ರಿಷಬ್ ಮತ್ತು ಶೆಟ್ಟಿ ಪ್ರಗತಿ ಶೆಟ್ಟಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟು 9 ವರ್ಷ ಕಳೆದಿದೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ರಿಷಬ್ ಶೆಟ್ಟಿ ಅವರು ಈ ಕೆಳಗಿನ ಸಂದೇಶವನ್ನು ಹಂಚಿಕೊಂಡಿದ್ದಾರೆ.
‘ಬಂಧ ಬೆಸೆದು, ಚಂದ ಹೊಸೆದು ಒಂದಾದ ಒಲವಿನ ದಾಂಪತ್ಯಕ್ಕಿಂದು ೯ ತುಂಬಿದೆ. ಹಿಂದೆ ನೋಡಿದರೆ ಕಳೆದ ಪ್ರತಿ ಗಳಿಗೆಯೂ ಸಿಹಿ ನೆನಪಿನ ನಿಕ್ಷೇಪ ಕೇಂದ್ರ. ಅಲ್ಲಿ ನಲಿವಿದೆ, ನೋವಿದೆ, ನಗುವಿದೆ, ಸರಸ ವಿರಸಗಳಿವೆ.’
‘ಎಲ್ಲವನ್ನು ತೂಗುವ ಸಮರಸವಿದೆ. ಎಲ್ಲಕ್ಕೂ ಮಿಗಿಲಾಗಿ ಕೊನೆಯಾಗದ ಒಲವಿದೆ. ಆ ಒಲವು ಬೀರಿದ ಬೆಳಕು, ತಂದ ನೆಮ್ಮದಿ, ತುಂಬಿದ ಆತ್ಮವಿಶ್ವಾಸಗಳೇ ಇಂದು ನನ್ನನ್ನು ನಾನಾಗಿಸಿದೆ.
‘ನನ್ನ ಸತಿಯಾಗಿ, ಸಾಥಿಯಾಗಿ, ಸೌಭಾಗ್ಯ ದೇವತೆಯಾಗಿ, ಹಿಡಿಯಷ್ಟಿದ್ದ ಬದುಕನ್ನು ಕಡಲಷ್ಟು ಅಗಾಧವಾಗಿಸಿದ ನಿನಗೆ ಮದುವೆಯ ವಾರ್ಷಿಕೋತ್ಸವದ ಶುಭಾಶಯಗಳು.’
‘ನನ್ನನ್ನು ಮುನ್ನಡೆಸುವ ಶಕ್ತಿಗೆ, ನಾನು ಅವಲಂಬಿಸಿರುವ ಶಕ್ತಿಗೆ, ವಾರ್ಷಿಕೋತ್ಸವದ ಶುಭಾಶಯಗಳು, ನನ್ನ ಮಹಾಶಕ್ತಿ. ನೀನು ನನ್ನ ಕೈ ಹಿಡಿದಾಗ ಜೀವನವು ಉತ್ತಮವಾಗಿದೆ’ ಎಂದು ರಿಷಬ್ ಪೋಸ್ಟ್ ಮಾಡಲಾಗಿದೆ.




