ಸೋಶಿಯಲ್ ಮೀಡಿಯಾದಲ್ಲಿ ಮೆಂಟಲ್ ರೇಪ್ ಆಗುತ್ತೆ; ಅನುಶ್ರೀ ಕಣ್ಣೀರು

ಸೋಶಿಯಲ್ ಮೀಡಿಯಾದಲ್ಲಿ ಮೆಂಟಲ್ ರೇಪ್ ಆಗುತ್ತೆ; ಅನುಶ್ರೀ ಕಣ್ಣೀರು


ಸೋಶಿಯಲ್ ಮೀಡಿಯಾದಲ್ಲಿ ಮೆಂಟಲ್ ರೇಪ್ ಆಗುತ್ತೆ; ಅನುಶ್ರೀ ಕಣ್ಣೀರು

ಆಯಂಕ್ ಅನುಶ್ರೀ (ಅನುಶ್ರೀ) ಅವರು ಹಲವು ಕಷ್ಟಗಳನ್ನು ನೋಡಿ ಇಲ್ಲಿಯವರೆಗೆ ಬಂದಿದ್ದಾರೆ. ಹಲವು ಏರಿಳಿತಗಳನ್ನು ಅವರು ಕಂಡಿದ್ದಾರೆ. ಅವರು ತುಂಬಾ ಕಷ್ಟಪಟ್ಟು ಇಲ್ಲಿಯವರೆಗೆ ಬಂದಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸಿದರು. ಇದೆಲ್ಲವನ್ನೂ ಅವರು ಮೆಟ್ಟಿ ನಿಂತಿದ್ದಾರೆ. ಆದಾಗ್ಯೂ ಅವರಲ್ಲಿ ಒಂದು ಬೇಸರವಿದೆ. ಈ ವಿಷಯವಾಗಿ ಅನುಶ್ರೀ ಅವರು ಮಾತನಾಡಿದ್ದಾರೆ.

ಆರ್ಜೆ ಮಯೂರ್ ಅವರು ತಮ್ಮ ಯೂಟ್ಯೂಬ್ ಚಾನೆಲ್ ಹೊಂದಿದ್ದು ಇದಕ್ಕೆ , ‘ಗೋಲ್ಡನ್ ಕ್ಲಾಸ್ ವಿತ್ ಮಯೂರ’ ಎಂದು ಹೆಸರು ಇಟ್ಟುಕೊಂಡಿದ್ದಾರೆ. ಅನುಶ್ರೀ ಅವರು ಸದಾ ಸಂದರ್ಶನ ಮಾಡುತ್ತಿರುವವರು. ಅವರು ಈಗ ಸಂದರ್ಶನ ನೀಡಿದ್ದಾರೆ. ಅವರು ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

ಮಹಿಳಾ ಸೆಲೆಬ್ರಿಟಿಗಳು ಅಥವಾ ಚಿತ್ರರಂಗದಲ್ಲಿ ಯಾವುದೇ ಹೀರೋಯಿನ್‌ಗಳು ಇರಲಿ ಅವರು ಹೊಸ ಕಾರು ಖರೀದಿಸಿದರು, ಮನೆ ಖರೀದಿಸಿದರೆ ಅದನ್ನು ಬೇರೆ ರೀತಿಯಲ್ಲಿ ನೋಡುತ್ತಾರೆ ಎಂಬುದು ಅನುಶ್ರೀ ಅಭಿಪ್ರಾಯ. ಈ ಅಭಿಪ್ರಾಯವನ್ನು ಅವರು ತೆರೆದಿದ್ದಾರೆ.

 

Instagram ನಲ್ಲಿ ಈ ಪೋಸ್ಟ್ ಅನ್ನು ವೀಕ್ಷಿಸಿ

 

Mayuurra Raghavendraa ನಾನಿರುವುದೇ ನಿಮಗಾಗಿ (@rjmayuraa_raghavendra) ಹಂಚಿಕೊಂಡ ಪೋಸ್ಟ್

‘ಅನುಶ್ರೀನೇ ಯಾಕೆ ಅಂತ ಅಲ್ಲ, ಮಹಿಳೆಯರೇ ಟಾರ್ಗೆಟ್ ಯಾಕೆ ಅನ್ನೋದು ಪ್ರಶ್ನೆ. ಮಯೂರ 1 ಕೋಟಿ ರೂಪಾಯಿ ಮನೆ ಖರೀದಿ ಮಾಡಿದ್ರು ಅಂದ್ರೆ ಅದು ಸಾಧನೆ. ಆದರೆ, ಅನುಶ್ರೀ ಮನೆ ತೆಗೆದುಕೊಂಡರೆ ಅದು ಸಾಧನೆ ಅಲ್ಲ, ಬೇರೆನೆ’ ಎಂದು ಅನುಶ್ರೀ ಅವರು ವಿವರಿಸಿದರು.

ಫಿಸಿಕಲ್ ರೇಪ್ ಬೇರೆ, ಮೆಂಟಲ್ ರೇಪ್ ಕೂಡ ಇದೆ. ಕೆಲವು ಸೈಕೋಗಳು ಕೆಟ್ಟ ರೀತಿಯಲ್ಲಿ ಮಾತನಾಡುತ್ತಾರೆ. ಕೆಟ್ಟ ಕೆಟ್ಟ ಕಮೆಂಟ್ಗಳನ್ನು ಹಾಕುತ್ತಾರೆ. ಕರ್ಕೊಂಡು ಹೋಗಿ ಕಾರಪುಡಿ ಹಾಕಬೇಕು ಎಂದೆಲ್ಲ ಹೇಳುತ್ತಾರೆ. ಈ ರೀತಿಯ ಶಬ್ದಗಳು, ಈ ರೀತಿಯ ಪದಗಳು ನೋವು ತರಿಸುತ್ತವೆ ಎಂದು ಅನುಶ್ರೀ ಬೇಸರ ಹೊರಹಾಕಿದರು.

ಇದನ್ನೂ ಓದಿ: ‘ನಮ್ಮನ್ನು ಡ*ರ್ ಅಂತ ಕರೆದ್ರೆ ಹೇಗನಿಸುತ್ತೆ ನೀವೇ ಯೋಚಿಸಿ’; ಅನುಶ್ರೀ ಬೇಸರ

ಅನುಶ್ರೀ ಅವರು ನೇರ ಮಾತುಗಳಿಗೆ ಖ್ಯಾತಿ ಪಡೆದವರು. ಅವರು ಏನೇ ಆದರೂ ಅದನ್ನು ಓಪನ್ ಆಗಿ ಹೇಳುತ್ತಾರೆ. ತಮಗೆ ಬರುವ ಟೀಕೆ ಬಗ್ಗೆ ಅವರು ಹಲವು ಬಾರಿ ನೇರ ಮಾತುಗಳಲ್ಲಿ ವಿವರಣೆ ನೀಡಿದ್ದು ಇದೆ. ಈಗ ಅವರು ಈಗ ಹೊಸ ವಿಷಯದ ಬಗ್ಗೆ ಮಾತನಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *