Headlines

ಸ್ಟುಡಿಯೋ ಒಳಗೆ ಅಟ್ಟಹಾಸ ಮೆರೆದಿದ್ದ ರಾಹುಲ್ ಆರ್ಯ, ಹಲವು ವಿಷಯ ಬಹಿರಂಗ

ಸ್ಟುಡಿಯೋ ಒಳಗೆ ಅಟ್ಟಹಾಸ ಮೆರೆದಿದ್ದ ರಾಹುಲ್ ಆರ್ಯ, ಹಲವು ವಿಷಯ ಬಹಿರಂಗ


ಮುಂಬೈನ ಆರ್ ಎ ಸ್ಟುಡಿಯೋನಲ್ಲಿ (ಆರ್‌ಎ ಸ್ಟುಡಿಯೋ) ಹಾಡ ಹಗಲೆ ರಾಹುಲ್ ಆರ್ಯ ಹೆಸರಿನ ವ್ಯಕ್ತಿ 19 ಮಂದಿಯನ್ನು ಅದರಲ್ಲಿ 17 ಮಂದಿ ಅಪಹರಣ ಮಾಡಿ ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿರುವ ಘಟನೆ ದೇಶದ ಗಮನ ಸೆಳೆದಿದೆ. ಅಪಹರಣಕಾರನು ನೋಡಲು ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ. ಆದರೆ ರಾಹುಲ್ ಆರ್ಯ ಅಪಹರಣಕ್ಕೆ ಮುಂಚೆ ಹಾಕಿದ್ದ ಯೋಜನೆಗಳು ಏನಾಗಿತ್ತು, ಅವನ ಬೇಡಿಕೆಗಳು ಏನಾಗಿತ್ತು, ರಾಹುಲ್ ಆರ್ಯ ಸ್ಟುಡಿಯೋದ ಒಳಗೆ ಮಕ್ಕಳ ಮೇಲೆ ಹೇಗೆ ಅಟ್ಟಹಾಸ ಮೆರೆದಿದ್ದ ಎಂಬೆಲ್ಲ ವಿಷಯಗಳು ಈಗ ಒಂದೊಂದಾಗಿ ಹೊರಗೆ ಬರುತ್ತಿವೆ.

ರಾಹುಲ್ ಆರ್ಯ ಮಕ್ಕಳನ್ನು ಒತ್ತೆ ಆಳುಗಳನ್ನಾಗಿ ಇರಿಸಿಕೊಂಡ ಬಳಿಕ ಸುಮಾರು ಐದು ಮಕ್ಕಳ ಕೈಗಳನ್ನು ಕಟ್ಟಿಹಾಕಿ ಅವರ ಬಾಯಿಗೆ ಟೇಪ್ ಅಂಟಿಸಿದ್ದನಂತೆ. ಸ್ಟುಡಿಯೋದ ಗಾಜಿನ ಕಿಟಕಿಯ ಮೂಲಕ ಈ ದೃಶ್ಯ ಕಾಣಿಸಿದ್ದಾಗಿ ಪೊಲೀಸರು ಎಫ್ ಐಆರ್ ನಮೂದಿಸಿದ್ದಾರೆ. ಇನ್ನು ಡಕ್ ಮೂಲಕ ಸ್ಟುಡಿಯೋದ ಮೊದಲ ಫ್ಲೋರ್ ನಲ್ಲಿ ಬಾತ್ ರೂಂಗೆ ಹೋದಾಗ ಅವರ ಮೂಗಿಗೆ ಪೆಟ್ರೋಲ್ ವಾಸನೆ ಬಡಿಯುವಂತೆ.

ರೋಹಿತ್, ಮಕ್ಕಳ ಮೇಲೆ ಪೆಟ್ರೋಲ್ ಸುರಿದಿದ್ದನಂತೆ. ಜೊತೆಗೆ ರಬ್ಬರ್ ಸೊಲ್ಯೂಷನ್ ಅನ್ನು ಸಹ ನೆಲದ ಮೇಲೆ ಚೆಲ್ಲಿದ್ದನಂತೆ. ಪೊಲೀಸ್ ಬಾತ್ ರೋಂಗೆ ಹೋದಾಗ ರೋಹಿತ್ ಆರ್ಯನ ಸೊಂಟದಲ್ಲಿ ಬಂದೂಕು ಇರುವುದು ಪೊಲೀಸರಿಗೆ ಕಂಡಂತೆ. ಪೊಲೀಸರನ್ನು ನೋಡಿದ ಕೂಡಲೇ ರೋಹಿತ್ ಆರ್ಯ ಮೊದಲು ಪೆಪ್ಪರ್ ಸ್ಪ್ರೇ ಹೊಡೆದಂತೆ. ಬಳಿಕ ಸೊಂಟದಲ್ಲಿರುವ ಏರ್ ಗನ್ ಕೈಗೆ ಒಮ್ಮೆ ಮಕ್ಕಳ ಕಡೆಗೆ ಗುರಿ ಮಾಡಿ, ಬಳಿಕ ಪೊಲೀಸರ ಕಡೆಗೆ ಗುರಿಯಾಗಿ, ಕೂಡಲೇ ಅಮೋಲ್ ದಾವ್ಡೆಕರ್ ಹೆಸರಿನ ಪೊಲೀಸ್ ಅಧಿಕಾರಿ ತಮ್ಮ ಸರ್ವೀಸ್ ರಿವಾಲ್ವರ್ ನಿಂದ ಗುಂಡು ಹಾರಿಸಿದ್ದಾರೆ.

ಇದನ್ನೂ ಓದಿ:ಮಕ್ಕಳ ಅಪಹರಣಕ್ಕೆ ಮುಂಚೆ ರೋಹಿತ್ ಮಾಡಿದ್ದ ತಯಾರಿ, ಪೊಲೀಸರೇ ಶಾಕ್

ಗುಂಡು ತಗುಲಿ ರೋಗ ರೋಹಿತ್ ಆರ್ಯನನ್ನು ಕೂಡಲೇ ಜೋಗೇಶ್ವರಿ ಟ್ರಾಮಾ ಕೇರ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ರೋಹಿತ್ ನಿಧನ ಹೊಂದಿದ್ದಾನೆ. ಇದೀಗ ಪ್ರಕರಣದ ಬಗ್ಗೆ ಎಫ್‌ಐಆರ್‌ ದಾಖಲಾಗಿದ್ದು, ಪೊಲೀಸರೇ ದೂರುದಾರರಾಗಿ ಎಫ್‌ಐಆರ್‌ ದಾಖಲು ಮಾಡಿದ್ದಾರೆ.

‘ಲೆಟ್ಸ್ ಚೇಂಜ್’ ಸಿನಿಮಾ ನಿರ್ದೇಶಿಸಿದ್ದ ರೋಹಿತ್ ಆರ್ಯ, ಈ ಕೆಲ ಸಿನಿಮಾಗಳಿಗೆ ಬರಹಗಾರನಾಗಿ ಕೆಲಸ ಮಾಡಿದ್ದ. ಕೆಲವು ಶಿಕ್ಷಣ ಇಲಾಖೆಯೊಂದಿಗೆ ಸಂಬಂಧಿಸಿದ ಕೆಲವು ಕಾರ್ಯಕ್ರಮಗಳನ್ನು ಸಹ ಮಾಡಿದ್ದಾರೆ. ಆದರೆ ತನಗೆ ನೀಡಬೇಕಾದ ಮನ್ನಣೆ ನೀಡಿಲ್ಲವೆಂದು, ಹಣ ನೀಡಿಲ್ಲವೆಂದು ಆರೋಪಿಸಿ ಅವರನ್ನು ಅಪಹರಿಸಿದ್ದಾರೆ. ಈ ಮೊದಲೂ ಸಹ ಮಾಜಿ ಶಿಕ್ಷಣ ಸಚಿವರ ಮನೆ ಎದುರು ಉಪವಾಸ ಸತ್ಯಾಗ್ರಹಗಳನ್ನು ರೋಹಿತ್ ಆರ್ಯ ಮಾಡಿದ್ದಾರೆ. ಈಗ ಅಪಹರಣ ಮಾಡಲು ಹೋಗಿ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *