Headlines

ಏನ್​ ನಡೀತಿದೆ… ನೀತಾ ಅಂಬಾನಿಯ ಫೋನ್​ ಇಣುಕಿ ಇಣುಕಿ ನೋಡಿದ ರೋಹಿತ್ ಶರ್ಮಾ

ಏನ್​ ನಡೀತಿದೆ… ನೀತಾ ಅಂಬಾನಿಯ ಫೋನ್​ ಇಣುಕಿ ಇಣುಕಿ ನೋಡಿದ ರೋಹಿತ್ ಶರ್ಮಾ


ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಮಹಿಳಾ ಏಕದಿನ ಅಂತಿಮ ಫೈನಲ್ ಪಂದ್ಯದ ವೇಳೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಹಾಗೂ ರಿಲಯನ್ಸ್ ಫೌಂಡೇಷನ್ ಸ್ಥಾಪಕಿ ನೀತಾ ಅಂಬಾನಿ ಕಾಣಿಸಿಕೊಂಡಿದ್ದರು. ಮುಂಬೈ ಇಂಡಿಯನ್ಸ್ ತಂಡದ ಮಾಲಕಿಯಾಗಿರುವ ನೀತಾ ಅಂಬಾನಿ ಜೊತೆ ಕೂತಿದ್ದ ರೋಹಿತ್ ಶರ್ಮಾ ಪದೇ ಪದೇ ಇಣುಕಿ ಅವರ ಮೊಬೈಲ್ ಫೋನ್ ನೋಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಪಂದ್ಯ ವೀಕ್ಷಿಸುತ್ತಾ ನೀತಾ ಅಂಬಾನಿ ಫೋನ್‌ನಲ್ಲಿ ಅದೇನೋ ಕೂತಿದ್ದರೆ, ಇತ್ತ ಬದಿಯಲ್ಲಿದ್ದ ರೋಹಿತ್ ಶರ್ಮಾ ಏನ್ ನಡೀತಿದೆ ಎಂಬ ಭಾವಾರ್ಥದಲ್ಲಿ ಇಣುಕುತ್ತಾ ಅವರ ಫೋನ್ ವೀಕ್ಷಿಸಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು ಈ ಬಟ್ಟೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 298 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡ 45.3 ಪಂದ್ಯಗಳಲ್ಲಿ 246 ರನ್ ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ ತಂಡವು 52 ರನ್ಗಳ ಜಯಭೇರಿ ಬಾರಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.



Source link

Leave a Reply

Your email address will not be published. Required fields are marked *