ಬೆಂಗಳೂರು, (ಜನವರಿ 11): ಖಾಸಗಿ ಕಂಪನಿಗಳು ಕನ್ನಡ (ಕನ್ನಡ) ನೆಲದಲ್ಲಿದ್ರೂ, ಕನ್ನಡಿಗರನ್ನ ಕಡೆಗಣಿಸೋದ್ರಲ್ಲಿ ಮುಂದಾಗಿದ್ದಾರೆ. ಕಳೆದ ವಾರ ಕಾಲೇಜ್ ನಲ್ಲಿ ಕನ್ನಡ ಮಾತನಾಡುವುದಕ್ಕೆ ದೊಡ್ಡ ಗಲಾಟೆಯೇ ನಡೆದಿತ್ತು. ಇದೀಗ ಬೆಂಗಳೂರು (ಬೆಂಗಳೂರು) ಜೆ ಪಿ ನಗರದಲ್ಲಿರುವ ‘ಸ್ಕಿಲ್ಸ್ ಸೋನಿಕ್ಸ್’ ಅನ್ನೋ ಖಾಸಗಿ ಕಂಪನಿಯಿಂದ ನೌಕ್ರಿ ಡಾಟ್ ಕಾಂನಲ್ಲಿ ನೌಕರಿಗಾಗಿ ಪ್ರಕಟಣೆ ಹೊರಡಿಸಿದೆ, ಕನ್ನಡ ಗೊತ್ತಿಲ್ಲದ ಅಭ್ಯರ್ಥಿಗಳಿಗೆ ಆದ್ಯತೆ “NON KANNADA HR” ಬೇಕು ಅಂತ ಪ್ರಕಟಣೆ ಕೊಟ್ಟಿದ್ದಾರೆ. ಈ ಪ್ರಕಟಣೆಯನ್ನು ಕೆರಳಿಸಿದ್ದು, ಎಕ್ಸ್ ನಲ್ಲಿ ಭಾರೀ ಟೀಕೆಗೆ ಕನ್ನಡಿಗರ ಗುರಿಯಾಗಿದೆ. ಕೂಡಲೇ ಈ ಪೋಸ್ಟ್ ವಾಪಸ್ ತೆಗೆದುಕೊಳ್ಳಬೇಕು ಇಲ್ಲವಾದ್ರೆ ಉಗ್ರ ಹೋರಾಟ ಮಾಡಲಾಗುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಖಾಸಗಿಗಳಿಗೆ ಬದುಕೋಕೆ ಕನ್ನಡ ನೆಲ ಬೇಕು ಆದರೆ ಕಂಪನಿ ಉದ್ಯೋಗ ಮಾಡಲು ಕನ್ನಡಿಗರು ಬೇಡವಾ? ಕನ್ನಡ ನಾಡಿನಲ್ಲಿ ಬಂದು ಕನ್ನಡಿಗರಿಗೆ ಈ ರೀತಿ ಪೋಸ್ಟ್ ಹಾಕಿರೋದು ಕನ್ನಡಿಗರನ್ನ ಕೆರಳಿಸುವಂತೆ ಮಾಡಿದೆ. ಅನ್ಯ ಭಾಷಿಕರಿಗೆ ಜಾಗ ಕೊಟ್ಟಿದ್ದು ತಪ್ಪಾಯ್ತಾ? ಕೂಡಲೇ ಕನ್ನಡಿಗರನ್ನ ಕ್ಷಮೆ ಕೇಳಬೇಕು ಎಂದು ಕನ್ನಡ ಪರ ಸಂಘಟನೆಗಳು ಒತ್ತಾಯಿಸಿವೆ.