಪೂರ್ಣವಾಗಿ ತಮ್ಮ ತೆಕ್ಕೆಗೆ ತೆಗೆದುಕೊಂಡಿತು. ಈ ಮೂಲಕ ಮಲ್ಯ ಅವರ ಬಳಿ ಯಾವುದೇ ಷೇರು ಉಳಿದುಕೊಂಡಿರಲಿಲ್ಲ.

ಇದನ್ನೂ ಓದಿ: RCB ಮಾರಾಟದ ಬೆನ್ನಲ್ಲೇ ಮಹತ್ವದ ಕೋರಿಕೆ ಇಟ್ಟ ವಿಜಯ್ ಮಲ್ಯ

2026ರಲ್ಲಿ ಡಿಯಾಜಿಯೋ 16,660 ಕೋಟಿ ರೂಪಾಯಿಗೆ ಐಪಿಎಲ್ ತಂಡವನ್ನು ಮಾರಾಟ ಮಾಡಿತು. ಇದರಿಂದ ಯುಎಸ್‌ಡಿಗೆ ಲಾಭವಾಗಿದೆ. ಮಲ್ಯ ಅದರಲ್ಲಿ ಹಣ ಸಿಕ್ಕಿಲ್ಲದ ಕಾರಣ ಅವರಿಗೆ ಯಾವುದೇ ಹಣ ಸಿಕ್ಕಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.

 





Source link

Leave a Reply

Your email address will not be published. Required fields are marked *