Kannada Anchor Anushree: ನಿರೂಪಕಿ ಅನುಶ್ರೀ ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಮದುವೆ ಬಳಿಕ ಅವರಿಗೆ ಇದು ಮೊದಲ ಜನ್ಮದಿನದ ಸಂಭ್ರಮ. ವಿದೇಶದಲ್ಲಿ ಈ ಜೋಡಿ ಹುಟ್ಟುಹಬ್ಬವನ್ನು ಆಚರಿಸಿದೆ.

ನಿರೂಪಕಿ ಅನುಶ್ರೀ ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಮದುವೆ ಬಳಿಕ ಅವರಿಗೆ ಇದು ಮೊದಲ ಜನ್ಮದಿನದ ಸಂಭ್ರಮ. ವಿದೇಶದಲ್ಲಿ ಈ ಜೋಡಿ ಹುಟ್ಟುಹಬ್ಬವನ್ನು ಆಚರಿಸಿದೆ.

ನಿರೂಪಕಿ ಅನುಶ್ರೀ ಅವರು ‘ಪುನೀತ ಪರ್ವ’ ಕಾರ್ಯಕ್ರಮದಲ್ಲಿ ರೋಶನ್ ಎನ್ನುವ ಸಾಫ್ಟ್‌ವೇರ್ ಉದ್ಯೋಗಿಯನ್ನು ಭೇಟಿಯಾದರು. ಅಲ್ಲಿಂದ ಇವರ ಸ್ನೇಹ ಆರಂಭವಾಗಿತ್ತು.

ರೋಶನ್ ಹಾಗೂ ಅನುಶ್ರೀ ಅವರು ಪ್ರೀತಿಸಿ ಮದುವೆಯಾಗಿದ್ದಾರೆ. ಕುಟುಂಬಸ್ಥರು ಒಪ್ಪಿ ಮದುವೆ ಮಾಡಿದ್ದರು. ಬೆಂಗಳೂರಿನ ಹೊರವಲಯದಲ್ಲಿರುವ ರೆಸಾರ್ಟ್‌ನಲ್ಲಿ ಈ ಜೋಡಿ ಆದಷ್ಟು ಸರಳವಾಗಿ ಮದುವೆಯಾಗಿದ್ದರು. ಕನ್ನಡ ಚಿತ್ರರಂಗದ ಕೆಲವು ಗಣ್ಯರು ಈ ಮದುವೆಯಲ್ಲಿ ಭಾಗಿಯಾಗಿದ್ದರು.

ಈಗ ರೋಶನ್ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದು, “ಪ್ರೀತಿಯ ಅರ್ಥ ತಿಳಿಸಿದ, ನೋವಿನಲ್ಲಿ ಕಣ್ಣೊರೆಸುವ, ನನ್ನ ಸರ್ವಸ್ವವಾಗಿರುವ ನಿನಗೆ ಜನ್ಮದಿನದ ಶುಭಾಶಯಗಳು ಮೈ ಲವ್” ಎಂದು ಹೇಳಿದ್ದಾರೆ.

ರೋಶನ್ ಹಾಗೂ ಅನುಶ್ರೀ ಅವರು ದುಬೈ ಪ್ರವಾಸದಲ್ಲಿದ್ದಾರೆ. ಇವರಿಬ್ಬರು ಅಲ್ಲಿನ ಸ್ಥಳಗಳನ್ನು ಭೇಟಿ ಮಾಡುತ್ತ, ಎಂಜಾಯ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಅಂದಹಾಗೆ ರಿಯಾಲಿಟಿ ಶೋಗಳ ನಿರೂಪಣೆ, ಸಿನಿಮಾ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳ ನಿರೂಪಣೆ ಮಾಡುತ್ತ ಅನುಶ್ರೀ ಅವರು ಬ್ಯುಸಿಯಿದ್ದಾರೆ.

Source link
Photos: ವಿದೇಶದಲ್ಲಿ Anchor Anushree ಜನ್ಮದಿನ ಆಚರಿಸಿ, ವಿಶೇಷ ವಿಷಯ ಹಂಚಿಕೊಂಡ ಪತಿ ರೋಶನ್