ರೇಣುಕಾ ಸ್ವಾಮಿ (ರೇಣುಕಾ ಸ್ವಾಮಿ) ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳು ಸಾಕ್ಷ್ಯ ತಿದ್ದಿದ್ದಾರೆ ಎಂಬ ಆರೋಪ ಇತ್ತೀಚೆಗೆ ಕೇಳಿ ಬಂದಿತ್ತು. ಇದರ ವಿರುದ್ಧ ದರ್ಶನ್ ಅಭಿಮಾನಿಗಳು ಪ್ರತಿಭಟನೆ ನಡೆಸಲಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಆದರೆ ಇದೀಗ ಈ ಆರೋಪಕ್ಕೆ ಎಸ್ ಪಿಪಿ ಪ್ರಸನ್ನ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜೊತೆಗೆ ಆರೋಪಿಯೊಬ್ಬರ ಪರ ವಕೀಲರು ಉದ್ದೇಶಪೂರ್ವಕವಾಗಿ ಹಾಗೂ ಇಂಥಹ ಆರೋಪಗಳನ್ನು ಕೇವಲ ಪ್ರಚಾರಕ್ಕಾಗಿ ಮಾಡುತ್ತಿದ್ದಾರೆ.
57ನೇ ಸಿಸಿಹೆಚ್ ಕೋರ್ಟ್ ವಾದಿಸಿದ ಎಸ್ ಪಿಪಿ ಪ್ರಸನ್ನ ಕುಮಾರ್ ಅವರು, ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎ3 ಆರೋಪಿ ಪವನ್ ಪರ ವಕೀಲರು ಪ್ರಚಾರಕ್ಕಾಗಿ ಮೆಮೊ ಸಲ್ಲಿಸಿ, ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಮೊಬೈಲ್ ಸಂಖ್ಯೆ, ಐಎಂಐಐ ಸಂಖ್ಯೆಗಳ ಬಗ್ಗೆ ಆರೋಪಿಗಳೇ ತಕರರಾರು ಎತ್ತಿಲ್ಲ, ಅವರು ಎತ್ತಿರುವ ಪ್ರಶ್ನೆಗಳಿಗೆ ತನಿಖಾಧಿಕಾರಿಗಳೇ ನ್ಯಾಯಾಲಯದಲ್ಲಿ ಉತ್ತರ ನೀಡಲಿದ್ದಾರೆ’.
ತನಿಖಾಧಿಕಾರಿಯನ್ನು ಆರೋಪಿ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೂ ಸಹ ಪವನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದಾರೆ. ಇದೊಂದು ಹಾಸ್ಯಾಸ್ಪದ ಅರ್ಜಿ, ಈ ರೀತಿಯ ಅನವಶ್ಯಕ ಅರ್ಜಿಗಳನ್ನು ಸಲ್ಲಿಸಿ ಮಾಧ್ಯಮಗಳಲ್ಲಿ ಹೇಳಿಕೆಗಳನ್ನು ನೀಡಲಾಗುತ್ತಿದೆ. ಯಾವುದೇ ಪವನ್ ಪರ ವಕೀಲರು ಸಲ್ಲಿಸಿರುವ ಅರ್ಜಿಯನ್ನು ವಜಾ ಮಾಡಬೇಕು ಎಂದು ಪವನ್ ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ:ದರ್ಶನ್ ಕ್ಷಮೆ ಕೇಳಿದರೆ ಒಪ್ಪಿಕೊಳ್ತೀರಾ? ರೇಣುಕಾ ಸ್ವಾಮಿ ತಂದೆ ಹೇಳಿದ್ದೇನು?
ಪ್ರತಿದಿನವೂ ದರ್ಶನ್ ಪರ ವಕೀಲರು ಸಲ್ಲಿಸಿರುವ ತಕರಾರು ಎತ್ತಿದ ಪ್ರಸನ್ನ ಅವರು, ಪ್ರತಿದಿನ ವಿಚಾರಣೆ ನಡೆಸಲು ಸಾಧ್ಯವಿಲ್ಲವೆಂದು ಸೂಚಿಸಿದ್ದಾರೆ’ ಎಂದು ಅರ್ಜಿ ಸಲ್ಲಿಸಿದ್ದಾರೆ. ಇನ್ನು ಕುಟುಂಬ ಸದಸ್ಯರ ಭೇಟಿಗೆ ಅವಕಾಶ ಕೋರಿ ದರ್ಶನ್ ಸಲ್ಲಿಸಿರುವ ಅರ್ಜಿಯ ಬಗ್ಗೆಯೂ ಪ್ರತಿವಾದ ಮಂಡಿಸಿದ ಪ್ರಸನ್ನ ಅವರು, ‘ಜೈಲು ಅಧಿಕಾರಿಗೆ ಮನವಿ ಸಲ್ಲಿಸದೇ ನೇರ ಅರ್ಜಿ ಸಲ್ಲಿಸಲಾಗಿದೆ ಈ ನಿಯಮಕ್ಕೆ ಬಾಹಿರ. ಜೈಲಿನಲ್ಲಿರುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ, ನ್ಯಾಯಾಲಯಕ್ಕೆ ಖುದ್ದು ಹಾಜರುಪಡಿಸಲು ಆರೋಪಿಗಳು ಕೋರಿದ್ದಾರೆ ಇದರಿಂದ ದರ್ಶನ್ ಭದ್ರತೆಗೆ ಸಮಸ್ಯೆ ಆಗಲಿದೆ ಎಂದು ಪ್ರಸನ್ನ ವಾದಿಸಿದ್ದಾರೆ. ಅರ್ಜಿಗಳ ಕುರಿತು ಆದೇಶವನ್ನು ನ್ಯಾಯಾಲಯವು ಕಾಯ್ದಿರಿಸಿದೆ.
ತನಿಖಾಧಿಕಾರಿಯು ಸಾಕ್ಷ್ಯಗಳನ್ನು ತಿರುಚಿದ್ದು, ಸುಳ್ಳು ಸಾಕ್ಷ್ಯವನ್ನು ಸೃಷ್ಟಿಸಿಲ್ಲ ಎಂದು ಈ ಪ್ರಕರಣದಲ್ಲಿ 18ನೇ ಆರೋಪಿಯಾಗಿ ಪವನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದಾರೆ. ಇದೇ ಪ್ರಕರಣಕ್ಕೆ ಮಹಜರು ನಡೆದ ಸ್ಥಳಗಳಿಗೆ (ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯೂ ಸೇರಿದಂತೆ) ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಲು ಅವಕಾಶ ಕೊಡಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ. ಈ ಬಗ್ಗೆ ಕಾಮಾಕ್ಷಿಪಾಳ್ಯ ಪೊಲೀಸರ ಅಭಿಪ್ರಾಯವನ್ನು ನ್ಯಾಯಾಲಯ ಕೇಳಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ