
ನವದೆಹಲಿ, ಮಾರ್ಚ್ 25: ಕಮರ್ಷಿಯಲ್ ಎಲ್ ಪಿಜಿಯ ಬಿಕ್ಕಟ್ಟು (LPG ಬಿಕ್ಕಟ್ಟು) ಶುರುವಾದಾಗಿನಿಂದ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು ಅಡುಗೆ ಮಾಡಲು ಪರದಾಡುತ್ತಿವೆ. ಕೆಲವು ರೆಸ್ಟೊರೆಂಟ್‌ಗಳು, ಇಟ್ಲಿಕ್ ಸ್ಟೌವ್‌ಗಳನ್ನು ಬಳಸುತ್ತಿವೆ. ಕೆಲವು ಹೋಟೆಲ್‌ಗಳಲ್ಲಿ ಗ್ಯಾಸ್ ಅಭಾವದ ನೆಪ ಹೇಳಿ ಗ್ರಾಹಕರು ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ. ಈ ವಿಚಾರವಾಗಿ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರದಿಂದ (CCPA) ಹೊಸ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ.
ಒಂದುವೇಳೆ ನೀವು ಹೋಗುವ ಹೋಟೆಲ್ ಬಿಲ್‌ಗಳಲ್ಲಿ ಗ್ಯಾಸ್ ಚಾರ್ಜ್ ಅಥವಾ ಎಲ್ಪಿಜಿ ಚಾರ್ಜ್ ಎಂದು ನಮೂದಿಸಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬಹುದು. ಈ ರೀತಿ ಹಣ ವಸೂಲಿ ಮಾಡುವುದು ಅಕ್ರಮ. ಗ್ಯಾಸ್ ಸರ್ಚಾರ್ಜ್, ಇಂಧನ ರಿಕವರಿ ಹೆಸರಿನಲ್ಲಿ ಬಿಲ್ ಮಾಡೋದು ಶಿಕ್ಷಾರ್ಹ ಅಪರಾಧ. ಮೆನುವಿನಲ್ಲಿ ನಮೂದಿಸಲಾದ ಬೆಲೆಗೆ ಅನ್ವಯವಾಗುವ ತೆರಿಗೆಗಳನ್ನು ಮಾತ್ರ ಸೇರಿಸಬಹುದು ಎಂದು ಸೂಚಿಸಲಾಗಿದೆ. ಹೆಚ್ಚುವರಿ ಶುಲ್ಕದಿಂದ ಗ್ರಾಹಕ ಸಂರಕ್ಷಣಾ ಕಾಯ್ದೆ ಉಲ್ಲಂಘನೆಯಾಗುತ್ತದೆ. ಆಹಾರದ ಬೆಲೆಯಲ್ಲೇ ವೆಚ್ಚ ಸೇರಿರಬೇಕು ಎಂದು ಸಿಸಿಪಿಎ ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ: ಮನೆಯಲ್ಲಿ ಪಿಜಿ ಕನೆಕ್ಷನ್ ಬಳಸದಿದ್ದರೆ ಎಲ್ಪಿಜಿ ಪೂರೈಕೆ ಸ್ಥಗಿತ; ಸರ್ಕಾರದಿಂದ ಎಚ್ಚರಿಕೆ
ಇಂಧನ, LPG, ವಿದ್ಯುತ್ ಮತ್ತು ಇತರ ಕಾರ್ಯಾಚರಣೆಯ ವೆಚ್ಚಗಳಂತಹ ಇನ್‌ಪುಟ್ ವೆಚ್ಚಗಳು ವ್ಯವಹಾರವನ್ನು ನಡೆಸುವ ವೆಚ್ಚದ ಭಾಗವಾಗಿದೆ. ಅದರ ಮೆನು ಐಟಂಗಳ ಬೆಲೆಯಲ್ಲಿ ಸೇರಿಸಬೇಕು ಎಂದು CCPA ಸ್ಪಷ್ಟಪಡಿಸಿದೆ.
ಆಹಾರದ ಬೆಲೆಯಲ್ಲೇ ಇಂಧನ ಮತ್ತು ಸೇವೆಯ ವೆಚ್ಚವನ್ನು ಸೇರಿಸಲು ಸೂಚಿಸಲಾಗಿದೆ. ಬೆಲೆ ಮತ್ತು ಅನ್ವಯವಾಗುವ ತೆರಿಗೆ ಬೇರೆ ಶುಲ್ಕ ವಿಧಿಸಲಾಗಿದೆ. ಗ್ಯಾಸ್ ದರ ಏರಿಕೆಯ ನೆಪವೊಡ್ಡಿ ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಹಾಕದಂತೆ ಸರ್ಕಾರದಿಂದ ಸೂಚನೆ ನೀಡಲಾಗುತ್ತದೆ. ಹಾಗೇ, ಕಾನೂನಿನಿಂದ ಪಾರಾಗಲು ಹೊಸ ಹೆಸರಲ್ಲಿ ಹಣ ಪಡೆಯುವುದು ಕೂಡ ಅಪರಾಧವಾಗಿದೆ. ಸೇವಾ ಶುಲ್ಕದ ನಿಯಮ ತಪ್ಪಿಸಲು ಹಣ ಪಡೆಯುವುದು ಅಪರಾಧ.
ಇದನ್ನೂ ಓದಿ: ಪಿಎನ್‌ಜಿ ಗ್ಯಾಸ್‌ಗೂ ಎಲ್‌ಪಿಜಿಗೂ ಏನು ವ್ಯತ್ಯಾಸ? ನೀವು ಪಿಎನ್ ಜಿ ಕನೆಕ್ಷನ್ ಪಡೆಯುವುದು ಹೇಗೆ?
ಹೆಚ್ಚು ಹಣ ಪಡೆದರೆ ನೀವೇನು ಮಾಡಬೇಕು?:
ಅನಗತ್ಯ ಶುಲ್ಕಗಳ ವಿರುದ್ಧ ನೀವು ರಾಷ್ಟ್ರೀಯ ಗ್ರಾಹಕ ಸಹಾಯವಾಣಿಗೆ ದೂರು ನೀಡಬಹುದು. ಸಹಾಯವಾಣಿ 1915 ಅಥವಾ ಇ-ಜಾಗೃತಿ ಪೋರ್ಟಲ್ ಮೂಲಕ ದೂರು ಸಲ್ಲಿಸಬಹುದು. ಡಿಸಿ ಅಥವಾ ಸಿಸಿಪಿಎಗೆ ಇ-ಮೇಲ್ ಮೂಲಕವೂ ದೂರು ನೀಡಬಹುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ