Headlines

ನವೀಕರಿಸಬಹುದಾದ ಇಂಧನ: 300 ಬಿಲಿಯನ್ ಯುಎಸ್ ಡಾಲರ್ ಹೂಡಿಕೆ ಅಗತ್ಯ; ಪ್ರಲ್ಹಾದ್​ ಜೋಶಿ

ನವೀಕರಿಸಬಹುದಾದ ಇಂಧನ: 300 ಬಿಲಿಯನ್ ಯುಎಸ್ ಡಾಲರ್ ಹೂಡಿಕೆ ಅಗತ್ಯ; ಪ್ರಲ್ಹಾದ್​ ಜೋಶಿ


ಬೆಂಗಳೂರು, ಜನವರಿ 11: ಭಾರತ (ಭಾರತ) ನವೀಕರಿಸಬಹುದಾದ ಇಂಧನ ಸಾಮರ್ಥ್ಯ 266 ಗಿಗಾವ್ಯಾಟ್ ದಾಟಿಲ್ಲದೆ, ದೇಶವನ್ನು ಜಾಗತಿಕ ನಾಯಕ ಸ್ಥಾನದಲ್ಲಿರಿಸಿದೆ. ಜಾಗತಿಕ ಇಂಧನ ಪರಿವರ್ತನೆಗೆ ಅಭೂತಪೂರ್ವ ಹೂಡಿಕೆ ಮತ್ತು ಸಹಕಾರದ ಅಗತ್ಯವಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ (ಪ್ರಹ್ಲಾದ ಜೋಶಿ) ಹೇಳಿದರು.

ಯುಎಇಯ ಅಬುಧಾಬಿಯಲ್ಲಿ ನಡೆದ 16ನೇ ಐಆರ್‌ಇಎನ್‌ಎ ಅಸೆಂಬ್ಲಿಯ ಪೂರ್ಣ ಅಧಿವೇಶನ ಉದ್ದೇಶಿಸಿ ಮಾತನಾಡಿದ ಸಚಿವರು, ಭಾರತಕ್ಕೆ 2030ರ ವೇಳೆಗೆ ಸುಮಾರು 300 ಬಿಲಿಯನ್ ಯುಎಸ್‌ಡಿ ಡಾಲರ್ ಹೂಡಿಕೆಯ ಅಗತ್ಯವಿದೆ. ಇದು ನವೀಕರಿಸಬಹುದಾದ ಇಂಧನ ಉತ್ಪಾದನೆ, ಸಂಗ್ರಹಣೆ, ಹಸಿರು ಹೈಡ್ರೋಜನ್, ಗ್ರಿಡ್‌ಗಳು ಮತ್ತು ಉತ್ಪಾದನಾ ವಲಯಗಳಲ್ಲಿ ಬೃಹತ್ ಅವಕಾಶಗಳನ್ನು ಸೃಷ್ಟಿಸಲಿದೆ ಎಂದು ಹೇಳಿದ್ದಾರೆ.

ಸೂರ್ಯಘರ್‌, ಪಿಎಂ-ಕುಸುಮ್ ಯೋಜನೆ ಲಕ್ಷಾಂತರ ಜನಕ್ಕೆ ಪ್ರಯೋಜನ

ದೇಶದ ಪಿಎಂ ಸೂರ್ಯಘರ್ ಮುಫ್ತ್ ಬಿಜಿಲಿ ಯೋಜನೆ ಎರಡು ವರ್ಷಕ್ಕೆ ಸುಮಾರು 25 ಲಕ್ಷ ಮನೆಗಳು ರೂಫ್‌ಟಾಪ್ ಸೋಲಾರ್ ಅಳವಡಿಸಿಕೊಂಡಿವೆ ಮತ್ತು ಮಾರ್ಚ್ 2027 ರ ವೇಳೆಗೆ 1 ಕೋಟಿ ಮನೆಗಳನ್ನು ತಲುಪುವ ಗುರಿಯನ್ನು ಹೊಂದಲಾಗಿದೆ. ಅದರಂತೆ ಪಿಎಂ-ಕುಸುಮ್ ಯೋಜನೆಡಿ ಡೀಸೆಲ್ ಪಂಪ್‌ಗಳ ಬದಲಾವಣೆ ಮತ್ತು ಕೃಷಿ ಫೀಡರ್‌ಗಳ ಸೌರೀಕರಣದ ಮೂಲಕ ಸುಮಾರು 21.7 ಲಕ್ಷ ರೈತರು ಪ್ರಯೋಜನ ಪಡೆದಿದ್ದಾರೆ.

ಇದನ್ನೂ ಓದಿ: ಸೋಮನಾಥಪುರದಲ್ಲಿ ಪ್ರಧಾನಿ ಮೋದಿ ಶೌರ್ಯಯಾತ್ರೆ; 13ನೇ ಶತಮಾನದ ಹುತಾತ್ಮಕರಿಗೆ ಗೌರವ; ಡೋಲು ಡಮರುಗ ಸದ್ದು

ಶುದ್ಧ ಹೂಡಿಕೆಗೆ ಭಾರತ ಜಗತ್ತಿನ ಅತ್ಯಂತ ಆಕರ್ಷಕ ತಾಣಗಳಲ್ಲಿ ಒಂದಾಗಿ ಮುಂದುವರಿದಿದೆ. ವಿಶೇಷವಾಗಿ ಅಭಿವೃದ್ಧಿ ಅಭಿವೃದ್ಧಿ ಆಕಾಂಕ್ಷೆಗಳನ್ನು ರಾಜಿ ಮಾಡಿಕೊಳ್ಳದೆ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ವಿಸ್ತರಿಸಲು ಬೆಂಬಲ ನೀಡುವ ತಂತ್ರಜ್ಞಾನ ವಿನಿಮಯ, ಸಾಮರ್ಥ್ಯ ವೃದ್ಧಿ ಮತ್ತು ಸೌಲಭ್ಯಗಳ ಪ್ರಾಮುಖ್ಯತೆಯಿದೆ ಎಂದು ಅಭಿಪ್ರಾಯಪಟ್ಟರು.

ಪ್ರಲ್ಹಾದ್ ಜೋಶಿ ಟ್ವೀಟ್

ಭಾರತ ಇಂಧನ ಪರಿವರ್ತನೆಯಲ್ಲಿ ‘ವಸುಧೈವ ಕುಟುಂಬಕಂ’ ಎಂಬಂತೆ ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ತತ್ವದಿಂದ ಮಾರ್ಗದರ್ಶಿಸ ಮತ್ತು ದೀರ್ಘಕಾಲಿಕ ದೃಷ್ಟಿಕೋನವನ್ನು ಹೊಂದಿದೆ. 2030ರ ವೇಳೆಗೆ 500 ಗಿಗಾವ್ಯಾಟ್ ಪಳೆಯುಳಿಕೆಯೇತರ ಇಂಧನ ಆಧಾರಿತ ವಿದ್ಯುತ್ ಸಾಮರ್ಥ್ಯವನ್ನು ಸ್ಥಾಪಿಸುವ ಮತ್ತು 2070ರ ವೇಳೆಗೆ ನಿವ್ವಳ ಶೂನ್ಯ ಹೊರಸೂಸುವಿಕೆಯನ್ನು ಸಾಧಿಸುವ ಹೆಜ್ಜೆ ಹಾಕಿದೆ.

ಪ್ಯಾರಿಸ್ ಒಪ್ಪಂದದಂತೆ ‘ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆ’ ಗುರಿಗಿಂತ 5 ವರ್ಷಗಳ ಮೊದಲೇ ಅಂದರೆ 2025ರಲ್ಲೇ ಭಾರತ ಶೇ.50ರಷ್ಟನ್ನು ಪಳೆಯುಳಿಕೆಯೇತರ ಇಂಧನ ಮೂಲಗಳಿಂದ ಸಾಧಿಸಲಾಗಿದೆ. ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾಗಿರುವ ಭಾರತ, ಗ್ರಿಡ್ ಅಧುನೀಕರಣ, ಹಸಿರು ಇಂಧನ ಕಾರಿಡಾರ್‌ಗಳ ಅಭಿವೃದ್ಧಿ ಮತ್ತು ದಿನದ 24 ಗಂಟೆಗಳ ಕಾಲ ನವೀಕರಿಸಿದ ಇಂಧನ ಯೋಜನೆಗಳಂತಹ ಹೊಸ ಬಿಡ್ಡಿಂಗ್ ವಿಧಾನಗಳ ಮೂಲಕ ವಿಶ್ವಾಸಾರ್ಹ ಮತ್ತು ಸುಸ್ಥಿರ ವಿದ್ಯುತ್ ವ್ಯವಸ್ಥೆಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.

ಭಾರತ ಸಿದ್ಧ

2025ರ ವರ್ಷದಲ್ಲಿ ಭಾರತ ಸುಮಾರು 50 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸೇರಿಸಲಾಗಿದೆ. ಇಂಧನ ಪರಿವರ್ತನೆ ಸಮಾನತೆ ಮತ್ತು ಒಳಗೊಳ್ಳುವಿಕೆಯಿಂದ ಪ್ರೇರಿತವಾದ ಜನ ಚಳವಳಿಯಾಗಬೇಕು. ಜಾಗತಿಕವಾಗಿ ನವೀಕರಿಸಬಹುದಾದ ಇಂಧನ ಪರಿವರ್ತನೆ ವೇಗಗೊಳಿಸಲು ಭಾರತ ತನ್ನ ಅನುಭವ, ಸಾಂಸ್ಥಿಕ ಬಲ ಮತ್ತು ತಾಂತ್ರಿಕ ಪರಿಣತಿಯನ್ನು ಹಂಚಿಕೊಳ್ಳಲು ಸಿದ್ಧವಾಗಿದೆ. ಎಲ್ಲಾ ರಾಷ್ಟ್ರಗಳು ಮತ್ತು ವಿಶೇಷವಾಗಿ ಅಲ್ಪ ಅಭಿವೃದ್ಧಿ ಹೊಂದಿದ ದೇಶಗಳು ಸಣ್ಣ ದ್ವೀಪ ಅಭಿವೃದ್ಧಿಶೀಲ ರಾಜ್ಯಗಳೊಂದಿಗೆ ನಿಕಟವಾಗಿ ಕೆಲಸ ಮಾಡಲು ಸಿದ್ಧವಾಗಿದೆ.

ಪಾಲುದಾರಿಕೆ ಬಗ್ಗೆ ಪರಾಮರ್ಶೆ

ಇದಕ್ಕೂ ಮುನ್ನ ಸಚಿವ ಪ್ರಲ್ಹಾದ್ ಜೋಶಿ, ಹವಾಮಾನ ಕ್ರಿಯೆ, ಶುದ್ಧ ಇಂಧನ ಮತ್ತು ಆಹಾರ ಭದ್ರತೆ ಕುರಿತು-ಯುಎಇ ಸಹಕಾರವನ್ನು ಹೆಚ್ಚು ಬಲವಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ ಹವಾಮಾನ ಪರಿಸರ ಬದಲಾವಣೆ ಮತ್ತು ಸಚಿವ ಡಾ.ಅಮ್ನಾ ಬಿಂತ್ ಅಬ್ದುಲ್ಲಾ ಅಲ್ ದಹಕ್ ಅವರೊಂದಿಗೆ ಸಭೆ ನಡೆಸಿದ್ದಾರೆ.

ಇದನ್ನೂ ಓದಿ: ಅಯೋಧ್ಯೆಯ ರಾಮನ ದರ್ಶನಕ್ಕೆ 450 ಕಿ.ಮೀ ಸ್ಕೇಟಿಂಗ್ ಮಾಡಿದ 9 ವರ್ಷದ ಬಾಲಕಿ

ಸಂವಾದದ ವೇಳೆ, 2014 ಮತ್ತು 2024ರ ನಡುವೆ ಸಹಿ ಮಾಡಲಾದ ಹಲವಾರು ಒಪ್ಪಂದಗಳ ಆಧಾರದ ಮೇಲೆ ಮತ್ತು ಯುಎಇಯ ‘ನೆಟ್ ಝೀರೋ 2050’ ಗುರಿಗೆ ಅನುಗುಣವಾಗಿ ನವೀಕರಿಸಬಹುದಾದ ಇಂಧನ, ಹೂಡಿಕೆ ಮತ್ತು ನಾವೀನ್ಯತೆಯ ಪಾಲುದಾರಿಕೆ ಬಗ್ಗೆ ಪರಾಮರ್ಶೆ ನಡೆಸಲಾಯಿತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 10:21 pm, ಭಾನುವಾರ, 11 ಜನವರಿ 26





Source link

Leave a Reply

Your email address will not be published. Required fields are marked *