ಬಿಗ್ ಬಾಸ್ ಮನೆಯಲ್ಲಿ ಮೂವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಇದರಲ್ಲಿ ಇಬ್ಬರು ಪುರುಷ ಸ್ಪರ್ಧಿಗಳಾದರೆ, ಮಹಿಳಾ ಸ್ಪರ್ಧಿ. ರಘು ಅವರು ಜಿಮ್ ಟ್ರೇನರ್, ಸೂರಜ್ ಸಿಂಗ್ ಕೆನಡಾದಲ್ಲಿ ಇಬ್ಬರು. ಅವರು ಇಂಜಿನಿಯರ್ ಆಗಿದ್ದರು. ಫಿಟ್ನೆಸ್ ಬಗ್ಗೆ ಅವರಿಗೆ ಹೆಚ್ಚು ಕಾಳಜಿ ಇದೆ. ರಿಷಾ ಗೌಡ ಅವರು ಮಾಡೆಲ್ ಹಾಗೂ ನಟಿ. ರಿಷಾ (ರಿಷಾ) ಅವರು ದೊಡ್ಮನೆಗೆ ಬರುತ್ತಿದ್ದಂತೆ ಹಿಂದೆ ಸುತ್ತಿದ್ದರು. ಆದರೆ, ಗಿಲ್ಲಿಗೆ ರಿಷಾ ಮೋಸ ಮಾಡಿದ್ದಾರೆ.
ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳ ಮೇಲೆ ಒಬ್ಬರಿಗೆ ಮನೆಯ ಸದಸ್ಯರು ಹಾರ್ಟ್ ಶೇಪ್ನ ವಸ್ತುವನ್ನು ನೀಡಬೇಕಾಗಿತ್ತು. ರಘು ಅವರಿಗೆ ಏಳು, ರಿಷಾಗೆ ನಾಲ್ಕು ಹಾಗೂ ಸೂರಜ್‌ಗೆ ಮೂರು ಹಾರ್ಟ್ ಸಿಕ್ಕವು. ಈ ಮೇಲಿನ ಒಂದು ಹಾರ್ಟ್ನ ಮಾತ್ರ ಇಟ್ಟುಕೊಂಡು ಉಳಿದ ಹಾರ್ಟ್ಗಳನ್ನು ಹರಿದು ಹಾಕಬೇಕಿತ್ತು. ಕೊನೆಯಲ್ಲಿ ಯಾರ ಹಾರ್ಟ್ ಉಳಿಸಿಕೊಳ್ಳುತ್ತಾರೋ ಅವರು ನಾಮನಿರ್ದೇಶನದಿಂದ ಬಚಾವ್ ಆಗುತ್ತಾರೆ.
ರಿಷಾ ಹಾಗೂ ಗಿಲ್ಲ ಮಧ್ಯೆ ಒಳ್ಳೆಯ ಬಾಂಡಿಂಗ್ ಬೆಳೆದಿದೆ, ಗಿಲ್ಲಿ ಅವರು ರಿಷಾಗೆ ಹಾರ್ಟ್ ನೀಡಿದ್ದರು. ಆದರೆ, ರಿಷಾ ಅವರು ಗಿಲ್ಲಿ ಹಾರ್ಟ್‌ನ ಹರಿದು ಹಾಕಿ, ಕಾಕ್ರೋಚ್ ಸುಧಿಯನ್ನು ನಾಮನಿರ್ದೇಶನದಿಂದ ಸೇವ್ ಮಾಡಿದರು. ಇದು ಗಿಲ್ಲಿಗೆ ಸಾಕಷ್ಟು ಬೇಸರ ಮೂಡಿಸಿದೆ. ನಂಬಿಸಿ ಮೋಸ ಹೋದಂತೆ ಅವರಿಗೆ ಭಾಸವಾಗಿದೆ.
ಇದನ್ನೂ ಓದಿ
ಇದನ್ನೂ ಓದಿ: ಹೊಸ ನೀರು ಬಂದಾಗ ಹಳೆ ನೀರ ಮರೆತ ಗಿಲ್ಲಿ; ರಿಷಾಗಾಗಿ ಕಾವ್ಯಾನಿಂದ ದೂರ
ಮತ್ತೆ ಕಾವ್ಯ ಹಿಂದೆ ಹೋದ ಗಿಲ್ಲಿ
ರಿಷಾ ಗೌಡ ಕೈ ಕೊಟ್ಟಂತೆ ಭಾಸವಾದ ಬಳಿಕ ಗಿಲ್ಲಿ ಅವರು ಬೇರೆ ದಾರಿ ಕಾಣದೆ ಕಾವ್ಯಾ ಗೌಡ ಹಿಂದೆ ಹೋಗಿದ್ದಾರೆ. ಕಾವ್ಯಾ ಅವರು ಗಿಲ್ಲಿನ ಕೇರ್ ಮಾಡಲೇ ಇಲ್ಲ. ಈ ವೇಳೆ ಅವರು ಒಂದು ಟಾಸ್ಕ್ ಕೂಡ ನೀಡಿದ್ದಾರೆ. ‘ಕ್ಲೀನ್ ಶೇವ್ ಮಾಡಿದರೆ ಮಾತ್ರ ನೋಡೋದು’ ಎಂದು ಷರತ್ತು ಹಾಕಿದ್ದಾರೆ. ಇದಕ್ಕೆ ಒಪ್ಪಲು ಗಿಲ್ಲಿ ರೆಡಿ ಇಲ್ಲ. ಮುಂದೇನಾಗುತ್ತದೆ ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.