
ರೇಣುಕಾ ಸ್ವಾಮಿ (ರೇಣುಕಾ ಸ್ವಾಮಿ) ಕೊಲೆ ಪ್ರಕರಣದ ವಿಚಾರಣೆ ನಡೆದಿದೆ. 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ವಿಚಾರಣೆ ಚಾಲ್ತಿಯಲ್ಲಿದ್ದು, ಆರೋಪಿಗಳ ಪರ ವಕೀಲರು ವಾದ ಮಂಡಿಸುತ್ತಿದ್ದಾರೆ. ಕಳೆದ ವಿಚಾರಣೆ ವೇಳೆ, ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಪವನ್ ಪರ ವಕೀಲರು, ಪ್ರಕರಣದ ತನಿಖಾಧಿಕಾರಿಗಳ ವಿರುದ್ಧವೇ ಆರೋಪ ಮಾಡಿದ್ದಾರೆ, ತನಿಖಾಧಿಕಾರಿಗಳಲ್ಲಿ ಒಬ್ಬರಾಗಿರುವ ಎಸ್ಸಿಪಿ ಚಂದನ್ ಅವರನ್ನು ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯನ್ನಾಗಿ ಪರಿಗಣಿಸಬೇಕು ಎಂದು ವಾದಿಸಿದ್ದರು.
ಬಳಿಕ ನ್ಯಾಯಲವು ವಿಚಾರಣೆ ಮುಂದೂಡಿತ್ತು. ಪವನ್ ಪರ ವಕೀಲರ ಅರ್ಜಿ ಕುರಿತು ಆದೇಶ ನೀಡಲಾಗಿದೆ ನ್ಯಾಯಾಲಯ, ಪವನ್ ಪರ ವಕೀಲರಿಗೆ ದಂಡ ವಿಧಿಸಿದೆ. ಆರೋಪಿಗಳ ಮೊಬೈಲ್ ಗಳನ್ನು ವಶಕ್ಕೆ ಪಡೆಯುವಾಗ ಫೋಟೋ ತೆಗೆದಿದ್ದರು. ಆ ಫೋಟೊನಲ್ಲಿರುವ ಟೈಲ್ಸ್ ನ ಚಿತ್ರಣವನ್ನು ಉಲ್ಲೇಖಿಸಿ, ತನಿಖಾಧಿಕಾರಿಗಳ ವಿರುದ್ಧ ಸುಳ್ಳು ಸಾಕ್ಷ್ಯ ಸೃಷ್ಟಿ, ತಿದ್ದಿದ ಆರೋಪಗಳನ್ನು ಪವನ್ ಪರ ವಕೀಲರು ಮಾಡಿದ್ದರು. ಆದರೆ ನ್ಯಾಯಾಲವು ಅರ್ಜಿಯನ್ನು ತಿರಸ್ಕರಿಸಿದ್ದು ಮಾತ್ರವೇ ಅಲ್ಲ, ನ್ಯಾಯಾಲಯದ ಸಮಯ ಹಾಳು ಮಾಡಿದ ವಕೀಲರಿಗೆ ಐದು ಸಾವಿರ ರೂಪಾಯಿ ದಂಡ ಸಹ ಹೇರಿದೆ. ಈ ಹಣವನ್ನು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸೂಚನೆ ನೀಡಿದೆ.
ಇದನ್ನೂ ಓದಿ:ರೇಣುಕಾ ಸ್ವಾಮಿ ಕೊಲೆ ಆರೋಪಿಗೆ ಮಧ್ಯಂತರ ಜಾಮೀನು ಮಂಜೂರು
ಕುಟುಂಬ ಸದಸ್ಯರ ಭೇಟಿಗೆ ಕೋರಿ ಆರೋಪಿ ದರ್ಶನ್ ಅರ್ಜಿ ಸಲ್ಲಸಿದ್ದರು. ಈ ಅರ್ಜಿಯನ್ನು ನ್ಯಾಯಾಲಯವು ಪುರಸ್ಕರಿಸಿದೆ. ಕುಟುಂಬ ಸದಸ್ಯರು, ಸ್ನೇಹಿತರ ಭೇಟಿಗೆ ಕೋರ್ಟ್ ಅನುಮತಿ ನೀಡಿದೆ. ಜೈಲು ಕೈಪಿಡಿಗನುಗುಣವಾಗಿ ಭೇಟಿಗೆ ಅವಕಾಶ ನೀಡಲು ನ್ಯಾಯಾಲಯವು ಆದೇಶ ನೀಡಿದೆ. ಈ ಜೈಲು ಅಧಿಕಾರಿಗಳಿಗೆ ನ್ಯಾಯಾಲಯವು ನಿರ್ದೇಶನವನ್ನು ನೀಡಿದೆ. ದರ್ಶನ್ ಸೆಲೆಬ್ರಿಟಿ ಎಂಬ ಕಾರಣಕ್ಕೆ ಆರೋಪಿಯ ಭೇಟಿಯ ಕುರಿತು ಕೆಲವು ಸಂದರ್ಭಗಳಲ್ಲಿ ಜೈಲು ಅಧಿಕಾರಿಗಳು ಹೇರಿದ್ದರು.
ರೇಣುಕಾ ಸ್ವಾಮಿ ಕೊಲೆ ಪ್ರಕರಣ ನಡೆದು ಎರಡು ವರ್ಷವಾದರೂ ಬಂದಿದೆ. ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಹಲವು ಆರೋಪಿಗಳು ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ದರ್ಶನ್, ಜೈಲು ಸೇರಿ ಬಳಿಕ ಜಾಮೀನು ಪಡೆದು ಹೊರಬಂದಿದ್ದರು. ಆದರೆ ಮತ್ತೆ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇದೀಗ ದರ್ಶನ್ ಸೇರಿದಂತೆ ಹಲವು ಆರೋಪಿಗಳು ಪರಪ್ಪನ ಅಗ್ರಹಾರ ಸೇರಿದಂತೆ ಇತರೆ ಕೆಲವು ಜೈಲುಗಳಲ್ಲಿದ್ದಾರೆ. ದರ್ಶನ್ ಪರ ವಕೀಲರು ಮತ್ತೆ ಜಾಮೀನಿಗೆ ಅರ್ಜಿ ಹಾಕಿಲ್ಲ ಆದರೆ ವಿಚಾರಣೆಯನ್ನು ತ್ವರಿತವಾಗಿ ನಡೆಸುವಂತೆ ನ್ಯಾಯಾಲಯದ ಬಳಿ ಮನವಿ ಮಾಡಿದ್ದಾರೆ. ಆದರೆ ಎಸ್ಪಿಪಿ ಅವರು ಸತತ ವಿಚಾರಣೆ ಅಥವಾ ತ್ವರಿತ ವಿಚಾರಣೆಗೆ ಒಪ್ಪಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ