‘ಟಾಕ್ಸಿಕ್’ ಚಿತ್ರದ ವಿರುದ್ಧ ಮತ್ತೆ ನಾಲಿಗೆ ಹರಿಬಿಟ್ಟ ಆರ್​​ಜಿವಿ; ಚಳಿಬಿಡಿಸಿದ ಕನ್ನಡಿಗರು 

‘ಟಾಕ್ಸಿಕ್’ ಚಿತ್ರದ ವಿರುದ್ಧ ಮತ್ತೆ ನಾಲಿಗೆ ಹರಿಬಿಟ್ಟ ಆರ್​​ಜಿವಿ; ಚಳಿಬಿಡಿಸಿದ ಕನ್ನಡಿಗರು 


ರಾಮ್ ಗೋಪಾಲ್ ವರ್ಮ (ಆರ್.ಜಿ.ವಿ) ಒಂದು ಕಾಲದಲ್ಲಿ ಒಳ್ಳೊಳ್ಳೆಯ ಸಿನಿಮಾ ನೀಡಿದವರು. ಆದರೆ, ಈಗ ಅವರ ಬಳಿ ಅದು ಸಾಧ್ಯವಾಗುತ್ತಿಲ್ಲ. ಅವರ ಬತ್ತಳಿಕೆಯಿಂದ ಚೆನ್ನಾಗಿರೋ ಸಿನಿಮಾ ಬರದೆ ಯಾವುದೋ ಕಾಲವೇ ಆಗಿ ಹೋಗಿದೆ. ಆದರೆ, ಇದಕ್ಕೆಲ್ಲ ಅವರು ತಲೆಕೆಡಿಸಿಕೊಂಡಿಲ್ಲ. ಸಿನಿಮಾ ಮಾಡದೇ ಇದ್ದರೂ ಸದಾ ಪ್ರಚಾರದಲ್ಲಿ ಇರೋದು ಹೇಗೆ ಎಂದು ಕಂಡು ಹಿಡಿದಿದ್ದಾರೆ. ಈಗ ಅದೇ ರೀತಿ ಮಾಡಲು ಹೋಗಿ ಟ್ರೋಲ್ ಆಗಿದ್ದಾರೆ. ಆ ಬಳಿಕ ಅದಕ್ಕೆ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದೆ.

ಮಾರ್ಚ್ 19ರಂದು ‘ಟಾಕ್ಸಿಕ್’ ಹಾಗೂ ‘ಧುರಂದರ್ 2’ ಸಿನಿಮಾಗಳು ಒಟ್ಟಿಗೆ ತೆರೆಗೆ ಬರುತ್ತಿವೆ. ಈ ಚಿತ್ರಗಳ ಬಗ್ಗೆ ನಿರೀಕ್ಷೆ ಇದೆ. ಸಿನಿಮಾ ಒಟ್ಟಿಗೆ ತೆರೆಗೆ ಬರುವುದರಿಂದ ಖಂಡಿತ ಒಂದು ಸಿನಿಮಾಗೆ ನಷ್ಟವಾಗುತ್ತದೆ ಎಂಬ ನಂಬಿಕೆ ಅನೇಕರದ್ದು. ಆರ್ ಜೀವಿ ಕೂಡ ಇದೇ ರೀತಿಯ ಅಭಿಪ್ರಾಯ. ಆದರೆ, ಮುಖ್ಯವಾಗಿ ಅವರಿಗೆ ‘ಟಾಕ್ಸಿಕ್’ ಬಗ್ಗೆ ದ್ವೇಷ ಇದ್ದಂತೆ. ಅವರು ಮೊದಲಿನಿಂದಲೂ ಸಿನಿಮಾ ಬಗ್ಗೆ ನೆಗೆಟಿವ್ ವಿಷಯ ಸ್ಪ್ರೆಡ್ ಮಾಡುವ ಕೆಲಸ ಮಾಡುತ್ತಿದ್ದಾರೆ.

‘ಟಾಕ್ಸಿಕ್’ ಹಾಗೂ ‘ಧುರಂಧರ್ 2’ ರಿಲೀಸ್ ಆಗುತ್ತಿದೆ. ‘ಧುರಂದರ್’ ಕಲೆಕ್ಷನ್ ಎದುರು ‘ಕೆಜಿಎಫ್ 2’ ಕಲೆಕ್ಷನ್ ತುಂಬಾನೇ ಸಣ್ಣದಾಗಿ ಕಾಣಿಸುತ್ತದೆ ಎಂದು ಹೇಳಿದ್ದಾರೆ. ಈ ಮೂಲಕ ‘ಧುರಂಧರ 2’ ಎದುರು ‘ಟಾಕ್ಸಿಕ್’ ಬಂದರೆ ಯಾವ ರೀತಿಯಲ್ಲಿ ಇರಬಹುದು ಎಂದು ತಿಳಿಯಿತು ಅವರ ಮಾತಿನ ಅರ್ಥ.

‘ಈಗ ರಿಲೀಸ್ ಆಗುತ್ತಿರುವ ಸಿನಿಮಾಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಧುರಂಧ್ರ ಪ್ರದರ್ಶನದ ಬುದ್ಧಿಮತ್ತೆಯನ್ನು ಗೌರವಿಸುತ್ತದೆ ಮತ್ತು ಟಾಕ್ಸಿಕ್ ಜನರ ಮೂರ್ಖತನವನ್ನು ವೀಕ್ಷಿಸುತ್ತದೆ. ಕೆಜಿಎಫ್ 2 ಒಂದು ಸ್ಥಳೀಯ ಚಿತ್ರವಾಗಿದ್ದು, ಅದು ಜನಸಾಮಾನ್ಯರಲ್ಲಿನ ಮೂರ್ಖತನವನ್ನು ಟಾರ್ಗೆಟ್ ಮಾಡಿತ್ತು. ಧುರಂಧರ ಜನಸಾಮಾನ್ಯರಲ್ಲಿ ಬುದ್ಧಿವಂತಿಕೆಯನ್ನು ಟಾರ್ಗೆಟ್ ಮಾಡಿತ್ತು. ಈ ಮೊದಲು ಆರ್ಜಿವಿ ‘ಕೆಜಿಎಫ್ 2’ ಚಿತ್ರವನ್ನು ಹೊಗಳಿ ಮಾಡಿದ ಟ್ವೀಟ್‌ನ ತೋರಿಸಿ ಅವರಿಗೆ ಪಾಠ ಹೇಳಿಕೊಡಲಾಗಿದೆ.

ಈಗ ಈ ವಿಷಯದಲ್ಲಿ ಆರ್ ಜೀವಿಯನ್ನು ಟ್ರೋಲ್ ಮಾಡಲಾಗಿದೆ. ಆ ಬಳಿಕ ಅವರು ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ. ಅರ್ಥವಾಗದ ಎಲ್ಲಾ ಡಂಬೋಗಳಿಗೆ, ನಾನು ಸ್ಪಷ್ಟಪಡಿಸಲು ಬಯಸುವುದು ಏನೆಂದರೆ, ‘2 ಬಿಡುಗಡೆಗಳ ಸಂದರ್ಭದಲ್ಲಿ, ನಾನು ಸಿನಿಮಾದ ಶೈಲಿಗಳ ಬಗ್ಗೆ ಮಾತನಾಡುತ್ತಿದ್ದೇನೆ ನಿರ್ದಿಷ್ಟವಾಗಿ ಒಂದು ಚಿತ್ರದ ಅಲ್ಲ ಬಗ್ಗೆ’.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 7:02 am, ಸೋಮ, 23 ಫೆಬ್ರವರಿ 26





Source link

Leave a Reply

Your email address will not be published. Required fields are marked *