Headlines

ಪಾಕಿಸ್ತಾನದ ಜಿಡಿಪಿ ಬೆಂಗಳೂರಿನ ರಸ್ತೆಯಲ್ಲಿ, ರೋಲ್ಸ್ ರಾಯ್ಸ್ ಕಾನ್ವೊಯ್ ವಿಡಿಯೋ ವೈರಲ್

ಪಾಕಿಸ್ತಾನದ ಜಿಡಿಪಿ ಬೆಂಗಳೂರಿನ ರಸ್ತೆಯಲ್ಲಿ, ರೋಲ್ಸ್ ರಾಯ್ಸ್ ಕಾನ್ವೊಯ್ ವಿಡಿಯೋ ವೈರಲ್


ಬೆಂಗಳೂರಿನಲ್ಲಿ ರೋಲ್ಸ್ ರಾಯ್ಸ್ (ರೋಲ್ಸ್ ರಾಯ್ಸ್ ಬೆಂಗಳೂರು) ಕಾರು ಧೂಳೆಬ್ಬಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಎರಡು ದಿನಗಳಿಂದ ರೋಲ್ಸ್ ರಾಯ್ಸ್ ವಿಡಿಯೋ ಭಾರೀ ಸದ್ದು ಮಾಡಿದೆ. ಬೆಂಗಳೂರಿನ ಬೀದಿಗಳಲ್ಲಿ ಸಾಲು ಸಾಲು ರೋಲ್ಸ್ ರಾಯ್ಸ್ ಕಾನ್ವೋಯ್ ನಡೆದಿದೆ. ಇದೀಗ ವಿಶ್ವದ ದುಬಾರಿ ಕಾರು ಬೆಂಗಳೂರಿನ ಬೀದಿಯಲ್ಲಿ ಇರುವುದು ಎಲ್ಲರಿಗೂ ಅಚ್ಚರಿ ತಂದಿದೆ. ಈ ವಿಡಿಯೋ ನೋಡಿ ನೆಟ್ಟಿಗರು ಬೆಂಗಳೂರು ಶ್ರೀಮಂತ ನಗರ ಎಂದು ಮತ್ತೊಮ್ಮೆ ಮಾಡಿದೆ. ದೇಶದಲ್ಲಿ ಎಲ್ಲೂ ರೋಲ್ಸ್ ರಾಯ್ಸ್ ಹೀಗೆ ಸಂಚಾರ ಮಾಡಿರುವುದನ್ನು ನೋಡಿಲ್ಲ ಎಂದು ನೆಟ್ಟಿಗರು ಹೇಳಿದ್ದಾರೆ. ಜಿಎಂ ಪವನ್ ಎಂಬವರು ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲಿಂದ ಈ ವಿಡಿಯೋ ಎಲ್ಲ ಕಡೆ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ರೋಲ್ಸ್ ರಾಯ್ಸ್ ಕಾರು ಬೆಂಗಾವಲಿನಂತೆ ಒಂದರ ಹಿಂದೆ ಮತ್ತೊಂದು ಹೋಗುವುದನ್ನು ನೋಡಬಹುದು. ಯಾವುದೋ ರಾಜಮನೆತನದವರು ಈ ಕಾರಿನಲ್ಲಿ ಹೋಗುತ್ತಿದ್ದಾರೆ ಎಂಬಂತೆ ಕಾಣುತ್ತಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳಲಾಗಿದೆ. ಇನ್ನು ಈ ಕಾರಿನ ಕಾನ್ವೋಯ್‌ಗೆ ಜೀರೋ ಗ್ರಾಫಿಕ್ ವ್ಯವಸ್ಥೆ ಮಾಡಲಾಗಿದೆ. ವಿಡಿಯೋದಲ್ಲಿ ಒಂದು ಗೇಟಿನಿಂದ ಒಂದರ ಹಿಂದೆ ಮತ್ತೊಂದು ಸಾಲು ರೋಲ್ಸ್ ರಾಯ್ಸ್ ಕಾರುಗಳು ಬರುವುದನ್ನು ಕಾಣುತ್ತಿದೆ. ಇನ್ನು ರಸ್ತೆಯ ಉದ್ದಕ್ಕೂ ಈ ಕಾರುಗಳು ಸಾಗುತ್ತಿರುವುದನ್ನು ನೋಡಿದ್ರೆ ಕಣ್ಣಿಗೆ ಖುಷಿ. ಭಾರತ ಯಾವ ರಸ್ತೆಯಲ್ಲೂ ಇಂಥಹ ದುಬಾರಿ ಕಾನ್ವೋಯ್ ನೋಡಿರಲು ಸಾಧ್ಯವೇ ಇಲ್ಲ. 10ಕ್ಕೂ ಹೆಚ್ಚು ದುಬಾರಿ ಕಾರುಗಳು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಈ ಸೇಬಿಗೆ 10 ಕೋಟಿ ರೂ. ಆದರೆ ಇದನ್ನು ತಿನ್ನಲು ಸಾಧ್ಯವಿಲ್ಲ

ವೈರಲ್ ಪೋಸ್ಟ್ ಇಲ್ಲಿದೆ ನೋಡಿ:

ಪಾಕಿಸ್ತಾನದ ಜಿಡಿಪಿ ಬೆಂಗಳೂರಿನ ರಸ್ತೆಯಲ್ಲಿ

ಈ ವಿಡಿಯೋ ನೋಡಿ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಇಡೀ ಪಾಕಿಸ್ತಾನದ ಜಿಡಿಪಿ ಬೆಂಗಳೂರಿನ ರಸ್ತೆಯಲ್ಲಿ ಸಂಚಾರ ಮಾಡುತ್ತಿದೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇಂಥಹ ದೃಶ್ಯವನ್ನು ಬೆಂಗಳೂರಿನಲ್ಲಿ ಮಾತ್ರ ನೋಡಲು ಸಾಧ್ಯ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ಬಿಲೇನಿಯರ್ ಇರುವುದು ಈ ದೃಶ್ಯವನ್ನು ನೋಡಿದಾಗ ಗೊತ್ತಾಗುತ್ತದೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಎಲ್ಲರ ಕಣ್ಣು ಈ ಕಾರಿನ ಮೇಲಿರುವಾಗ ಟ್ರಾಫಿಕ್ ಚಿಂತೆ ಇರುವುದಿಲ್ಲ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *