
ವಿರಾಟ್ ಈ ವರೆಗೂ ದೆಹಲಿ, ಭಾರತ ಹಾಗೂ ಆರ್‌ಸಿಬಿ ಮೂರು ತಂಡಗಳ ಪರ ಒಟ್ಟು 414 ಟಿ20 ಪಂದ್ಯಗಳನ್ನು ಆಡಿದ್ದು, 13543 ರನ್ ಕಲೆಹಾಕಿದ್ದಾರೆ. ಈ ವರ್ಷ ಐಪಿಎಲ್‌ನಲ್ಲಿ 457 ರನ್ ಗಳಿಸಿದರೆ, ಕೊಹ್ಲಿ ಟಿ20ಯಲ್ಲಿ 14000 ರನ್ ಗಳಿಸಿದ ಭಾರತದ ಮೊದಲ, ವಿಶ್ವದ 5ನೇ ಬ್ಯಾಟರ್ ಎನಿಸಲಿದ್ದಾರೆ.
ಗೇಲ್, ಪೊಲ್ಲಾರ್ಡ್, ಅಲೆಕ್ಸ್ ಹೇಲ್ಸ್ ಹಾಗೂ ವಾರ್ನರ್‌ರ ಸಾಲಿಗೆ ಸೇರ್ಪಡೆಗೊಳ್ಳಲಿದ್ದಾರೆ. ಟಿ20ಯಲ್ಲಿ ಅತಿಹೆಚ್ಚು ರನ್ ಗಳಿಸಿದ ದಾಖಲೆ ಗೇಲ್ (14562 ರನ್) ಹೆಸರಲ್ಲಿದೆ. ಅವರ ದಾಖಲೆ ಮುರಿಯಲು ಕೊಹ್ಲಿಗೆ ಇನ್ನೂ 1020 ರನ್ ಬೇಕಿದೆ.