2025ರಲ್ಲಿ 3.3 ಕೋಟಿ ಭಾರತೀಯರಿಂದ ವಿದೇಶಿ ಪ್ರವಾಸ, ಟಾಪ್ 10 ಲಿಸ್ಟ್‌ನಲ್ಲೇ ಇಲ್ಲ ಮಾಲ್ಡೀವ್ಸ್

2025ರಲ್ಲಿ 3.3 ಕೋಟಿ ಭಾರತೀಯರಿಂದ ವಿದೇಶಿ ಪ್ರವಾಸ, ಟಾಪ್ 10 ಲಿಸ್ಟ್‌ನಲ್ಲೇ ಇಲ್ಲ ಮಾಲ್ಡೀವ್ಸ್

2025ರಲ್ಲಿ 3.3 ಕೋಟಿ ಭಾರತೀಯರಿಂದ ವಿದೇಶಿ ಪ್ರವಾಸ, ಟಾಪ್ 10 ಲಿಸ್ಟ್‌ನಲ್ಲೇ ಇಲ್ಲ ಮಾಲ್ಡೀವ್ಸ್

2025ರಲ್ಲಿ 3.3 ಕೋಟಿ ಭಾರತೀಯರಿಂದ ವಿದೇಶಿ ಪ್ರವಾಸ, ಟಾಪ್ 10 ಲಿಸ್ಟ್‌ನಲ್ಲೇ ಇಲ್ಲ ಮಾಲ್ಡೀವ್ಸ್, ಕಳೆದ ವರ್ಷ ಅತೀ ಹೆಚ್ಚು ಭಾರತೀಯರು ಭೇಟಿ ನೀಡಿದ ವಿದೇಶಿ ತಾಣ ಯಾವುದು? ಮಾಲ್ಡೀವ್ಸ್ ಗತಿ ಏನಾಯ್ತು?

ಕೊರೋನಾ ಬಳಿಕ ಪ್ರವಾಸಗಳ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಭಾರತೀಯರು ದೇಶ ಪ್ರವಾಸದ ಜೊತೆ ವಿದೇಶಿ ಪ್ರವಾಸವನ್ನು ಹೆಚ್ಚು ಇಷ್ಟಪಡುತ್ತಾರೆ. ಭಾರತಲ್ಲಿ ಮತ್ತೊಂದು ರಾಜ್ಯಕ್ಕೆ ತೆರಳದಿದ್ದರೂ ವಿದೇಶದಲ್ಲಿ ಬಹುತೇಕ ರಾಜ್ಯಗಳ ಪ್ರವಾಸ ಮುಗಸಿದ ಹಲವರಿದ್ದಾರೆ. ಇದೀಗ 2025ರಲ್ಲಿ ವಿದೇಶಿ ಪ್ರವಾಸ ಮಾಡಿರುವ ಭಾರತೀಯರ ಸಂಖ್ಯೆ, ವಿದೇಶಿ ತಾಣಗಳ ಅಂಕಿ ಅಂಶ ಬಹಿರಂಗವಾಗಿದೆ.

2025ರ ಸಾಲಿನಲ್ಲಿ ಬರೋಬ್ಬರಿ 3.3 ಕೋಟಿ ಮಂದಿ ವಿದೇಶಿ ಪ್ರವಾಸ ಮಾಡಿದ್ದಾರೆ. ಇದು ಗರಿಷ್ಠ ದಾಖಲೆಯಾಗಿದೆ. 2024ರ ಸಾಲಿನಲ್ಲಿ 3.08 ಕೋಟಿ ಭಾರತೀಯರು ವಿದೇಶಿ ಪ್ರವಾಸ ಮಾಡಿದ್ದರು. ಈ ಮೂಲಕ ಭಾರತೀಯರ ವಿದೇಶಿ ಪ್ರವಾಸ ಸಂಖ್ಯೆ ಹೆಚ್ಚಾಗಿದ್ದು ಮಾತ್ರವಲ್ಲ, ವಿದೇಶಗಳಲ್ಲಿ ಭಾರತೀಯರ ಖರ್ಚು ಮಾಡುವ ದುಡ್ಡಿನ ಪ್ರಮಾಣವೂ ಹೆಚ್ಚಾಗಿದೆ.

2025ರ ಸಾಲಿನಲ್ಲಿ ಅತೀ ಹೆಚ್ಚು ಭಾರತೀಯರು ಭೇಟಿ ನೀಡಿದ ಟಾಪ್ 3 ರಾಜ್ಯಗಳು ಅಚ್ಚರಿ ವಿಚಾರವಲ್ಲ. ಈ ಪೈಕಿ ಮೊದಲ ಸ್ಥಾನ ಯುನೈಟೆಡ್ ಅರಬ್ ಎಮಿರೈಟ್ಸ್. ಇನ್ನು ಎರಡನೇ ಸ್ಥಾನ ಸೌದಿ ಅರೇಬಿಯಾ ಹಾಗೂ ಮೂರನೇ ಸ್ಥಾನದಲ್ಲಿದೆ ಥಾಯ್ಲೆಂಡ್.

ಈ ಮೂರು ಟಾಪ್ 3 ದೇಶ ಹೊರತು ಪಡಿಸಿದರೆ ಇನ್ನು ಟಾಪ್ 10 ಪಟ್ಟಿ ಬಿಡುಗಡೆಯಾಗಿದೆ. ಸಿಂಗಾಪುರ, ಅಮೆರಿಕ, ಯುನೈಟೆಡ್ ಕಿಂಗ್ಡಮ್, ಮಲೇಶಿಯಾ, ಖತಾರ್, ಕುವೈಟ್, ಒಮಾನ್, ಕೆನಾಡ, ಆಸ್ಟ್ರೇಲಿಯಾ, ವಿಯೆಟ್ನಾಂ, ಶ್ರೀಲಂಕಾ, ಜರ್ಮನಿ, ಬಹ್ರೈನ್, ಜಪಾನ್, ಫ್ರಾನ್ಸ್, ರಷ್ಯಾ ದೇಶಗಳು ಟಾಪ್ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.

ಭಾರತದ ಮುಂದೆ ಮಸಲ್ ಹಿಡಿದು ನಿಂತ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮಿಜು ಇದೀಗ ಕಂಗಾಲಾಗಿ ಹೋಗಿದ್ದಾರೆ. ಮಾಲ್ಡೀವ್ಸ್‌ಗೆ ಭಾರತದ ಸಹಾಯ ಬೇಕಿಲ್ಲ ಔಟ್ ಔಟ್ ಎಂದು ಕರೆ ನೀಡಿದ ಮಿಜು ಇದೀಗ ಸೊರಗಿದ್ದಾರೆ. ಕಾರಣ ಮಾಲ್ಡೀವ್ಸ್ ಭಾರತೀಯ ಪ್ರವಾಸಿ ತಾಣಗಳಲ್ಲಿ ಟಾಪ್ 8ರೊಳಗಿತ್ತು. ಇದೀಗ ಟಾಪ್ 15ರಲ್ಲೂ ಸ್ಥಾನವಿಲ್ಲ. ಭಾರತಕ್ಕೆ ಠಕ್ಕರ್ ನೀಡಲು ಹೋಗಿ ಇದೀಗ ಭಾರತೀಯರ ಮಾಲ್ಡೀವ್ಸ್ ಪ್ರವಾಸ ತಿರಸ್ಕರಿಸಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿ ಪ್ರಚಾರ ನೀಡಿದ ಲಕ್ಷದ್ವೀಪ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ.

ಟಾಪ್ 10 ಲಿಸ್ಟ್‌ನಲ್ಲೂ ಇಲ್ಲ ಮಾಲ್ಡೀವ್ಸ್

Source link

Leave a Reply

Your email address will not be published. Required fields are marked *