ಕರ್ತವ್ಯ ನಿರ್ವಹಿಸುತ್ತಿರುವ ಡಿಎಸ್‌ಪಿ ರಶ್ಮಿ ರಂಜನ್ ದಾಸ್ ತಮ್ಮ ಕೂದಲಿಗೆ ಕೆಂಪು ಬಣ್ಣ ಬಳಿದುಕೊಂಡಿದ್ದು ವಿವಾದಕ್ಕೆ ಕಾರಣವಾಗಿದೆ. ಇದನ್ನು ಶಿಸ್ತಿನ ಉಲ್ಲಂಘನೆ ಎಂದು ಪರಿಗಣಿಸಿರುವ ಪೊಲೀಸ್ ಇಲಾಖೆ, ಕೂದಲನ್ನು ಮತ್ತೆ ಕಪ್ಪು ಬಣ್ಣಕ್ಕೆ ಬದಲಾಯಿಸುವಂತೆ ಅವರಿಗೆ ಸೂಚನೆ ನೀಡಿದೆ.

ಒಡಿಶಾದ ಡಿಎಸ್ಪಿ ಹುದ್ದೆಯಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ತಲೆಗೂದಲಿಗೆ ಬಳಿದುಕೊಂಡ ಕೆಂಪು ಬಣ್ಣವೀಗ ತಲೆನೋವಾಗಿ ಪರಿಣಮಿಸಿದೆ. ಇದೀಗ ಕೆಂಪು ಬಣ್ಣ ಬದಲಿಸುವಂತೆ ಪೊಲೀಸ್ ಇಲಾಖೆ ಡಿಎಸ್‌ಪಿಗೆ ಸೂಚನೆ ನೀಡಲಾಗಿದೆ.

ಜಗತ್‌ಸಿಂಗ್ಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಎಸ್‌ಪಿ ರಶ್ಮಿ ರಂಜನ್ ದಾಸ್ (49) ತಮ್ಮ ಕೂದಲಿಗೆ ಪೂರ್ತಿ ಕೆಂಪು ಬಣ್ಣ ಬಳಿದುಕೊಂಡವರು. ‘ಇದು ಶಿಸ್ತಿನ ಉಲ್ಲಂಘನೆ’ ಎಂದಿರುವ ಪೊಲೀಸ್ ಇಲಾಖೆ, ಕೂದಲು ಕಪ್ಪು ಮಾಡಿಕೊಳ್ಳುವಂತೆ ಆದೇಶಿಸಲಾಗಿದೆ.

ಪೊಲೀಸ್ ಸಮವಸ್ತ್ರ ಧರಿಸಿರುವ ದಾಸ್‌ರ ತಲೆಯ ಮೇಲೆ ಕೆಂಪು ಟೊಪ್ಪಿಯಂತೆ ಕಾಣುವ ಬಣ್ಣದ ಕೂದಲಿನ ಫೋಟೋಗಳು ವೈರಲ್ ಆಗಿವೆ, ಜನರಿಂದ ತರಹೇವಾರಿ ಅಭಿಪ್ರಾಯಗಳು ಬರತೊಡಗಿವೆ. ‘ಪೊಲೀಸ್ ಅಧಿಕಾರಿಗೆ ಇದು ಶೋಭೆ ತರದು’ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದರೆ, ಇನ್ನೊಂದಿಷ್ಟು ಮಂದಿ, ‘ಕೂದಲಿನ ಬಣ್ಣವನ್ನಾಧರಿಸಿ ಅವರ ವೃತ್ತಿಪರತೆಯನ್ನು ಪ್ರಶ್ನಿಸಲಾಗದು. ಭೂಗತಲೋಕದಲ್ಲಿ ನಡುಕ ಹುಟ್ಟಿಸಿರುವ ಅಧಿಕಾರಿ ಅವರು’ ಎನ್ನುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)

ಹೀಗಿರುವಾಗ ಐಜಿ ಸತ್ಯಜಿತ್ ನಾಯ್ಕ್ ಮಧ್ಯಪ್ರವೇಶ ಮಾಡಿದ್ದು, ‘ಪೊಲೀಸ್ ವೃತ್ತಿಯಲ್ಲಿರುವವರು ತಮ್ಮ ಸಮವಸ್ತ್ರವನ್ನು ಗೌರವಿಸಬೇಕು ಹಾಗೂ ಶಿಸ್ತಿಗೆ ಆದ್ಯತೆ ನೀಡಬೇಕು. ಅದ್ದರಿಂದ ಕೆಂಪಾಗಿರುವ ಕೂದಲಿನ ಬಣ್ಣವನ್ನು ಮೊದಲಿನಂತೆಯೇ ಕಪ್ಪು ಮಾಡಿಕೊಳ್ಳಿ’ ಎಂದು ಎಚ್ಚರಿಕೆ ನೀಡಿದ್ದಾರೆ. (ಸಾಂದರ್ಭಿಕ ಚಿತ್ರ)

ಇದನ್ನೂ ಓದಿ: ಸತ್ಯ ನನ್ನ ಪರವಾಗಿದೆ, ಸದ್ಯದಲ್ಲೇ ಎಲ್ಲವನ್ನೂ ಹೇಳ್ತೇನೆ; ಪೋಸ್ಟ್ ವೈರಲ್ ಬೆನ್ನಲ್ಲೇ ನಟಿ ಕಾವ್ಯಾ ಗೌಡ ಹೇಳಿಕೆ!

ಈ ಬಗ್ಗೆ ರಶ್ಮಿ ರಂಜನ್ ದಾಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪೊಲೀಸ್ ಕೈಪಿಡಿಯಲ್ಲಿ ಕೇಶವಿನ್ಯಾಸದ ಬಗ್ಗೆ ಯಾವುದೇ ನಿಯಮಗಳಿರದಿದ್ದರೂ ಅದು ಸರಳವಾಗಿರಬೇಕು ಎಂಬ ನಿಯಮವಿದೆ ಎಂಬುದು ಗಮನಾರ್ಹ. (ಸಾಂದರ್ಭಿಕ ಚಿತ್ರ)

ಇದನ್ನೂ ಓದಿ: ಉದ್ಯಮಿ ಸಿ.ಜೆ. ರಾಯ್ ಸಾವು ಬಗ್ಗೆ ಹಲವು ಅನುಮಾನ: ಆ ಒಂದು ರೂಂ ಓಪನ್ ಮಾಡುವಂತೆ ಕೇರಳ ಐಟಿ ಅಧಿಕಾರಿಗಳ ಒತ್ತಾಯ

Source link
ಡಿಎಸ್ಪಿ ರಶ್ಮಿ ರಂಜನ್ ದಾಸ್‌ಗೆ ದೊಡ್ಡ ತಲೆನೋವಾದ ಕೆಂಪು ಕೂದಲು: ಏನಿದು ವಿವಾದ?