ಜನವರಿ 26: ಅಂತಾರಾಷ್ಟ್ರೀಯ ಚಿನ್ನದ ಬೆಲೆ (ಚಿನ್ನದ ದರ) ಒಂದು ಔನ್ಸ್‌ಗೆ 5,000 ಡಾಲರ್ ದಾಟಿ ಹೋಗಿದೆ. ಈ ಮೈಲಿಗಲ್ಲು ಮುಟ್ಟಿದ್ದು ಬಂಗಾರದ ಇತಿಹಾಸದಲ್ಲೇ ಇದು ಪ್ರಥಮ ಬಾರಿಗೆ. ಸ್ಪಾಟ್ ಗೋಲ್ಡ್ ಆಸೆ ಒಂದು ಔನ್ಸ್ ಚಿನ್ನದ ಬೆಲೆ ಸೋಮವಾರ 5,092 ಡಾಲರ್ ವರೆಗೆ ಏರಿದೆ. ಒಂದು ಔನ್ಸ್ ಎಂದರೆ 28.3495 ಗ್ರಾಮ. ಅಂದರೆ, ಒಂದು ಗ್ರಾಮ್ ಚಿನ್ನದ ಬೆಲೆ ಸ್ಪಾಟ್ ಮಾರುಕಟ್ಟೆಯಲ್ಲಿ 16,410 ರೂಗಿಂತ ಹೆಚ್ಚು.
ಚಿನ್ನದ ಬೆಲೆ ಏರಲು ಕಾರಣವೇನು?
- ಸೆಂಟ್ರಲ್ ಬ್ಯಾಂಕುಗಳು ಚಿನ್ನದ ಖರೀದಿ ಭರಾಟೆಯಲ್ಲಿರುವುದು
- ಗೋಲ್ಡ್ ಐಟಿಎಫ್‌ಗಳಲ್ಲಿ ಹೂಡಿಕೆ ಬಹಳ ಹೆಚ್ಚಿರುವುದು
- ಅಮೆರಿಕದ ಡಾಲರ್ ದುರ್ಬಲಗೊಳ್ಳುತ್ತಿದೆ
- ಅಮೆರಿಕದ ಟ್ಯಾರಿಫ್ನ ಪರಿಣಾಮ ಬೀರುತ್ತಿದೆ
- ಯುದ್ಧ ಭೀತಿಯಿಂದ ಜಾಗತಿಕ ರಾಜಕೀಯ ಅನಿಶ್ಚಿತತೆ ಹೆಚ್ಚಿರುವುದು.
ಐತಿಹಾಸಿಕವಾಗಿ ಚಿನ್ನವು ಸೇಫ್ ಹೇವನ್ ಅಥವಾ ಭದ್ರತಾ ಲೋಹವಾಗಿ ಪರಿಗಣಿತವಾಗಿದೆ. ಅನಿಶ್ಚಿತ ಸಂದರ್ಭ ಎದುರಾಗಬಹುದು ಎಂದಾಗ ಜನರು ಚಿನ್ನದಂತಹ ನೈಜ ಮತ್ತು ಅಮೂಲ್ಯ ವಸ್ತುಗಳನ್ನು ತೆಗೆದಿಡುವುದುಂಟು. ಕೂಡ ಆ ಪ್ರವೃತ್ತಿ ಮುಂದುವರಿದಿದೆ.
ಇದನ್ನೂ ಓದಿ: ಚಿನ್ನ, ಬೆಳ್ಳಿ ಬೆಲೆ ಭರ್ಜರಿ ಏರಿಕೆ; ಇಲ್ಲಿದೆ ದರಪಟ್ಟಿ
ಚಿನ್ನದ ಬೆಲೆ ಎಷ್ಟಾಗುತ್ತೆ?
ಗೋಲ್ಡ್‌ಮನ್ ಸ್ಯಾಕ್ಸ್ ವರದಿ ಪ್ರಕಾರ ಈ ವರ್ಷಾಂತ್ಯದೊಳಗೆ (2026 ಡಿಸೆಂಬರ್) ಚಿನ್ನದ ಬೆಲೆ ಒಂದು ಔನ್ಸ್‌ಗೆ 5,400 ಡಾರ್‌ಗಳನ್ನು ಮುಟ್ಟಬಹುದು. ಅಂದರೆ, ಒಂದು ಗ್ರಾಮ್ ಚಿನ್ನದ ಬೆಲೆ 17,430 ರೂಗೆ ಏರಬಹುದು. ಈಗ ನಡೆಯುತ್ತಿರುವ ಏರಿಕೆಯ ಗತಿ ಗಮನಿಸಿದರೆ ಇನ್ನೆರಡು ತಿಂಗಳಲ್ಲೇ ಈ ಬೆಲೆ ಬಂದುಬಿಡಬಹುದು. ಮೆಟಲ್ಸ್ ಫೋಕಸ್ ಕಂಪನಿ ಮಾಡಿರುವ ಅಂದಾಜು ಪ್ರಕಾರ ಈ ವರ್ಷಾಂತ್ಯದಲ್ಲಿ ಚಿನ್ನದ ಬೆಲೆ 5,500 ಡಾಲರ್ ಆಗಬಹುದು. ಅಂದರೆ, ಒಂದು ಗ್ರಾಮ್ ಚಿನ್ನದ ಬೆಲೆ 17,753 ರೂ ಆಗಬಹುದು.
ರಾಬರ್ಟ್ ಕಿಯೋಸಾಕಿ ಭಯಾನಕ ಭವಿಷ್ಯ
ಹಣಕಾಸು ತಜ್ಞ ಮತ್ತು ರಿಚ್ ಡ್ಯಾಡ್ ಪೂರ್ ಡ್ಯಾಡ್ ಪುಸ್ತಕದ ಕರ್ತೃ ರಾಬರ್ಟ್ ಕಿಯೋಸಾಕಿ ಅವರ ಚಿನ್ನದ ಬೆಲೆ ಒಂದು ಔನ್ಸ್‌ಗೆ 27,000 ಡಾಲರ್ ಆಗುತ್ತೆ ಎಂದು ಭವಿಷ್ಯ ನುಡಿದಿದ್ದಾರೆ. ಅಂದರೆ, ಈಗಿರುವ ಬೆಲೆಗಿಂತ ಐದು ಪಟ್ಟು ಹೆಚ್ಚು ಬೆಲೆಯಾಗಬಹುದು. ಅವರ ಭವಿಷ್ಯ ನಿಜವಾದರೆ ಒಂದು ಗ್ರಾಮ್ ಚಿನ್ನದ ಬೆಲೆ 87,154 ರೂ ಆಗುತ್ತದೆ. ಅಂದರೆ ಒಂದು ಕಿಲೋ ಚಿನ್ನದ ಬೆಲೆ 8,71,54,000 (8.71 ಕೋಟಿ) ರೂ ಆಗಬಹುದು. ಇಷ್ಟು ಅಗಾಧ ಚಿನ್ನದ ಬೆಲೆ ಯಾವಾಗ ಆಗುತ್ತೆ ಎಂದು ಕಿಯೋಸಾಕಿ ಟೈಮ್ ಲೈನ್ ಕೊಟ್ಟಿಲ್ಲ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ