ಬೆಂಗಳೂರು: 19ನೇ ಸೀಸನ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಬದ್ದ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬೃಹತ್ ಮೊತ್ತ ಕಲೆಹಾಕಿದೆ. ಈ ಮೂಲಕ ಆರ್ಸಿಬಿ ಅಪರೂಪದ ದಾಖಲೆ ಬರೆದಿದೆ.

2026ರ ಐಪಿಎಲ್ ಟೂರ್ನಿಯ 11ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದು, ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಕ್ಷರಶಃ ರನ್ ಮಳೆಯೇ ಹರಿದಿದೆ.

ಟಾಸ್ ಸೋತು ಮೊದಲು ಬ್ಯಾಟ್ ಮಾಡಲಿಳಿದ ಆರ್ಸಿಬಿ ತಂಡಕ್ಕೆ ಎಲ್ಲಾ ಬ್ಯಾಟರ್ಗಳು ಉಪಯುಕ್ತ ರನ್ ಕಾಣಿಕೆ ನೀಡಿದರು. ಚೆನ್ನೈ ಬೌಲರ್ಗಳನ್ನು ಮನಬಂದಂತೆ ದಂಡಿಸಿದ ಆರ್ಸಿಬಿ ತಂಡವು ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 250 ರನ್ಗಳ ಬೃಹತ್ ಮೊತ್ತ ಕಲೆಹಾಕಿದೆ.

ಈ ಮೂಲಕ 19ನೇ ಸೀಸನ್ ಐಪಿಎಲ್ ಟೂರ್ನಿಯಲ್ಲಿ ಇನ್ನಿಂಗ್ಸ್ವೊಂದರಲ್ಲಿ ಗರಿಷ್ಠ ಮೊತ್ತ ಕಲೆಹಾಕಿದ ತಂಡ ಎನ್ನುವ ಅಪರೂಪದ ದಾಖಲೆಗೆ ಆರ್ಸಿಬಿ ಪಾತ್ರವಾಗಿದೆ. ಈ ಮೊದಲು ಕೆಕೆಆರ್ ಎದುರು ಸನ್ರೈಸರ್ಸ್ ಹೈದರಾಬಾದ್ 226 ರನ್ ಬಾರಿಸಿದ್ದೇ ಈ ಸೀಸನ್ನ ಗರಿಷ್ಠ ಸ್ಕೋರ್ ಎನಿಸಿಕೊಂಡಿತ್ತು.

ಆರ್ಸಿಬಿ ಪರ ಆರಂಭದಲ್ಲಿ ವಿರಾಟ್ ಕೊಹ್ಲಿ 28 ರನ್ ಸಿಡಿಸಿದರೆ, ಫಿಲ್ ಸಾಲ್ಟ್ 46 ರನ್ ಬಾರಿಸಿ ಕೇವಲ 4 ರನ್ ಅಂತರದಲ್ಲಿ ಅರ್ಧಶತಕ ವಂಚಿತರಾದರು. ಆದರೆ ದೇವದತ್ ಪಡಿಕ್ಕಲ್ ಕೇವಲ 29 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 50 ರನ್ ಸಿಡಿಸಿ ಜೇಮಿ ಓವರ್ಟನ್ಗೆ ವಿಕೆಟ್ ಒಪ್ಪಿಸಿದರು.

ಇದಾದ ಬಳಿಕ ನಾಲ್ಕನೇ ವಿಕೆಟ್ಗೆ ಜತೆಯಾದ ನಾಯಕ ರಜತ್ ಪಾಟೀದಾರ್ ಹಾಗೂ ಟಿಮ್ ಡೇವಿಡ್ ಕೇವಲ 35 ಎಸೆತಗಳಲ್ಲಿ ಮುರಿಯದ 99 ರನ್ ಸಿಡಿಸುವ ಮೂಲಕ ತಂಡದ ಮೊತ್ತ 250ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ರಜತ್ ಪಾಟೀದಾರ್ ಕೇವಲ 19 ಎಸೆತಗಳಲ್ಲಿ ಒಂದು ಬೌಂಡರಿ ಆರು ಸಿಕ್ಸರ್ ಸಹಿತ ಅಜೇಯ 48 ರನ್ ಬಾರಿಸಿದರು.

ಇನ್ನು ಚೆನ್ನೈ ಬೌಲರ್ಗಳನ್ನು ಅಟ್ಟಾಡಿಸಿ ಹೊಡೆದ ಟಿಮ್ ಡೇವಿಡ್ ಕೇವಲ 25 ಎಸೆತಗಳಲ್ಲಿ 3 ಬೌಂಡರಿ ಹಾಗೂ 8 ಮುಗಿಲೆತ್ತರದ ಸಿಕ್ಸರ್ಗಳ ನೆರವಿನಿಂದ ಅಜೇಯ 70 ರನ್ ಬಾರಿಸಿ, ಸಿಎಸ್ಕೆ ಎದುರು ಆರ್ಸಿಬಿ ಗರಿಷ್ಠ ಸ್ಕೋರ್ ದಾಖಲಿಸಲು ನೆರವಾದರು.

Source link
ಸಿಎಸ್ಕೆ ಬೌಲರ್ಗಳನ್ನು ಅಟ್ಟಾಡಿಸಿ ಹೊಡೆದ ಆರ್ಸಿಬಿ! ಈ ಸೀಸನ್ನಲ್ಲಿ ಹೊಸ ದಾಖಲೆ ನಿರ್ಮಾಣ