ಮಲಯಾಳಂ ಕಿರುತೆರೆ ನಟಿ ರೇಖಾ ರತೀಶ್ (ರೇಖಾ ರತೀಶ್) ಅವರು ಈಗ ಕಣ್ಣೀರು ಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ ಅವರು ತಮ್ಮ ನೋವನ್ನು ತೋಡಿದ್ದಾರೆ. ಇಷ್ಟೇ ಅಲ್ಲ, ತಮ್ಮ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿ ನ್ಯಾಯ ಒದಗಿಸುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬಳಿ ಅವರು ಕೇಳಿದ್ದಾರೆ. ಯೂಟ್ಯೂಬರ್‌ಗಳಿಂದ ಕಿರುಕುಳ ಆಗುತ್ತಿದೆ ಎಂಬ ಆರೋಪವನ್ನು ಅವರು ಮಾಡಿದ್ದಾರೆ. ಸದ್ಯ ಅವರ ವಿಡಿಯೋ ವೈರಲ್ ಆಗಿ ಗಮನ ಸೆಳೆಯುತ್ತಿದೆ.
‘ಕೇರಳ ಸರ್ಕಾರ ಮತ್ತು ಪಿಣರಾಯ್ ವಿಜಯನ್ ಅವರಲ್ಲಿ ನನ್ನ ಕೋರಿಕೆ. ನಾನು ರೇಖಾ ರತೀಶ್. ವೃತ್ತಿಯಲ್ಲಿ ನಾನು ನಟಿ. ಕಳೆದ 7-8 ತಿಂಗಳಿಂದ ನನಗೆ ಕೆಲಸವಿಲ್ಲ. ಕಳೆದ 2-3 ತಿಂಗಳಿನಿಂದ ಯೂಟ್ಯೂಬರ್‌ಗಳು ನನ್ನ ಬಗ್ಗೆ ತಪ್ಪಾಗಿ ಥಂಬ್ನೇಲ್ ಹಾಕಿ ವಿಡಿಯೋ ಮಾಡುತ್ತಿದ್ದಾರೆ. ಸಾಮಾನ್ಯರಂತೆ ಬದುಕಲು ಅವರು ನನಗೆ ಬಿಡುತ್ತಲೇ ಇಲ್ಲ. ನಾನು ನನ್ನನ್ನು ನೋಡಿಕೊಳ್ಳಬೇಕು. ಆದರೆ, ನನಗೆ ಸಾಕಷ್ಟು ಮಾನಸಿಕ ಕಿರುಕುಳ ಎದುರಾಗುತ್ತಿದೆ. ಇನ್ನು ಇದನ್ನು ಸಹಿಸಲು ಸಾಧ್ಯವಿಲ್ಲ ‘ ಎಂದು ಅವರು ಹೇಳಿದ್ದಾರೆ.
‘ಈ ರೀತಿಯ ಯೂಟ್ಯೂಬರ್‌ಗಳಿಂದ ಇಂಡಸ್ಟ್ರಿಯ ಅನೇಕರು ಜೀವ ಕಳೆದುಕೊಂಡಿದ್ದಾರೆ. ನನಗೆ ಏನಾದರೂ ಆಯಿತು ಎಂದರೆ ಅದಕ್ಕೆ ಕಾರಣ ಯಾರು ಎಂಬುದು ಎಲ್ಲರಿಗೂ ತಿಳಿಯಬೇಕು.ತಪ್ಪು ಕೆಲಸ ಮಾಡುತ್ತಿರುವ ಯೂಟ್ಯೂಬರ್ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಅವರು ಕೋರಿದ್ದಾರೆ.
ಇದನ್ನೂ ಓದಿ: ಸದ್ದಿಲ್ಲದೆ ಮದುವೆ ಆದ ಕಿರುತೆರೆ ನಟಿ ಗೀತಾ ಭಾರತಿ ಭಟ್; ಫೋಟೋ ನೋಡಿ
ರೇಖಾ ಅವರು ನಾಲ್ಕು ಬಾರಿ ಮದುವೆ ಆಗಿದ್ದರು. ಯಾವ ಸಂಬಂಧವೂ ಉಳಿದುಕೊಂಡಿಲ್ಲ. 2000ನೇ ಇಸ್ವಿಯಲ್ಲಿ ಯೂಸುಫ್ ಎಂಬುವವರನ್ನು ಮದುವೆ ಆದರು. ಒಂದೇ ಜನಿಸಿದ ಇವರು ಬೇರೆ ಆದರು 2001-10ರವರೆಗೆ ನಿರ್ಮಲ್ ಪ್ರಕಾಶ್ ಜೊತೆ ಜೀವನ ನಡೆಸಿದರು. 2012-17ರವರೆಗೆ ಕಮಲ್ ರಾಯ್ ಹಾಗೂ 2019-20ರ ಅವಧಿಯಲ್ಲಿ ಅಭಿಲಾಶ್ ಜೊತೆ ಅವರು ವಿವಾಹ ಆದರು. ನಟಿಗೆ ಆರ್ಯನ್ ಹೆಸರಿನ ಮಗ ಇದ್ದಾನೆ. 2011ರಲ್ಲಿ ಈತ ಜನಿಸಿದ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.