Headlines

WPL 2026: ಡೆಲ್ಲಿ ವಿರುದ್ಧ ಟಾಸ್ ಸೋತ ಆರ್​ಸಿಬಿ; ಎರಡು ತಂಡಗಳಲ್ಲೂ ಬದಲಾವಣೆ

WPL 2026: ಡೆಲ್ಲಿ ವಿರುದ್ಧ ಟಾಸ್ ಸೋತ ಆರ್​ಸಿಬಿ; ಎರಡು ತಂಡಗಳಲ್ಲೂ ಬದಲಾವಣೆ


2026 ರ ಮಹಿಳಾ ಪ್ರೀಮಿಯರ್ ಲೀಗ್‌ನ (ಮಹಿಳಾ ಪ್ರೀಮಿಯರ್ ಲೀಗ್) 15 ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (RCB vs DC) ನಡುವೆ ನಡೆಯುತ್ತಿದೆ. ವಡೋದರಾದ ಕೋಟಂಬಿಯಲ್ಲಿರುವ BCA ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದ ಸ್ಮೃತಿ ಮಂಧಾನ ನಾಯಕತ್ವದ ಆರ್ ಸಿಬಿ ಗೆಲ್ಲುವ ಮೂಲಕ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯುವ ಇರಾದೆಯಲ್ಲಿದೆ. ಆರ್ಸಿಬಿ ತಂಡದಲ್ಲಿ ಇಲ್ಲಿಯವರೆಗೆ ಅಜೆಯ ಉಳಿದಿದ್ದು, ಪ್ಲೇಆಫ್‌ಗೆ ಅರ್ಹತೆ ಪಡೆದಿದೆ. ಇತ್ತ ಡೆಲ್ಲಿ ಕ್ಯಾಪಿಟಲ್ಸ್‌ ಈ ಪಂದ್ಯವನ್ನು ಗೆದ್ದು ಪ್ಲೇಆಫ್ ಭರವಸೆಯನ್ನು ಜೀವಂತವಾಗಿರಿಸಿಕೊಳ್ಳಲಿದೆ.

ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್

ಈ ಆಟದ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಾಯಕಿ ಜೆಮಿಮಾ ರೊಡ್ರಿಗ್ಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಲಾಗಿದೆ. ವಡೋದರಾದಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವ ತಂಡಕ್ಕೆ ಇಬ್ಬನಿಯ ನೆರವು ಸಿಗುವುದರಿಂದ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾಗಿ ಹೇಳಿದರು. ಇತ್ತ ಟಾಸ್ ಸೋತ ಸ್ಮೃತಿ ಕೂಡ ಗೆದ್ದಿದ್ದಾರೆ, ಬೌಲಿಂಗ್ ಮಾಡಿರುವುದಾಗಿ ಹೇಳಿದರು. ಟಾಸ್ ಬಳಿಕ ಎರಡೂ ತಂಡಗಳು ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದ್ದು, ಎರಡೂ ತಂಡಗಳಲ್ಲಿ ಬದಲಾವಣೆ ಮಾಡಲಾಗಿದೆ.

ಉಭಯ ತಂಡಗಳು

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ XI: ಗ್ರೇಸ್ ಹ್ಯಾರಿಸ್, ಸ್ಮೃತಿ ಮಂಧಾನ (ನಾಯಕಿ), ಜಾರ್ಜಿಯಾ ವೋಲ್, ಗೌತಮಿ ನಾಯ್ಕ್, ರಿಚಾ ಘೋಷ್ (ವಿಕೆಟ್ ಕೀಪರ್), ನಡಿನ್ ಡಿ ಕ್ಲರ್ಕ್, ರಾಧಾ ಯಾದವ್, ಅರುಂಧತಿ ರೆಡ್ಡಿ (ಪ್ರೇಮಾ ರಾವತ್ ಬದಲಿಗೆ), ಶ್ರೇಯಾಂಕಾ ಪಾಟೀಲ್, ಸಯಾಲಿ ಸತ್ಘರೆ, ಮತ್ತು ಲಾರೆನ್ ಬೆಲ್.

ದೆಹಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ XI: ಶಫಾಲಿ ವರ್ಮಾ, ಲಿಜೆಲ್ಲೆ ಲೀ (ವಿಕೆಟ್ ಕೀಪರ್), ಲಾರಾ ವೋಲ್ವಾರ್ಡ್ಟ್, ಜೆಮಿಮಾ ರಾಡ್ರಿಗಸ್ (ನಾಯಕಿ), ಮರಿಝನ್ನೆ ಕಪ್, ನಿಕಿ ಪ್ರಸಾದ್, ಚಿನೆಲ್ಲೆ ಹೆನ್ರಿ (ಲೂಸಿ ಹ್ಯಾಮಿಲ್ಟನ್ ಬದಲಿಗೆ), ಸ್ನೇಹ ರಾಣಾ, ಮಿನ್ನು ಮಣಿ (ದೀಯಾ ಯಾದವ್ ಬದಲಿಗೆ), ಶ್ರೀ ಚರಣಿ ಮತ್ತು ನಂದಿನಿ ಶರ್ಮಾ.

ಹೆಚ್ಚಿನ ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 7:13 pm, ಶನಿ, 24 ಜನವರಿ 26





Source link

Leave a Reply

Your email address will not be published. Required fields are marked *