Headlines

ಮಹತ್ವದ ಘಟ್ಟ ತಲುಪಿದ ರೇಣುಕಾಸ್ವಾಮಿ ಕೊಲೆ ಕೇಸ್: ದರ್ಶನ್ ಜೈಲು ವಾಸ ಇನ್ನೆಷ್ಟು ಕಾಲ?

ಮಹತ್ವದ ಘಟ್ಟ ತಲುಪಿದ ರೇಣುಕಾಸ್ವಾಮಿ ಕೊಲೆ ಕೇಸ್: ದರ್ಶನ್ ಜೈಲು ವಾಸ ಇನ್ನೆಷ್ಟು ಕಾಲ?


ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ (ರೇಣುಕಾಸ್ವಾಮಿ ಪ್ರಕರಣ) ನಟ ದರ್ಶನ್ ಹಾಗೂ ಗ್ಯಾಂಗ್ ವಿರುದ್ಧ ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ದೋಷಾರೋಪ ಹೊರಿಸಿದೆ. ದರ್ಶನ್ (ದರ್ಶನ್)ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳು ಇವತ್ತು ಕಿಕ್ಕಿರಿದ ಕೋರ್ಟ್‌ಗೆ ಹಾಜರಾಗಿ ದೋಷಾರೋಪ ಪ್ರಕ್ರಿಯೆಯಲ್ಲಿ ಭಾಗಿಯಾದರು. ಚಾರ್ಜ್‌ಶೀಟ್‌ನಲ್ಲಿದ್ದ ಆರೋಪಗಳ ಸಾರಾಂಶವನ್ನೇ ದೋಷಾರೋಪವಾಗಿ ಓದಿ ಹೇಳಿದರು.

ದೋಷಾರೋಪವಾಗಿ ಓದಿ ಹೇಳಿದ ನ್ಯಾಯಾಧೀಶರಿಗೆ ಎಲ್ಲಾ ಆರೋಪಿಗಳು ‘ಸುಳ್ಳು ಸುಳ್ಳು’ ಎಂದು ಉತ್ತರಿಸುವ ಮೂಲಕ ದೋಷಾರೋಪವನ್ನೇ ನಿರಾಕರಿಸಿದರು. ಸಾಕ್ಷ್ಯ ವಿಚಾರಣೆ ನಡೆಸುತ್ತಿರುವ ವಕೀಲರು ಮಾಡಿದ ಮನವಿ ಪರಿಗಣಿಸಿದ ನ್ಯಾಯಾಲಯದ ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಲಾಗಿದೆ. ಅಂದು ಎಫ್‌ಡಿಟಿ ಅಂದರೆ ಫಿಕ್ಸಿಂಗ್ ಡೇಟ್ ಫಾರ್ ಟ್ರಯಲ್ ಪ್ರಕ್ರಿಯೆ ನಡೆದ ಸಾಕ್ಷ್ಯ ವಿಚಾರಣೆಗೆ ದಿನಾಂಕ ನಿಗದಿಪಡಿಸುವ ಸಾಧ್ಯತೆ ಇದೆ.

ದರ್ಶನ್ ಕೇಸ್ ನಲ್ಲಿ ಮುಂದಿನ ಪ್ರಕ್ರಿಯೆ: ದೋಷಾರೋಪ ನಿಗದಿಯಾಗಿರುವುದು ಈಗ ವಿಶೇಷ ಸಾರ್ವಜನಿಕ ಪ್ರಾಸಿಕ್ಯೂಟರ್ ಸಾಕ್ಷಿಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಒದಗಿಸಬೇಕಾಗಿದೆ. ಸಾಕ್ಷಿಗಳ ಪಟ್ಟಿಯನ್ನು ಪರಿಶೀಲಿಸಿದ ಬಳಿಕ ಸಾಕ್ಷ್ಯ ವಿಚಾರಣೆಗೆ ದಿನಾಂಕ ನಿಗದಿಪಡಿಸಿ ಒಬ್ಬೊಬ್ಬರ ಸಾಕ್ಷಿಗಳಿಗೆ ಕೋರ್ಟ್ ಸಮನ್ಸ್ ನೀಡಲಿದೆ. ದರ್ಶನ್ ಕೇಸ್ ನಲ್ಲಿ ಪ್ರತ್ಯಕ್ಷ ಸಾಕ್ಷಿಗಳಿದ್ದು ಅವರ ಹೇಳಿಕೆಯನ್ನು ಕೋರ್ಟ್ ದಾಖಲಿಸಲಿದೆ. ಇದಕ್ಕೆ ಪೂರಕವಾಗಿ ಕೊಲೆಗೆ ಬಳಸಿದ ಮರದ ಕೊಂಬೆ, ನೈಲಾನ್ ಹಗ್ಗ, ಲಾಠಿ ಸಾಕ್ಷ್ಯವಾಗಿ ಬಳಕೆ ಮಾಡಲಿದ್ದಾರೆ. ಇಲ್ಲದೇ, ತಾಂತ್ರಿಕ ಸಾಕ್ಷಿಗಳು, ಎಫ್‌ಎಸ್‌ಎಲ್‌ನಲ್ಲಿ ಹೇಳಿಕೆಯನ್ನೂ ಕೋರ್ಟ್ ದಾಖಲಿಸಬೇಕು.

ಇದನ್ನೂ ಓದಿ: ರೇಣುಕಾಸ್ವಾಮಿ ಕೇಸ್: ಮುಂದಿನ ಕೋರ್ಟ್ ಪ್ರಕ್ರಿಯೆ ಬಗ್ಗೆ ದರ್ಶನ್ ಪರ ಲಾಯರ್ ಮಾಹಿತಿ

ಬಳಿಕ ಎಲ್ಲ ಸಾಕ್ಷಿಗಳನ್ನೂ ಆರೋಪಿಗಳ ಪರ ವಕೀಲರು ಪಾಟೀಸವಾಲಿಗೆ ಒಳಪಡಿಸಲಿದ್ದಾರೆ. ನಂತರ ಸಿಆರ್‌ಪಿಸಿ 313 ಆರೋಪಿಗಳ ಹೇಳಿಕೆಯನ್ನೂ ಕೋರ್ಟ್ ದಾಖಲಿಸಲಿದೆ. ಬಳಿಕ ಆರೋಪಿಗಳ ಪರ ಸಾಕ್ಷ್ಯವಿದ್ದರೆ ಹಾಜರುಪಡಿಸಲು ಕೋರ್ಟ್ ಅವಕಾಶ ನೀಡಲಿದೆ. ಅದಾದ ಬಳಿಕ ಪ್ರಾಸಿಕ್ಯೂಷನ್ ಹಾಗೂ ಆರೋಪಿಗಳ ವಾದಮಂಡನೆ ಆಲಿಸಲಿರುವ ಕೋರ್ಟ್ ಬಳಿಕ ಅಂತಿಮವಾಗಿ ತೀರ್ಪು ಪ್ರಕಟಿಸಲಿದೆ.

ಇದನ್ನೂ ಓದಿ:

ಜಾಮೀನು ಸಿಗುವ ಸಾಧ್ಯತೆ ಕಡಿಮೆ:

ಪ್ರಮುಖ ಸಾಕ್ಷಿಗಳ ಸಾಕ್ಷ್ಯ ವಿಚಾರಣೆ ಮುಗಿಯುವವರೆಗೆ ದರ್ಶನ್‌ಗೆ ಜಾಮೀನು ಸಿಗುವ ಸಾಧ್ಯತೆ ಕಡಿಮೆ. ಪ್ರಮುಖ ಸಾಕ್ಷಿಗಳ ಹೇಳಿಕೆ, ಪಾಟೀಸವಾಲಿಗೆ ಒಳಪಡಿಸಿದ ಬಳಿಕವಷ್ಟೇ ಜಾಮೀನು ಕೋರಿ ದರ್ಶನ್ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಅದಕ್ಕೆ ಇನ್ನೂ ಹಲವು ತಿಂಗಳು ಸಮಯ ಹಿಡಿಯಲಿದೆ. ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿರುವ ಪ್ರಕರಣ ಆಗದಿದ್ದರೆ ದರ್ಶನ್ ಭವಿಷ್ಯವನ್ನು 57ನೇ ಸಿಸಿ ಕೋರ್ಟ್‌ಗೆ ನಿರ್ಧರಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *