ಕಡಿಮೆ ಬೆಲೆಗೆ ಬೊಂಬಾಟ್ ಫೀಚರ್ಸ್‌ನ ಸ್ಮಾರ್ಟ್‌ಫೋನ್; 7000mAh ಬ್ಯಾಟರಿ, 15W ಫಾಸ್ಟ್ ಚಾರ್ಜಿಂಗ್

ಕಡಿಮೆ ಬೆಲೆಗೆ ಬೊಂಬಾಟ್ ಫೀಚರ್ಸ್‌ನ ಸ್ಮಾರ್ಟ್‌ಫೋನ್; 7000mAh ಬ್ಯಾಟರಿ, 15W ಫಾಸ್ಟ್ ಚಾರ್ಜಿಂಗ್

ಕಡಿಮೆ ಬೆಲೆಗೆ ಬೊಂಬಾಟ್ ಫೀಚರ್ಸ್‌ನ ಸ್ಮಾರ್ಟ್‌ಫೋನ್; 7000mAh ಬ್ಯಾಟರಿ, 15W ಫಾಸ್ಟ್ ಚಾರ್ಜಿಂಗ್

ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಬಜೆಟ್ ಗ್ರಾಹಕರನ್ನು ಗುರಿಯಾಗಿಸಿಕೊಂಡು ರಿಯಲ್‌ಮಿ ಕಂಪನಿ ತನ್ನ ಹೊಸ ಮಾಡೆಲ್ ಅನ್ನು ಪರಿಚಯಿಸಿದೆ. ಈ ಹೊಸ ಸ್ಮಾರ್ಟ್‌ಫೋನ್, ದೀರ್ಘಕಾಲ ಬಾಳಿಕೆ ಬರುವ ಬ್ಯಾಟರಿ ಮತ್ತು ಉತ್ತಮ ದೈನಂದಿನ ಬಳಕೆಯನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗಿದೆ.

ಬಜೆಟ್ ಬೆಲೆಯಲ್ಲಿ 5G ಸಪೋರ್ಟ್, ಬೃಹತ್ 7000mAh ಬ್ಯಾಟರಿ, ಮತ್ತು 144Hz ರಿಫ್ರೆಶ್ ರೇಟ್ ಡಿಸ್‌ಪ್ಲೇಯಂತಹ ಹಲವು ಅದ್ಭುತ ಫೀಚರ್‌ಗಳನ್ನು ಈ ಫೋನ್ ಹೊಂದಿದೆ. ಗೇಮಿಂಗ್ ಮತ್ತು ನಿರಂತರ ವಿಡಿಯೋ ನೋಡುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.

Realme C83 5G ಸ್ಮಾರ್ಟ್‌ಫೋನ್ 7000mAh ಸಾಮರ್ಥ್ಯದ ‘ಟೈಟಾನ್ ಬ್ಯಾಟರಿ’ ಹೊಂದಿದೆ. ದೀರ್ಘಕಾಲ ಸೋಶಿಯಲ್ ಮೀಡಿಯಾ, ಸ್ಟ್ರೀಮಿಂಗ್ ಮತ್ತು ಗೇಮಿಂಗ್ ಬಳಸುವವರಿಗೆ ಈ ಬ್ಯಾಟರಿ ಉತ್ತಮ ಬ್ಯಾಕಪ್ ನೀಡುತ್ತದೆ. ಈ ಸ್ಮಾರ್ಟ್‌ಫೋನ್ 15W ಫಾಸ್ಟ್ ಚಾರ್ಜಿಂಗ್ ಮತ್ತು 5W ರಿವರ್ಸ್ ಚಾರ್ಜಿಂಗ್ ಸೌಲಭ್ಯವನ್ನೂ ಹೊಂದಿದೆ. ಕಾರ್ಯಕ್ಷಮತೆಗಾಗಿ, ಇದರಲ್ಲಿ 6nm ಫ್ಯಾಬ್ರಿಕೇಶನ್‌ನಲ್ಲಿ ತಯಾರಾದ MediaTek Dimensity 6300 ಚಿಪ್‌ಸೆಟ್ ನೀಡಲಾಗಿದೆ.

ರಿಯಲ್ ಮಿ ಸ್ಮಾರ್ಟ್‌ಫೋನ್ 6GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್‌ನೊಂದಿಗೆ ಬರುತ್ತದೆ. ಡೈನಾಮಿಕ್ RAM ಸೌಲಭ್ಯದ ಮೂಲಕ 18GB ವರೆಗೆ ವರ್ಚುವಲ್ RAM ಹೆಚ್ಚಿಸಿಕೊಳ್ಳಬಹುದು. ಅಲ್ಲದೆ 2TB ವರೆಗೆ ಮೆಮೊರಿ ಕಾರ್ಡ್ ಬಳಸುವ ಅವಕಾಶವೂ ಇದೆ.

ರಿಯಲ್‌ಮಿ C83 5G ಫೋನ್‌ನಲ್ಲಿ 6.7-ಇಂಚಿನ LCD ಡಿಸ್‌ಪ್ಲೇ ನೀಡಲಾಗಿದೆ. ಬಜೆಟ್ ಫೋನ್‌ಗಳಲ್ಲಿ ಸಾಮಾನ್ಯವಾಗಿ 90Hz ಅಥವಾ 120Hz ರಿಫ್ರೆಶ್ ರೇಟ್ ಇರುತ್ತದೆ, ಆದರೆ ಈ ಫೋನ್‌ನಲ್ಲಿ 144Hz ಅಡಾಪ್ಟಿವ್ ರಿಫ್ರೆಶ್ ರೇಟ್ ನೀಡಲಾಗಿದೆ. ಇದರಿಂದ ಸ್ಕ್ರೋಲಿಂಗ್ ಮತ್ತು ಅನಿಮೇಷನ್‌ಗಳು ತುಂಬಾ ಸ್ಮೂತ್ ಆಗಿರುತ್ತವೆ.

ನಿರಂತರ ಬಳಕೆಯ ಸಮಯದಲ್ಲಿ ಫೋನ್ ಬಿಸಿಯಾಗದಂತೆ ತಡೆಯಲು, ಈ ಸೆಗ್ಮೆಂಟ್‌ನಲ್ಲೇ ಅತಿದೊಡ್ಡದಾದ 5334mm² ‘ವೇಪರ್ ಚೇಂಬರ್ ಕೂಲಿಂಗ್ ಸಿಸ್ಟಮ್’ ಅಳವಡಿಸಲಾಗಿದೆ. ಫೋನ್‌ನ ಬ್ರೈಟ್‌ನೆಸ್ ಮತ್ತು ಆಡಿಯೋವನ್ನು ತಾನಾಗಿಯೇ ಹೆಚ್ಚಿಸುವ ಹೊಸ ‘AI ಔಟ್‌ಡೋರ್ ಮೋಡ್’ ಸಹ ಇದರಲ್ಲಿದೆ.

ಫೋಟೋಗಳಿಗಾಗಿ 13MP AI ಹಿಂಬದಿಯ ಕ್ಯಾಮೆರಾ ಮತ್ತು 5MP ಮುಂಭಾಗದ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಇದು ಸಾಮಾನ್ಯ ಬಳಕೆಗೆ ಸೂಕ್ತವಾದ ಕ್ಯಾಮೆರಾ ವ್ಯವಸ್ಥೆಯಾಗಿದೆ. ಈ ಫೋನ್ ಮಿಲಿಟರಿ-ಗ್ರೇಡ್ ಶಾಕ್ ರೆಸಿಸ್ಟೆನ್ಸ್ ಮತ್ತು IP64 ಡಸ್ಟ್ ಮತ್ತು ವಾಟರ್ ರೆಸಿಸ್ಟೆನ್ಸ್ ರೇಟಿಂಗ್ ಪಡೆದಿದೆ.

ಹಾಗಾಗಿ, ಕೆಳಗೆ ಬಿದ್ದರೂ ಅಥವಾ ನೀರಿಗೂ ಬಿದ್ದರೂ ಸುಲಭವಾಗಿ ಹಾಳಾಗುವುದಿಲ್ಲ. ಈ ಫೋನ್ ಬ್ಲೂಮಿಂಗ್ ಪರ್ಪಲ್ ಮತ್ತು ಸ್ಪ್ರೌಟಿಂಗ್ ಗ್ರೀನ್ ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ.

ಇದರ 4GB RAM + 64GB ಸ್ಟೋರೇಜ್ ಮಾದರಿಯ ಬೆಲೆ ₹13,499, 4GB RAM + 128GB ಮಾದರಿಯ ಬೆಲೆ ₹14,499, ಮತ್ತು ಟಾಪ್-ಎಂಡ್ 6GB RAM + 128GB ಮಾದರಿಯ ಬೆಲೆ ₹17,499 ಆಗಿದೆ.

ಇದರ ಮೊದಲ ಮಾರಾಟ ಮಾರ್ಚ್ 7 ರಂದು ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್, ರಿಯಲ್‌ಮಿ ವೆಬ್‌ಸೈಟ್ ಮತ್ತು ರಿಟೇಲ್ ಸ್ಟೋರ್‌ಗಳಲ್ಲಿ ಪ್ರಾರಂಭವಾಗುತ್ತದೆ.

Source link

Leave a Reply

Your email address will not be published. Required fields are marked *