ಜೈಲುಗಳ ಕಮಾಂಡ್ ಸೆಂಟರ್​​ಗೆ ಚಾಲನೆ: ಅನೈತಿಕ ಚಟುವಟಿಕೆಗಳಿಗೆ ಇನ್ನಾದ್ರೂ ಬೀಳುತ್ತಾ ಬ್ರೇಕ್​​?

ಜೈಲುಗಳ ಕಮಾಂಡ್ ಸೆಂಟರ್​​ಗೆ ಚಾಲನೆ: ಅನೈತಿಕ ಚಟುವಟಿಕೆಗಳಿಗೆ ಇನ್ನಾದ್ರೂ ಬೀಳುತ್ತಾ ಬ್ರೇಕ್​​?


ಬೆಂಗಳೂರು, ಜನವರಿ 31: ರಾಜ್ಯದ ಜೈಲುಗಳಲ್ಲಿ ನಡೆಯುತ್ತಿದ್ದ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಗೃಹಸಚಿವ ಜಿ. ಪರಮೇಶ್ವರ್ ಅವರು ನೂತನ ಕಮಾಂಡ್ ಸೆಂಟರ್ ಉದ್ಘಾಟಿಸಿದರು. ಬೆಂಗಳೂರಿನ ಪರಪ್ಪನ ಅಗ್ರಹಾರ ಸೇರಿದಂತೆ ರಾಜ್ಯದ ವಿವಿಧ ಜೈಲುಗಳಲ್ಲಿ ಡ್ರಗ್ಸ್ ಸಪ್ಲೈ, ಲಿಕ್ಕರ್ ತಯಾರಿಕೆ, ಅಕ್ರಮ ಬರ್ತಡೇ ಆಚರಣೆಗಳಂತಹ ಘಟನೆಗಳು ವರದಿಯಾಗಿವೆ. ಇದು ಕಾರಾಗೃಹ ಇಲಾಖೆಗೆ ದೊಡ್ಡ ಸವಾಲಾಗಿತ್ತು. ಈ ಸಂಯೋಜನೆ, ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಹಿತೇಂದ್ರ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು ಕಾರಾಗೃಹಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತಡೆಗಟ್ಟಲು ಮತ್ತು ಪರಿಹರಿಸಲು ವರದಿಯನ್ನು ಸಲ್ಲಿಸಿ. ವರದಿಯ ಶಿಫಾರಸುಗಳ ಆಧಾರದ ಮೇಲೆ ಮತ್ತು ತಂತ್ರಜ್ಞಾನವನ್ನು ಬಳಸಿ ಜೈಲುಗಳನ್ನು ಮೇಲ್ವಿಚಾರಣೆ ಮಾಡುವ ಸಲಹೆಯಂತೆ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ.

ಸದ್ಯ 8 ಕೇಂದ್ರ ಕಾರಾಗೃಹಗಳು ಮತ್ತು 4 ಜಿಲ್ಲಾ ಜೈಲುಗಳನ್ನು ಈ ಕಮಾಂಡ್ ಸೆಂಟರ್‌ಗೆ ಸಂಪರ್ಕಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ತಾಲೂಕು ಮಟ್ಟದ ಜೈಲುಗಳನ್ನು ಸಹ ಇದೇ ರೀತಿಯಲ್ಲಿ ಸಂಪರ್ಕಿಸಬಹುದು. 24/7 ಕಣ್ಗಾವಲಿಗಾಗಿ 1076 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವನ್ನು ಬಳಸಿ ಸೂಕ್ಷ್ಮ ಘಟನೆಗಳನ್ನು ಸಹ ಪತ್ತೆ ಹಚ್ಚುವ ಸಾಮರ್ಥ್ಯ ಈ ಕೇಂದ್ರಕ್ಕಿದೆ. ಇದು ಕಾರಾಗೃಹಕ್ಕೆ ಸಂಬಂಧಿಸಿದ ಅನೈತಿಕ ಚಟುವಟಿಕೆಗಳನ್ನು ತಡೆಗಟ್ಟಲು ಮತ್ತು ಸಿಬ್ಬಂದಿಯಲ್ಲಿ ಜಾಗರೂಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *