Headlines

ಆರ್​​ಸಿಬಿ ಹೆಸರು ಬದಲಾವಣೆ ಪಕ್ಕಾ? ಇಲ್ಲಿದೆ ಕಾರಣ

ಆರ್​​ಸಿಬಿ ಹೆಸರು ಬದಲಾವಣೆ ಪಕ್ಕಾ? ಇಲ್ಲಿದೆ ಕಾರಣ


ಆರ್ಸಿಬಿ ಹೆಸರು ಬದಲಾವಣೆ ಪಕ್ಕಾ? ಇಲ್ಲಿದೆ ಕಾರಣ

ಆದಿತ್ಯ ಬಿರ್ಲಾ ಸಮೂಹ ಸುಮಾರು 16,706 ಕೋಟಿ ರೂಪಾಯಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರ್ಯಾಂಚೈಸಿಯನ್ನು ಖರೀದಿಸಿದೆ. ಇವರ ಜೊತೆ ಬ್ಲ್ಯಾಕ್‌ಸ್ಟೋನ್ ಇಕ್ವಿಟಿ ಫರ್ಮ್, ಅಮೆರಿಕದ ಹೂಡಿಕೆದಾರ ಡೇವಿಡ್‌ ಬ್ಲಿಟ್ಜರ್ ಒಡೆತನದ ಬೋಲ್ಟ್‌ ವೆಂಚರ್ಸ್‌ ಮತ್ತು ಟೈಮ್ಸ್‌ ಆಫ್‌ ಇಂಡಿಯಾ ಮಾಧ್ಯಮ ಸಮೂಹ ಖರೀದಿಯಲ್ಲಿ ಕೈ ಜೋಡಿಸಿದೆ. ಈಗ ಆರ್ ಸಿಬಿ ಹೆಸರು ಬದಲಾವಣೆ ಸಾಧ್ಯತೆ ಬಲವಾಗಿ ಕಾಣಿಸುತ್ತಿದೆ. ಮಾರ್ಚ್ 28 ರಂದು ಆರ್ಸಿಬಿ ಈ ಸೀಸನ್ ನ ಮೊದಲ ಪಂದ್ಯ ಆಡಲಿದೆ. ಅದಕ್ಕೂ ಮೊದಲು ಮಾರಾಟ ವಹಿವಾಟು ನಡೆಯಿತು.

ಆರ್ಸಿಬಿ ಒಡೆತನವು ಈ ಮೊದಲು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (ಯುಎಸ್‌ಎಲ್) ಬಳಿ ಇತ್ತು. ಈಯು ಲಂಡನ್ ಮೂಲದ ಯುಕೆ–ಡಿಯಾಜಿಯ ಅಂಗಸಂಸ್ಥೆಯಾಗಿದೆ. ಎರಡನೇ ಎಲ್ ತಯಾರಿಕಾ ಕಂಪನಿ. ಹೀಗಾಗಿ, ತಮ್ಮ ವಿಸ್ಕಿ ಬ್ರ್ಯಾಂಡ್ ರಾಯಲ್ ಚಾಲೆಂಜ್ ಅಥವಾ ಆರ್ ಸಿ ಪ್ರಮೋಷನ್ ಮಾಡುವ ಉದ್ದೇಶದಿಂದ ರಾಯಲ್ ಚಾಲೆಂಜರ್ಸ್ ಎಂದು ತಂಡಕ್ಕೆ ಹೆಸರು ಇಟ್ಟಿದ್ದರು ವಿಜಯ್ ಮಲ್ಯ. ಈಗ ಐಪಿಎಲ್ ತಂಡ ಬೇರೆಯವರ ತೆಕ್ಕೆಗೆ ಹೋಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂಬ ಹೆಸರಿದ್ದರೆ ರಾಯಲ್ ಚಾಲೆಂಜ್ ಬ್ರ್ಯಾಂಡ್ ಪ್ರಮೋಷನ್ ಮಾಡಿದಂತೆ ಆಗುತ್ತದೆ. ಈ ಕಾರಣದಿಂದ ಆದಿತ್ಯ ಬಿರ್ಲಾ ಗ್ರೂಪ್ ಹೆಸರು ಬದಲಾವಣೆ ಮಾಡುವ ನಿರ್ಧಾರಕ್ಕೆ ಬರಬಹುದು. ಈ ಮೊದಲು ಸಾಕಷ್ಟು ಐಪಿಎಲ್ ತಂಡಗಳ ಹೆಸರು ಬದಲಾದ ಉದಾಹರಣೆಯಾಗಿದೆ. ಸದ್ಯ ಆರ್ಸಿಬಿಯ ಪುರುಷ ಹಾಗೂ ಮಹಿಳಾ ತಂಡ ಎರಡನ್ನೂ ಆದಿತ್ಯ ಬಿರ್ಲಾ ಖರೀದಿ ಮಾಡಿದ್ದಾರೆ.

ಇದನ್ನೂ ಓದಿ: ಅಭಿಮಾನಿಗಳಿಗೆ ಆರ್ಸಿಬಿಯಿಂದ ವಿಶೇಷ ನಮನ: ವಿಡಿಯೋ ನೋಡಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂಬುದು ಈಗ ಕೇವಲ ಹೆಸರಾಗಿ ಉಳಿದುಕೊಂಡಿಲ್ಲ, ಅದೊಂದು ಭಾವನೆಯಾಗಿದೆ. ಅದರಲ್ಲೂ ಆರ್ ಸಿಬಿ ಎಂಬ ಶಬ್ದಕ್ಕೆ ತೂಕ ಹೆಚ್ಚು. ಮುಂದಿನ ದಿನಗಳಲ್ಲಿ ಆರ್ಸಿಬಿ ಎಂಬ ಶಾರ್ಟ್ ಫಾರ್ಮ್ ಬರುವಂತೆ ಆದಿತ್ಯ ಬಿರ್ಲಾ ಗ್ರೂಪ್ ಹೆಸರನ್ನು ಬದಲಿಸುವ ಸಾಧ್ಯತೆಯನ್ನು ತಳ್ಳಿಹಾಕಬಹುದು.
ಈ ಮೊದಲು ಡಿಯಾಜಿಯೊ ತನ್ನ ಹೇಳಿಕೆಯಲ್ಲಿ ಆರ್ ಸಿಬಿ ಮಾರಾಟ ವಿಷಯ ಉಲ್ಲೇಖ ಮಾಡಿತ್ತು. ತಮ್ಮಗೂ, ಕ್ರಿಕೆಟ್ ಕ್ಷೇತ್ರಕ್ಕೂ ಯಾವುದೇ ಸಂಬಂಧವಿಲ್ಲದ ಕಾರಣ ಮಾರ್ಚ್ 31ರೊಳಗೆ ಕಂಪನಿಯನ್ನು ಮಾರುವುದಾಗಿ ಡಿಯಾಜಿಯೋ ಕಳೆದ ನವೆಂಬರ್‌ನಲ್ಲಿ ಹೇಳಿತ್ತು.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *