ನವರತ್ನಗಳು ಅದೃಷ್ಟವನ್ನು ತರಬಲ್ಲವು, ಆದರೆ ಎಲ್ಲರಿಗೂ ಎಲ್ಲ ರತ್ನಗಳು ಸರಿಹೊಂದುವುದಿಲ್ಲ. ತಜ್ಞರ ಸಲಹೆ ಇಲ್ಲದೆ ಧರಿಸಿದರೆ ಅನಾಹುತ ಕಟ್ಟಿಟ್ಟ ಬುತ್ತಿ. ಖ್ಯಾತ ನಿರ್ದೇಶಕ ರೆಮೋ ಡಿಸೋಜಾ ಅವರು ನೀಲಮಣಿ ಧರಿಸಿ ತಮಗಾದ ಕರಾಳ ಅನುಭವ ಹಂಚಿಕೊಂಡಿದ್ದಾರೆ.

ಮಾಣಿಕ್ಯ, ಮುತ್ತು, ಹವಳ, ಪಚ್ಚೆ, ಪುಷ್ಯರಾಗ, ವಜ್ರ, ನೀಲ, ಗೋಮೇಧಿಕ ಮತ್ತು ವೈಢೂರ್ಯ ಎನ್ನುವ ನವರತ್ನಗಳನ್ನು ಧರಿಸುವ ಬಗ್ಗೆ ಇದಾಗಲೇ ಸಾಕಷ್ಟು ಕಡೆ ಕೇಳಿರುತ್ತೀರಿ. ಹಲವರು ಇದನ್ನು ಧರಿಸುತ್ತಿದ್ದಾರೆ ಕೂಡ. ಯಾವುದೋ ನಟ, ನಟಿ ಇದನ್ನು ಧರಿಸಿರುವುದನ್ನು ನೋಡಿಯೋ ಅಥವಾ ಸೋಷಿಯಲ್ ಮೀಡಿಯಾಗಳಲ್ಲಿ ಲೈಕ್ಸ್, ಕಮೆಂಟ್ಸ್ಗಾಗಿ ಯಾರ್ಯಾರೋ ಹಾಕಿರುವ ವಿಡಿಯೋಗಳನ್ನು ನೋಡಿಯೋ ನವರತ್ನಗಳನ್ನು ಧರಿಸುವವರ ಸಂಖ್ಯೆಯೂ ಹೆಚ್ಚುತ್ತಲೇ ಇದೆ.

ಆದರೆ ನವರತ್ನಗಳಿಗೂ, ವಿಜ್ಞಾನಕ್ಕೂ, ಮನಸ್ಸಿಗೂ ತುಂಬಾ ಆಳವಾದ ಸಂಬಂಧವಿದೆ. ಎಲ್ಲರಿಗೂ ಎಲ್ಲ ನವರತ್ನಗಳೂ ಆಗಿಬರುವುದಿಲ್ಲ. ಆದ್ದರಿಂದ ನಿಮಗೆ ತಕ್ಕ ರತ್ನ ಯಾವುದು ಎಂದು ಸೂಕ್ತ ವ್ಯಕ್ತಿಗಳಿಂದ ತಿಳಿಯದ ಹೊರತೂ ಇದನ್ನು ಧರಿಸಬೇಡಿ. ಯಾವ ರತ್ನಗಳನ್ನು ಧರಿಸದೇ ಇದ್ದರೂ ಓಕೆ, ಆದರೆ ಇನ್ನಾವುದನ್ನೋ ಧರಿಸಿ ತುಂಬಾ ಸಮಸ್ಯೆಯನ್ನು ತಂದೊಡ್ಡಿಕೊಳ್ಳಬೇಡಿ ಎನ್ನುತ್ತಾರೆ ತಜ್ಞರು.

ಇದೀಗ ಅಂಥದ್ದೇ ಒಂದು ಅನುಭವವನ್ನು ಶೇರ್ ಮಾಡಿಕೊಂಡಿದ್ದಾರೆ ಖ್ಯಾತ ನೃತ್ಯ ನಿರ್ದೇಶಕ, ಚಲನಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ರೆಮೋ ಡಿಸೋಜಾ. ಪ್ರಖ್ಯಾತ ಡಾನ್ಸ್ ರಿಯಾಲಿಟಿ ಷೋ ಝಲಕ್ ದಿಖಲಾಜಾಯೆಯ ತೀರ್ಪುಗಾರರಾಗಿರುವ ರೆಮೋ ಅವರು, ಆ ಷೋನದಲ್ಲಿ ತಮಗಾಗಿರುವ ಕರಾಳ ಅನುಭವವನ್ನು ತೆರೆದಿಟ್ಟಿದ್ದಾರೆ. ಅದಕ್ಕೆ ಕಾರಣ ಅವರು ಧರಿಸಿದ್ದ ನೀಲಮಣಿ.

ನೀಲಮಣಿಯು ಶನಿ ಗ್ರಹಕ್ಕೆ ಸಂಬಂಧಿಸಿದ ಅತ್ಯಂತ ಶಕ್ತಿಶಾಲಿ ಮತ್ತು ಅಮೂಲ್ಯವಾದ ರತ್ನವಾಗಿದೆ. ಇದು ಕೊರಂಡಮ್ ಖನಿಜದ ವಿಧವಾಗಿದ್ದು, ನವರತ್ನಗಳಲ್ಲಿ ಒಂದಾಗಿದೆ. ಜ್ಯೋತಿಷ್ಯದ ಪ್ರಕಾರ, ಇದು ತಕ್ಷಣದ ಫಲಿತಾಂಶಗಳನ್ನು ನೀಡುತ್ತದೆ ಮತ್ತು ಅದೃಷ್ಟ, ಸಂಪತ್ತು, ವೃತ್ತಿಜೀವನದಲ್ಲಿ ಯಶಸ್ಸು ಮತ್ತು ಆರೋಗ್ಯ ಪ್ರಯೋಜನಗಳನ್ನು ತರುತ್ತದೆ ಎಂದು ನಂಬಲಾಗಿದೆ. ಹಾಗೆಂದು ಎಲ್ಲರೂ ಧರಿಸಿಬಿಟ್ಟರೆ ಇದರಿಂದ ಆಗುವ ಅನಾಹುತಗಳು ಅಷ್ಟಿಷ್ಟಲ್ಲ. ಅದನ್ನೇ ರೇಮೋ ಅವರು ಹೇಳಿದ್ದಾರೆ.

ಝಲಕ್ ದಿಖಲಾ ಜಾಯೇ ಕಾರ್ಯಕ್ರಮದ ಸಂದರ್ಭದಲ್ಲಿ ನೀಲಮಣಿ ನನ್ನ ಕೈಯಲ್ಲಿ ಇತ್ತು. ನಾನು ಅಂದು ಅದ್ಯಾರೋ ಹೇಳಿದರು ಎಂದು ಧರಿಸಿಕೊಂಡು ಹೋಗಿದ್ದೆ. ಆದರೆ ಅಂದು ಸುಮ್ಸುಮ್ಮನೇ ತುಂಬಾ ಕಿರಿಕಿರಿಯಾಗುತ್ತಿತ್ತು. ಕಾರಣ ಏನೆಂದು ಗೊತ್ತೇ ಆಗಲಿಲ್ಲ. ತುಂಬಾ ಸಮಸ್ಯೆ ಎನ್ನಿಸುತ್ತಿತ್ತು. ಇನ್ನೋರ್ವ ತೀರ್ಪುಗಾರರಾಗಿದ್ದ ನಟಿ ಮಾಧುರಿ ದೀಕ್ಷಿತ್ ಕೂಡ ಈ ಬಗ್ಗೆ ಕೇಳಿದರು. ಆದರೆ ನನಗೆ ಏನು ಆಗ್ತಿದೆ ಎಂದೇ ತಿಳಿಯುತ್ತಿರಲಿಲ್ಲ ಎಂದು astro360degreebyalifya ನೀಡಿದ ಸಂದರ್ಶನದಲ್ಲಿ ರೇಮೋ ಹೇಳಿದ್ದಾರೆ.

ಬಳಿಕ ಈ ವಿಷಯವನ್ನು ಮಾಧುರಿ ಅವರಲ್ಲಿ ಹೇಳಿದೆ. ಅವರು ನನ್ನ ಕೈಯನ್ನು ನೋಡಿ ನೀಲಮಣಿಯನ್ನು ತೆಗೆಯುವಂತೆ ಹೇಳಿದರು. ನನ್ನ ಅಸಿಸ್ಟೆಂಟ್ಗೆ ಕರೆದು, ಅವನಿಗೆ ನೀಲಮಣಿ ಕೊಟ್ಟಾಗ ತುಂಬಾ ರಿಲ್ಯಾಕ್ಸ್ ಆಯಿತು. ಆಗಲೇ ತಿಳಿದದ್ದು ಇದೇ ನನಗೆ ಸಮಸ್ಯೆ ಉಂಟು ಮಾಡುತ್ತಿದೆ ಎಂದು ರೇಮೋ, ಆ ನೀಲಮಣಿಯನ್ನು ತನ್ನ ಬಳಿಗೆ ಇಟ್ಟುಕೊಂಡಿದ್ದ ಅಸಿಸ್ಟೆಂಟ್ ಭಯಾನಕ ಅನುಭವವನ್ನೂ ಹಂಚಿಕೊಂಡಿದ್ದಾರೆ.

ಕೆಲವೇ ಗಂಟೆಗಳಲ್ಲಿ ಆತ ಓಡೋಡಿ ಬಂದ. ಸಿಕ್ಕಾಪಟ್ಟೆ ಬೆವರುತ್ತಿದ್ದ. ನಾನು ಶಾಕ್ ಆದೆ. ಆತ ನೀಲಮಣಿಯನ್ನು ನನಗೆ ವಾಪಸ್ ಮಾಡಿ, ದಯವಿಟ್ಟು ವಾಪಸ್ ತೆಗೆದುಕೊಳ್ಳಿ. ನನ್ನಿಂದ ಇಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ. ತುಂಬಾ ಹಿಂಸೆಯಾಗುತ್ತಿದೆ ಎಂದಾಗ, ನನಗೂ ಶಾಕ್ ಆಯಿತು. ಆ ಬಳಿಕ, ಅದನ್ನು ನಮ್ಮ ವ್ಯಾನಿಟಿಬಸ್ನಲ್ಲಿ ಇಡುವಂತೆ ಆತನಿಗೆ ಹೇಳಿದಾಗ ಅದನ್ನು ಆತ ಇಟ್ಟುಬಂದ. ಆ ಬಳಿಕ ಎಲ್ಲವೂ ಸುಗಮವಾಗಿ ನಡೆಯಿತು. ಈ ಘಟನೆ ಬಳಿಕ ನವರತ್ನಗಳ ಮಾಹಿತಿಯನ್ನು ನಾನು ಪಡೆದೆ ಎಂದು ಹೇಳಿದ್ದಾರೆ.

Source link
ನವರತ್ನ ಧರಿಸೋ ಮುನ್ನ ಎಚ್ಚರ, ಎಚ್ಚರ: ಶಾಕಿಂಗ್ ಅನುಭವ ಹಂಚಿಕೊಂಡ ಖ್ಯಾತ ನಿರ್ದೇಶಕ ರೆಮೋ ಡಿಸೋಜಾ