ನಾಯಕನನ್ನು ಕಂಡಾಗ ರೋಹಿತ್ ಶರ್ಮಾ ರಿಯಾಕ್ಷನ್ ಹೇಗಿತ್ತು ನೋಡಿ

ನಾಯಕನನ್ನು ಕಂಡಾಗ ರೋಹಿತ್ ಶರ್ಮಾ ರಿಯಾಕ್ಷನ್ ಹೇಗಿತ್ತು ನೋಡಿ


ನಾಯಕನನ್ನು ಕಂಡಾಗ ರೋಹಿತ್ ಶರ್ಮಾ ರಿಯಾಕ್ಷನ್ ಹೇಗಿತ್ತು ನೋಡಿ

ಭಾರತ ತಂಡವು ಮುಂಬರುವ ಸರಣಿಗಾಗಿ ಆಸ್ಟ್ರೇಲಿಯಾಗೆ ತೆರಳಿದೆ. ದೆಹಲಿ ಏರ್‌ಪೋರ್ಟ್ ಮೂಲಕ ಪರ್ತ್‌ಗೆ ತೆರಳಿರುವ ಟೀಮ್ ಇಂಡಿಯಾ ಅಕ್ಟೋಬರ್ 19 ರಂದು ಮೊದಲ ಏಕದಿನ ಪಂದ್ಯವಾಡಲಿದೆ. ಈ ಪಂದ್ಯದ ಮೂಲಕ ಶುಭಮನ್ ಗಿಲ್ ಭಾರತ ಏಕದಿನ ತಂಡದ ನಾಯಕನಾಗಿ ಪಾದಾರ್ಪಣೆ ಮಾಡಲಿದ್ದಾರೆ. ಇತ್ತ ಮಾಜಿ ನಾಯಕ ರೋಹಿತ್ ಶರ್ಮಾ ಅವರು ಗಿಲ್ ಸಾರಥ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ಬುಧವಾರ ಬೆಳಿಗ್ಗೆ ಭಾರತದಿಂದ ಟೀಮ್ ಇಂಡಿಯಾ ಆಟಗಾರರು ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಿದ್ದಾರೆ. ಇದಕ್ಕೂ ಮುನ್ನ ಟೀಮ್ ಇಂಡಿಯಾದ ಮಾಜಿ ನಾಯಕನನ್ನು ಗಿಲ್ ಭೇಟಿಯಾಗಿದ್ದರು. ಅಂದರೆ ವಿಮಾನ ಹತ್ತುವ ಮುನ್ನ ರೋಹಿತ್ ಶರ್ಮಾ ಅವರ ಹಿಂದೆ ಬಂದು ಮಾತನಾಡಿದ್ದಾರೆ.

ಈ ವೇಳೆ ರೋಹಿತ್ ಶರ್ಮಾ, ಗಿಲ್ ಹೇಗಿದ್ದೀಯಾ? ಎಂದು ಕುಶಲೋಪರಿ ನಡೆಸುತ್ತಿರುವುದು ಕೂಡ ವಿಡಿಯೋದಲ್ಲಿ ಕಾಣುತ್ತಿದೆ. ಇದೀಗ ನಾಯಕ ಹಾಗೂ ಮಾಜಿ ನಾಯಕನ ವಿಡಿಯೋವನ್ನು ಬಿಸಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಸರಣಿಯು ಅಕ್ಟೋಬರ್ 19 ರಿಂದ ಶುರುವಾಗಿದೆ. ಕಾಂಗರೂ ನಾಡಿನಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಒಟ್ಟು 8 ಪಂದ್ಯಗಳನ್ನಾಡದಿದ್ದರೆ. ಮೊದಲ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ, ಇದಾದ ಬಳಿಕ ಟಿ20 ಸರಣಿ ನಡೆಯಲಿದೆ.



Source link

Leave a Reply

Your email address will not be published. Required fields are marked *