RCB-CSK ಪಂದ್ಯ: ಸ್ಟೇಡಿಯಂ ಬಳಿ ಅನುಮಾನಾಸ್ಪದವಾಗಿ ಓಡಾಡ್ತಿದ್ದ 8 ಜನ ಪೊಲೀಸ್ ವಶಕ್ಕೆ

RCB-CSK ಪಂದ್ಯ: ಸ್ಟೇಡಿಯಂ ಬಳಿ ಅನುಮಾನಾಸ್ಪದವಾಗಿ ಓಡಾಡ್ತಿದ್ದ 8 ಜನ ಪೊಲೀಸ್ ವಶಕ್ಕೆ


RCB-CSK ಪಂದ್ಯ: ಸ್ಟೇಡಿಯಂ ಬಳಿ ಅನುಮಾನಾಸ್ಪದವಾಗಿ ಪತ್ತೆಯಾದ 8 ಜನ ಪೊಲೀಸ್ ವಶಕ್ಕೆ

ಬೆಂಗಳೂರು, ಏಪ್ರಿಲ್ 05: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ಸಂಜೆ 7.30ಕ್ಕೆ ಆರ್ಸಿಬಿ (RCB) ಹಾಗೂ ಚೆನ್ನೈ ತಂಡದ ನಡುವೆ ಹೈವೋಲ್ಟೇಜ್ ಪಂದ್ಯ. ಪಂದ್ಯ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾತರರಾಗಿದ್ದರೆ, ಕ್ರೀಡಾಂಗಣದತ್ತ ಆಗಮಿಸುತ್ತಿದ್ದಾರೆ. ಕೇಂದ್ರದ ಬಳಿ ಬಿಗಿ ಪೊಲೀಸ್ ಭದ್ರತೆ ಇದೆ, ಎಲ್ಲರ ಪರಿಶೀಲನೆ ನಡೆಸಿ ಒಳ ಬಿಡುತ್ತಿದೆ. ಈ ಮಧ್ಯೆ ಅನುಮಾನಸ್ಪದವಾಗಿ ಪತ್ತೆ ಮಾಡುತ್ತಿದ್ದ ಜಾರ್ಖಂಡ್ ಮೂಲದ ನಾಲ್ವರು ಸೇರಿ ಒಟ್ಟು 8 ಜನರನ್ನು ಬಂಧಿಸಿದ್ದಾರೆ.

ಕಳ್ಳತನ ಮಾಡಿದರೆ ಕಟ್ಟುನಿಟ್ಟಿನ ಕ್ರಮ ಎಂದ ಸೀಮಂತ್ ಕುಮಾರ್ ಸಿಂಗ್

ಇತ್ತೀಚೆಗೆ ಮೊಬೈಲ್ ಕಳ್ಳತನ ಹಿನ್ನೆಲೆ ಉತ್ತರ ಭಾರತದಿಂದ ಬಂದಿದ್ದ ಕೆಲವರನ್ನು ಬಂಧಿಸಿದ್ದರು. ಇದೀಗ ಅನುಮಾನಸ್ಪದವಾಗಿ ಪತ್ತೆಯಾದವರನ್ನು ವಶಕ್ಕೆ ಪಡೆದಿರುವ ದಾಖಲೆ ಪತ್ರ ಮತ್ತು ಟಿಕೆಟ್ ಎಲ್ಲವನ್ನೂ ಪರಿಶೀಲಿಸುತ್ತಿದೆ. ಇನ್ನು ಪಿಕ್ ಪಾಕೆಟ್ ಮಾಡಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

72 ಮೊಬೈಲ್ ಕದ್ದಿದ್ದ 13 ಮಂದಿ ಅರೆಸ್ಟ್

ಇತ್ತೀಚೆಗೆ ಅಂದರೆ ಮಾರ್ಚ್ 28 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಆರ್‌ಸಿಬಿ ಮಧ್ಯದಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಯಿತು. ಪಂದ್ಯ ನೋಡ್ತಾ ಫ್ಯಾನ್ಸ್ ಕುಣಿದು ಕುಪ್ಪಳಿಸುತ್ತಿರುತ್ತಾರೆ, ಅಪ್ರಾಪ್ತ ಹುಡುಗರ ಗ್ಯಾಂಗ್ ಮೊಬೈಲ್ ಗಳನ್ನ ಸದ್ದಿಲ್ಲದೆ ಕಡಿಯುತ್ತಿದ್ದರು. ಒಂದಲ್ಲ, ಎರಡಲ್ಲ, ಬರೋಬ್ಬರಿ 72 ಮೊಬೈಲ್‌ಗಳನ್ನು ಸೈಲೆಂಟಾಗಿ ದೋಚಿದ್ದರು.

ಇದನ್ನೂ ಓದಿ: ಬಂದಿದ್ದು ಜಾರ್ಖಂಡ್ ನಿಂದ, ಧರಿಸಿದ್ದು ಆರ್ಸಿಬಿ ಜೆರ್ಸಿ, ಮಾಡಬಾರದ ಕೆಲಸ ಮಾಡಿ ಪೊಲೀಸ್ ಬಲೆಗೆ ಬಿದ್ದ ಖದೀಮರು!

ಹೀಗೆ 72 ಮೊಬೈಲ್ ಕದ್ದ 9 ಅಪ್ರಾಪ್ತರು ಸೇರಿ 13 ಮಂದಿಯನ್ನ ಅರೆಸ್ಟ್ ಮಾಡಲಾಗಿದೆ. ಜಾರ್ಖಂಡ್ ನಿಂದ ಅಪ್ರಾಪ್ತರ ಗ್ಯಾಂಗ್ ಕಟ್ಕೊಂಡು ಬಂದಿದ್ದ ಸೋಹನ್ ಕುಮಾರ್, ಸಂಜೀತ್ ಕುಮಾರ್, ಇಶಾಲ್ ಕುಮಾರ್ ಮತ್ತು ಶುಭಮನ್ ಗ್ಯಾಂಗ್ ಅಂದರ್.

ಇದನ್ನೂ ಓದಿ: RCB vs CSK IPL 2026: ಹೈವೋಲ್ಟೇಜ್ ಪಂದ್ಯದ ಹಿನ್ನೆಲೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪೊಲೀಸ್ ಬಿಗಿ ಭದ್ರತೆ!

ಈ ಮೈದಾನದ ಸುತ್ತಮುತ್ತಲಿನ ಭದ್ರತೆಗೆ 2,300 ಪೊಲೀಸರ ನಿಯೋಜನೆ ಮಾಡಲಾಗಿದೆ. ಜನಸಂದಣಿ ನಿಯಂತ್ರಣಕ್ಕೆ ಬಿಎಂಟಿಸಿಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಪಾರ್ಕಿಂಗ್, ಮೆಟ್ರೋ ಸೇವೆ ಈ ಹಿಂದಿನ ಪಂದ್ಯದಂತೆಯೇ ಇರಲಿದೆ. ತಡರಾತ್ರಿ 2 ಗಂಟೆಯವರೆಗೂ ನಮ್ಮ ಮೆಟ್ರೋ ರೈಲು ಸಂಚಾರವಿರುತ್ತೆ. ಸುರಕ್ಷತೆಗಾಗಿ ಸ್ಟೇಡಿಯಂ ಸಮೀಪದ ರಸ್ತೆಗೆ ಬ್ಯಾರಿಕೇಡ್ ಅಳವಡಿಕೆ ಮಾಡಿದ್ದರಿಂದ, ಟಿಕೆಟ್ ಇಲ್ಲದವರು ಸ್ಟೇಡಿಯಂ ಸುತ್ತಮುತ್ತ ಬಾರದಂತೆ ಸೂಚನೆ ನೀಡಿದ್ದಾರೆ. ನಕಲಿ ಟಿಕೆಟ್ ಮಾರಾಟ, ಬೆಟ್ಟಿಂಗ್ ಚಟುವಟಿಕೆ ಮೇಲೆ ಸಿಸಿಬಿ ನಿಗಾ ಇಟ್ಟಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *