ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ (ಬಿಗ್ ಬಾಸ್ ಕನ್ನಡ ಸೀಸನ್ 12) ಮನೆಗೆ ಬಂದ ರಿಷಾ ಅವರು ಕೂಗಾಟ, ಕಿರುಚಾಟ ಜಾಸ್ತಿ ಮಾಡಿದ್ದಾರೆ. ಇತ್ತೀಚೆಗೆ ಅವರ ಮುಖಕ್ಕೆ ಅನೇಕರು ಮಸಿ ಬಳಿದರು. ಆ ಬಳಿಕ ಅವರ ಆರ್ಭಟ ಜಾಸ್ತಿ ಆಗಿದೆ. ಅವಕಾಶ ಸಿಕ್ಕಲ್ಲೆಲ್ಲ ಅವರು ಜಗಳ ಮಾಡಲು ಆರಂಭಿಸಿದ್ದಾರೆ. ಗಿಲ್ಲಿ ನಟ (ಗಿಲ್ಲಿ ನಟ) ಹಾಗೂ ಸೂರಜ್ ಸಿಂಗ್ ಅವರನ್ನು ಕಂಡರೆ ರಿಷಾ ಉರಿದು ಬೀಳುತ್ತಿದ್ದಾರೆ. ಗಿಲ್ಲಿ ಕಳ್ಳ, ಸೂರಜ್ ಮಳ್ಳ ಎಂದು ರಿಷಾ ಅವರು ಹೇಳಿದ್ದಾರೆ. ‘ಕಳ್ಳನನ್ನು ನಂಬಿದರೂ ಮಳ್ಳನನ್ನು ನಂಬಲ್ಲ’ ಎಂದು ಅವರ ಎದುರಲ್ಲೇ ರಿಷಾ ಕೂಗಾಡಿದ್ದಾರೆ. ಪಡೆದ ರಿಷಾ, ಸೂರಜ್ ಹಾಗೂ ರಿಷಾ (ರಿಶಾ) ನಡುವೆ ಬಿರುಕು. ‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋನ ನವೆಂಬರ್ 4 ರ ಸಂಚಿಕೆಯ ಪ್ರೋಮೋ ಇಲ್ಲಿದೆ ನೋಡಿ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.