ಗಣರಾಜ್ಯೋತ್ಸವ ದಿನಾಚರಣೆಗೆ ಸಾರ್ವಜನಿಕರಿಗೆ ಇ-ಪಾಸ್
ಬೆಂಗಳೂರು, ಜನವರಿ 22: ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಜನವರಿ 26 ರಂದು ನಡೆಯಲಿರುವ 77ನೇ ಗಣರಾಜ್ಯೋತ್ಸವ ದಿನಾಚರಣೆ (ಗಣರಾಜ್ಯೋತ್ಸವ) ಕಾರ್ಯಕ್ರಮ ವೀಕ್ಷಿಸಲು ಸಾರ್ವಜನಿಕರಿಗೆ ಇ-ಪಾಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ ರವರು. ಆಸಕ್ತರು ಸೇವಾ ಸಿಂಧು ವೆಬ್ಸೈಟ್ (www.sevasindhu.karnataka.gov.in) ನಲ್ಲಿ ಜನವರಿ 24, 2026 ರ ಸಂಜೆ 5 ಗಂಟೆಯೊಳಗೆ ಎಲ್ಲಾ ವೈಯಕ್ತಿಕ ವಿವರಗಳನ್ನು ನಮೂದಿಸಿ ಇ-ಪಾಸ್ ಅನ್ನು ಪಡೆಯಬಹುದು.
ಇ-ಪಾಸ್ ಗಳನ್ನು ಹೊಂದಿರುವವರು ಪರೇಡ್ ಮೈದಾನದ ಪ್ರವೇಶ ದ್ವಾರ ಸಂಖ್ಯೆ 05 ರಲ್ಲಿ ಪರಿಶೀಲನೆಗಾಗಿ ಇ-ಪಾಸ್ ನ ಮುದ್ರಿತ ಪ್ರತಿಯನ್ನು ಅಥವಾ ಡಿಜಿಟಲ್ (ಮೊಬೈಲ್ ) ಪ್ರತಿಯನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಅವರು ಬಯಸುತ್ತಾರೆ.
ಇ-ಪಾಸ್ ನೋಂದಣಿ ಪ್ರಕ್ರಿಯೆ ಕುರಿತು ಸಹಾಯಕ್ಕಾಗಿ ಸೇವಾ ಸಿಂಧು ವೈಬ್ಸೈಟ್ನಲ್ಲಿ ಸಹಾಯ ವಿಭಾಗವನ್ನು ವಿಕ್ಷೀಸ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ಪ್ರಕಟಿಸಿದ್ದಾರೆ.
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
- ಸೇವಾಸಿಂಧು ಪೋರ್ಟಲ್ ಓಪನ್ ಮಾಡಿ
- ಮೊದಲು ನೋಂದಾಯಿತ ಬಳಕೆದಾರ ಲಾಗಿನ್ ಆಯ್ಕೆಯನ್ನು ಕ್ಲಿಕ್ ಮಾಡಿ
- ನಿಮ್ಮ ಆಧಾರ್ ಸಂಖ್ಯೆಗೆ ಲಗತ್ತಿಸಿದ ಮೊಬೈಲ್ ನಂ. ಟೈಪ್ ಮಾಡಿ
- OTP ಬರಲು ಕಾಯಿರಿ ಮತ್ತು ನಮೂದಿಸಿ
- ಮೊದಲು ನೋಂದಣಿ ಮಾಡಿಲ್ಲ ಅಂದ್ರೆ, New User/Register ಖಾತೆಯನ್ನು ರಚಿಸಿ
- ಲಾಗಿನ್ ಆದ ಮೇಲೆ “ಇಲಾಖೆಗಳು ಮತ್ತು ಸೇವೆಗಳು” ಅಥವಾ “ಸೇವೆಗಳಿಗಾಗಿ ಅರ್ಜಿ” ಐಟಂ ಹೋಗಿ “ಗಣರಾಜ್ಯೋತ್ಸವ ಇ-ಪಾಸ್” ಎಂಬ ಆಯ್ಕೆಯನ್ನು ಹುಡುಕಿ
- ನಿಮ್ಮ ವ್ಯಕ್ತಿಗತ ವಿವರಗಳು (ಹೆಸರು, ವಯಸ್ಸು, ಲಿಂಗ, ತಾಯಿ/ತಂಡೆಯ ಹೆಸರು ಮತ್ತು ನಗರ/ಜಿಲ್ಲೆ) ಭರ್ತಿ ಮಾಡಿ OTP ಪರಿಶೀಲನೆ ಮತ್ತು ಯಾವುದಾದರೂ ಅಗತ್ಯ ಮಾಹಿತಿಯನ್ನು ಸರಿಯಾಗಿ ನಮೂದಿಸಿ
- ಎಲ್ಲಾ ಮಾಹಿತಿಯನ್ನು ಸರಿಯಾಗಿ ಪರಿಶೀಲಿಸಿ
- ಎಲ್ಲಾ ವಿವರಗಳು ಸರಿಯಾಗಿ ಇದ್ದರೆ “ಸಲ್ಲಿಸು” ಕ್ಲಿಕ್ ಮಾಡಿ
- ಅರ್ಜಿ ಸಲ್ಲಿಸಿದ ನಂತರ ಇ-ಪಾಸ್ ಪ್ರದರ್ಶನ ಆಗುತ್ತದೆ
- ಈ ಪಾಸ್ ಅನ್ನು ಡೌನ್ಲೋಡ್ ಮಾಡಿ ಪ್ರಿಂಟ್ ಮಾಡಿ ಇಟ್ಟುಕೊಳ್ಳಿ
- ಜನವರಿ 26 ರಂದು ಆಧಾರ್/ಫೋಟೋ ಐಡಿ ಜೊತೆಗೆ ಇದು ಮುಖ್ಯವಾಗಿ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ