ಅಕ್ಕಿಯಿಂದ ಸ್ಮಾರ್ಟ್‌ ಮೆಟಿರಿಯಲ್ ಅಭಿವೃದ್ಧಿಪಡಿಸಿದ ವಿಜ್ಞಾನಿಗಳ ತಂಡ, ದುಪ್ಪಟ್ಟಾಗಲಿದೆ ಬೇಡಿಕೆ

ಅಕ್ಕಿಯಿಂದ ಸ್ಮಾರ್ಟ್‌ ಮೆಟಿರಿಯಲ್ ಅಭಿವೃದ್ಧಿಪಡಿಸಿದ ವಿಜ್ಞಾನಿಗಳ ತಂಡ, ದುಪ್ಪಟ್ಟಾಗಲಿದೆ ಬೇಡಿಕೆ

ಅಕ್ಕಿಯಿಂದ ಸ್ಮಾರ್ಟ್‌ ಮೆಟಿರಿಯಲ್ ಅಭಿವೃದ್ಧಿಪಡಿಸಿದ ವಿಜ್ಞಾನಿಗಳ ತಂಡ, ದುಪ್ಪಟ್ಟಾಗಲಿದೆ ಬೇಡಿಕೆ

ಅಕ್ಕಿಯಿಂದ ಸ್ಮಾರ್ಟ್‌ ಮೆಟಿರಿಯಲ್ ಅಭಿವೃದ್ಧಿಪಡಿಸಿದ ವಿಜ್ಞಾನಿಗಳ ತಂಡ, ದುಪ್ಪಟ್ಟಾಗಲಿದೆ ಬೇಡಿಕೆ, ಏನಿದು ಸ್ಮಾರ್ಟ್ ಮೆಟಿರಿಯಲ್ ಇದರ ಉಪಯೋಗವೇನು? ಇನ್ನು ಅಕ್ಕಿ ಬೇಡಿಕೆ ದುಪ್ಪಟ್ಟಾಗುವ ಸಾಧ್ಯತೆ ಇದೆ.

ಭಾರತದಲ್ಲಿ ಅಕ್ಕಿ ಬಳಕೆ ಹೆಚ್ಚು. ಅನ್ನ, ಪುಲಾವ್, ಬಿರಿಯಾನಿ ಸೇರಿದಂತೆ ಒಂದು ಒಂದೊಂದು ಬಗೆಯ ಆಹಾರಗಳಿಗೆ ಬಗೆ ಬಗೆಯ ಅಕ್ಕಿ ಬಳಸಲಾಗುತ್ತದೆ. ಅಕ್ಕಿಯಿಂದ ಆಹಾರ ಖಾದ್ಯಗಳ ಬಳಕೆ ಮಾತ್ರ ಮಾಡಲಾಗುತ್ತಿತ್ತು. ಇಷ್ಟದರೂ ಬಾರಿ ಬೇಡಿಕೆ ಇರುವ ಉತ್ಪನ್ನವಾಗಿದೆ. ಇದೀಗ ಈ ಬೇಡಿಕೆ ಡಬಲ್ ಆಗಲಿದೆ. ಕಾರಣ ಇದೇ ಅಕ್ಕಿಯಿಂದ ವಿಜ್ಞಾನಿಗಳ ತಂಡ ಸ್ಮಾರ್ಟ್ ಮೆಟಿರಿಯಲ್ ತಯಾರಿಸಿದೆ. ಸೌತಾಂಪ್ಟನ್ ವಿಶ್ವವಿದ್ಯಾಲಯ ಹಾಗೂ ಯೂನಿವರ್ಸಿಟಿ ಆಫ್ ಎಡಿನ್‌ಬರ್ಗ್ ವಿಜ್ಞಾನಿಗಳು ಸಂಶೋಧನೆಯಲ್ಲಿ ಅಕ್ಕಿಯಲ್ಲಿ ಕೆಲ ಅಂಶಗಳನ್ನು ಬಳಸಿಕೊಂಡು ಭವಿಷ್ಯದಲ್ಲಿ ಅತ್ಯಂತ ಅವಶ್ಯಕವಾಗಿ ಬೇಕಾದ ಸ್ಮಾರ್ಟ್ ಮೆಟಿರಿಯಲ್ ಅಭಿವೃದ್ಧಿಪಡಿಸಿದ್ದಾರೆ.

ಅಕ್ಕಿಯಲ್ಲಿರುವ ಅಮೈಲೋಸ್ (Amylose) ಬಳಸಿಕೊಂಡು ಈ ಸಂಶೋಧನೆ ಮಾಡಿದ್ದಾರೆ. ಇದು ಬದಲಾಗುತ್ತಿರುವ ಜಗತ್ತಿನಲ್ಲಿ ಪರಿಸರ ಸ್ನೇಹಿ ಹಾಗೂ ಅತ್ಯಂತ ಕಡಿಮೆ ಬೆಲೆಯಲ್ಲಿ ತಯಾರಿಸಬಹುದಾದ ಸ್ಮಾರ್ಟ್ ಮೆರಿಯಲ್‌ಗೆ ನಾಂದಿ ಹಾಡಿದೆ. ಈ ಸಂಶೋಧನೆಯಿಂದ ಅಕ್ಕಿಯನ್ನು ಕೇವಲ ಆಹಾರವಾಗಿ ಮಾತ್ರವಲ್ಲದೆ ತಂತ್ರಜ್ಞಾನವಾಗಿ ಬಳಸಲು ಸಾಧ್ಯ ಅನ್ನೋದು ಸಾಬೀತು ಮಾಡಿದೆ.

ಅಕ್ಕಿಯಲ್ಲಿರುವ ಪಿಷ್ಠ (Starch) ಶಾಕ ಹಾಗೂ ತೇವಾಂಶಕ್ಕೆ ವ್ಯತಿರಿಕ್ತವಾಗಿ ವರ್ತಿಸುತ್ತದೆ. ಅಂದರೆ ಅಕ್ಕಿಯನ್ನು ನೆನೆ ಹಾಕಿದಾಗ ಪಿಷ್ಠದಲ್ಲಿರುವ ಅಣುಗಳು ನೀರು ಹೀರಿಕೊಂಡು ಹಿಗ್ಗುತ್ತದೆ. ಒಣಗಿಸಿದಾಗ ಸಂಕುಚಿತಗೊಳ್ಳುತ್ತದೆ. ವಿಜ್ಞಾನಿಗಳು ಪರಿಸರ ಬದಲಾವಣೆಗೆ ತಕ್ಕಂತೆ ನೈಸರ್ಗಿಕವಾಗಿ ಆಕಾರ ಬದಲಾಸಿಕೊಳ್ಳುವ ಈ ಗುಣವನ್ನು ಆಕ್ಚುಯೇಟರ್ (Actuator) ಆಗಿ ಬಳಸಿದ್ದಾರೆ.

ಅಕ್ಕಿಯ ಪಿಷ್ಠದಿಂದ ತೆಗೆದ ಅಂಶಗಳನ್ನು ಬಳಸಿಕೊಂಡು ತೆಳುವಾದ ಪದರಗಳನ್ನು ರಚಿಸಲಾಗಿದೆ. ಈ ಪದರ ತೇವಾಂಸ ಹೆಚ್ಚಾದಾಗ ಹಿಗ್ಗುತ್ತದೆ, ಗಾಳಿಯಲ್ಲಿನ ಹ್ಯೂಮಿಡಿಟಿ ಹೆಚ್ಚಾದಾಗ ಸಂಕುಚಿತಗೊಳ್ಳುತ್ತದೆ ಅಥವಾ ಬಾಗುತ್ತದೆ. ಈ ಅಂಶವನ್ನು ಸೆನ್ಸಾರ್, ಸಣ್ಣ ರೋಬೋಟ್‌ಗಳಲ್ಲಿ ಬಳಕೆ ಮಾಡಲು ಸಾಧ್ಯವಿದೆ ಅನ್ನೋದು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಇದರಿಂದ ಆಹಾರಕ್ಕೆ ಮಾತ್ರವಲ್ಲ ಇದೀಗ ಸ್ಮಾರ್ಟ್ ಮೆಟಿರಿಯಲ್ ಮಾಡಲು ಅಕ್ಕಿಯ ಅವಶ್ಯಕತೆ ಇದೆ. ಹೀಗಾಗಿ ಬೇಡಿಕೆ ಬೆಲೆ ಎರಡೂ ಹೆಚ್ಚಾಗಲಿದೆ. ರೈತರಿಗೆ ಪ್ರಯೋಜನವಾಗಲಿದೆ.

ಪರಿಸರ ಸ್ನೇಹಿ ಅಕ್ಕಿಯಿಂದ ಈ ಸ್ಮಾರ್ಟ್ ಮೆಟಿರಿಯಲ್ ತಯಾರಿಸಬಹುದು. ಇದರಿಂದ ರಾಸಾಯನಿಕ ವಸ್ತುಗಳ ಬಳಕೆ ತಪ್ಪಿಸಬಹುದು. ದುಬಾರಿ ಲೋಹ, ಸೆನ್ಸಾರ್ ಬದಲು ಅಕ್ಕಿಯ ಸ್ಮಾರ್ಟ್ ಮೆಟಿರಿಯಲ್ ಬಳಕೆ ಮಾಡಬಹುದು. ಇಷ್ಟೇ ಅಲ್ಲ ವೈದ್ಯಕೀಯ ಕ್ಷೇತ್ರದಲ್ಲೂ ಬಳಕೆ ಮಾಡಬಹುದು. ಸಂಕುಚಿತ ಮಾಡಿ ದೇಹದೊಳಗೆ ಕಳುಹಿಸಿ ಮತ್ತೆ ಹಿಗ್ಗಿಸುವ, ಶಸ್ತ್ರಚಿಕಿತ್ಸೆಯಲ್ಲಿ ಬಳಕೆ ಮಾಡುವ ಕೆಲ ಸಲಕರಣೆಗಳ ರೀತಿಯಲ್ಲೂ ಇದನ್ನು ಬಳಕೆ ಮಾಡಬಹುದು. ವಿಶೇಷ ಅಂದರೆ ನೈಸರ್ಗಿಕವಾಗಿದೆ. ಮುೃದ ರೋಬೋಟಿಕ್, ತೇವಾಂಶ ಬದಲಾವಣೆಯಿಂದ ಕೆಲಸ ಮಾಡುವ ಸಣ್ಣ ಯಂತ್ರಗಳಲ್ಲೂ ಇದನ್ನು ಬಳಕೆ ಮಾಡಬಹುದು.

ಇದರ ಉಪಯೋಗವೇನು?

Source link

Leave a Reply

Your email address will not be published. Required fields are marked *