ಸಾವಿರಾರು ರೂ ಮೌಲ್ಯದ ಎಐ ಮಾಡಲ್​ಗಳನ್ನು ಭಾರತೀಯರಿಗೆ ಉಚಿತವಾಗಿ ಕೊಡುತ್ತಿರುವುದು ಯಾಕೆ? ಇಲ್ಲಿದೆ ಮರ್ಮ

ಸಾವಿರಾರು ರೂ ಮೌಲ್ಯದ ಎಐ ಮಾಡಲ್​ಗಳನ್ನು ಭಾರತೀಯರಿಗೆ ಉಚಿತವಾಗಿ ಕೊಡುತ್ತಿರುವುದು ಯಾಕೆ? ಇಲ್ಲಿದೆ ಮರ್ಮ


ಚಾಟ್ಜಿಪಿಟಿ, ಪರ್ಪ್ಲೆಕ್ಸಿಟಿ, ಗೂಗಲ್ ಜೆಮಿನಿ ಇತ್ಯಾದಿ ಎಐ ಚಾಟ್ ಬೋಟ್‌ಗಳನ್ನು (AI ಮಾಡೆಲ್‌ಗಳು) ಭಾರತೀಯರು ಉಚಿತವಾಗಿ ಅನುಭವಿಸುತ್ತಿದ್ದಾರೆ. ಅಡ್ವಾನ್ಸ್ಡ್ ವರ್ಷನ್ ಕೂಡ ಉಚಿತವಾಗಿ ಲಭ್ಯವಿವೆ. ಈ ಸುಧಾರಿತ ಆವೃತ್ತಿಯ ಎಐ ಮಾದರಿಗಳನ್ನು ಸಬ್ ಸ್ಕ್ರೈಬ್ ಮಾಡಬೇಕೆಂದರೆ ವರ್ಷಕ್ಕೆ 10-30 ಸಾವಿರ ರೂ. ಇದನ್ನು ಕಂಪನಿಗಳು ಉಚಿತವಾಗಿ ಹಂಚುತ್ತಿವೆ. ಚಾಟ್‌ಜಿಪಿಟಿಯ ಸುಧಾರಿತ ಆವೃತ್ತಿಯಾದ ಚಾಟ್‌ಜಿಪಿಟಿ ಗೋ ಪ್ಲಾನ್‌ಗೆ ಒಂದು ವರ್ಷ ಉಚಿತ ಕೊಡಲಾಗುತ್ತಿದೆ.

ಹೊಸ ಸೇವೆಗಳನ್ನು ಈ ರೀತಿ ಆರಂಭದಲ್ಲಿ ನೀಡುವುದು ಬ್ಯುಸಿನೆಸ್ ಸ್ಟ್ರಾಟಿಜಿ. ಜನರು ಇವುಗಳಿಗೆ ಒಗ್ಗಿಕೊಂಡ ಬಳಿಕ ಹಂತ ಹಂತವಾಗಿ ದರ ಹೇರಿಕೆ ಮತ್ತು ಏರಿಕೆ ಮಾಡುತ್ತಾ ಹೋಗುತ್ತಾರೆ. ಜಿಯೋ ಟೆಲಿಕಾಂ ತನ್ನ ಹೆಜ್ಜೆಗಳನ್ನು ಈ ತಂತ್ರ ಅನುಸರಿಸಿತು. ಈ ಜಾಗತಿಕ ಎಐ ಕಂಪನಿಗಳೂ ಈ ತಂತ್ರಜ್ಞಾನವನ್ನು ಅನುಸರಿಸಬಹುದು ಎಂದು ಮೇಲ್ನೋಟಕ್ಕೆ ಸೂಚಿಸಲಾಗಿದೆ.

ಇದನ್ನೂ ಓದಿ: ಭಾರತದ ಈ ವರ್ಷದ ಆರ್ಥಿಕ ಬೆಳವಣಿಗೆ ನಿರೀಕ್ಷೆಮೀರುತ್ತದೆಯೇ?; ವಿ ಅನಂತನಾಗೇಶ್ವರನ್ ವಿಶ್ವಾಸ

ಆದರೆ, ಈ ಉಚಿತ ಕೊಡುಗೆಯ ಹಿಂದೆ ಐ ಕಂಪನಿಗಳಿಗೆ ಇನ್ನೂ ದೊಡ್ಡ ಉದ್ದೇಶವಿದೆ ಎಂದು ತಜ್ಞರು ಭಾವಿಸಿದ್ದಾರೆ. ಅವರ ಪ್ರಕಾರ, ಎಐ ಮಾದರಿಗಳ ಬೆಳವಣಿಗೆಗೆ ಈಗ ಹೆಚ್ಚೆಚ್ಚು ದತ್ತಾಂಶಗಳು ಬೇಕು. ಭಾರತ ಈಗ ದತ್ತಾಂಶಗಳ ಭವ್ಯ ಭಂಡಾರವೇ ಆಗಿದೆ.

ಭಾರತದಲ್ಲಿ 70 ಕೋಟಿ ಇಂಟರ್ನೆಟ್ ಬಳಕೆದಾರರಿದ್ದಾರೆ. ಸ್ಮಾರ್ಟ್ಫೋನ್ ಬಳಸುವವರ ಸಂಖ್ಯೆ ಬಹಳ ದೊಡ್ಡದಾಗಿದೆ. ಇಲ್ಲಿ ಡಾಟಾ ದರ ಕಡಿಮೆ ಇದೆ. ಹೀಗಾಗಿ, ಇಂಟರ್ನೆಟ್ ಬಳಕೆ ತುಂಬಾ ಹೆಚ್ಚಾಗಿದೆ. ಎಲ್ಲರೂ ಕೂಡ ಮನಸೋಯಿಚ್ಛೆ ಎಐ ಮಾಡಲ್ಗಳ ಸೇವೆಯನ್ನು ಬಳಸಿಬಿಟ್ಟರೆ ಅಗಣಿತವಾದ ದತ್ತಾಂಶವೇ ನಿರ್ಮಾಣವಾಗುತ್ತದೆ. ಎಐ ಕಂಪನಿಗಳಿಗೆ ಇದು ಬಹಳ ದೊಡ್ಡ ನಿಧಿ.

ಇದನ್ನೂ ಓದಿ: ಸ್ಕ್ರ್ಯಾಪ್‌ಗಳನ್ನು ಮಾರಿ ಒಂದೇ ತಿಂಗಳಲ್ಲಿ 800 ಕೋಟಿ ರೂ ಗಳಿಸಿದ ಸರ್ಕಾರ; 4 ವರ್ಷದಿಂದ ಬಂದ ಆದಾಯ 4,000 ರೂ ಹೆಚ್ಚು

ಐಐ ಮಾದರಿಗಳನ್ನು ಮತ್ತಷ್ಟು ಹರಿತವಾಗಿ ಟ್ರೈನ್ ಮಾಡಲು ಈ ದತ್ತಾಂಶ ಬಹಳ ಅವಶ್ಯಕ. ಭಾರತದಲ್ಲಿ ಎಐ ಮಾರುಕಟ್ಟೆ 2027ರಷ್ಟರಲ್ಲಿ 17 ಬಿಲಿಯನ್ ಡಾಲರ್ ದಾಟುವ ನಿರೀಕ್ಷೆ ಇದೆ. ವಿಶ್ವದಲ್ಲೇ ಅತಿವೇಗವಾಗಿ ಬೆಳೆಯುತ್ತಿರುವ ಎಐ ಮಾರುಕಟ್ಟೆ ಭಾರತದ್ದು. ಜೊತೆಗೆ ಭಾರತವು ವಿಶ್ವದ ಬೋಟ್ ಟ್ರೈನಿಂಗ್ ರಾಜಧಾನಿಯಾಗುವತ್ತ ಸಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈ ಉತ್ಪನ್ನ ಭಾರತದಲ್ಲಿ ಐ ಮಾದರಿಗಳನ್ನು ನೀಡಲು ಕಂಪನಿಗಳು ಮುಂದಾಗಿವೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *