ಹಾಸನ, ಜನವರಿ 17: ಹಾಸನದ ಸಕಲೇಶಪುರದ ಗ್ರಾಮದಲ್ಲಿ ಮಹಿಳೆ ಬಲಿ ಪಡೆದಿದ್ದು, ಜನರಿಗೆ ತೊಂದರೆ ನೀಡುತ್ತಿದ್ದ ಪುಂಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ. ಬೇಲೂರು ತಾಲೂಕಿನ ಬೆಳ್ಳಾವರ ಕಾಫಿ ತೋಟದಲ್ಲಿ ನಾಲ್ಕು ಗಂಟೆಗಳ ಸುದೀರ್ಘ ಕಾರ್ಯಾಚರಣೆ ನಡೆಸಿ ಈ ಆನೆಯನ್ನು ಹಿಡಿಯಲಾಗಿದೆ. ಜನವರಿ 13 ರಂದು ಮೊಗಲಿಯಲ್ಲಿ ಮಹಿಳೆಯನ್ನು ಬಲಿತೆಗೆದುಕೊಂಡಿದ್ದ ಈ ಕಾಡಾನೆ ಸೆರೆಯಿಂದಾಗಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ