ನವಂಬರ್, 26: ಕೆಲವೊಮ್ಮೆ ದೇವರು ಯಾವ ರೂಪದಲ್ಲಿ ಬಂದು ನಮಗೆ ಸಹಾಯ ಮಾಡುತ್ತಾನೆ ಎಂದು ಹೇಳಲು ಸಾಧ್ಯವಿಲ್ಲ. ಸಂಶೋಧನೆರೈಲ್ವೆ ಇಲಾಖೆ) ಮಹಿಳಾ ಕಾನ್ಸಟೆಬಲ್ ಒಬ್ಬರು 75 ವರ್ಷದ ವೃದ್ಧನ ಪಾಲಿಗೆ ದೇವರಾಗಿದ್ದಾರೆ. ನಿಲ್ದಾಣದಲ್ಲಿ ರೈಲು ನಿಂತ ಕೂಡಲೆ ಕೆಳಗೆ ಇಳಿದಿದ್ದ 75 ವರ್ಷದ ಪ್ರಯಾಣಿಕ ಅಂಗಡಿಯಲ್ಲಿ ಏನೋ ತೆಗೆದುಕೊಳ್ಳುತ್ತಿದ್ದಾಗ ರೈಲು ಹೊರಟಿತ್ತು. ತಕ್ಷಣ ಓಡಿಹೋಗಿ ಚಲಿಸುತ್ತಿದ್ದ ರೈಲನ್ನು ಹತ್ತಿಕೊಳ್ಳುವಾಗ ಆಯತಪ್ಪಿ ರೈಲು ಹಾಗೂ ಪ್ಲಾಟ್‌ಫಾರ್ಮ್ ನಡುವೆ ಇರುವ ಅಂತರದೊಳಗೆ ಸಿಲುಕಿಕೊಂಡಿದ್ದರು. ಅಷ್ಟರಲ್ಲೇ ಓಡೋಡಿ ಬಂದ ಆರ್‌ಪಿಎಫ್ ಮಹಿಳಾ ಕಾನ್‌ಸ್ಟೆಬಲ್ ರಮಾ ಶರ್ಮಾ ಆ ವ್ಯಕ್ತಿಯನ್ನು ಎಳೆದು ಪ್ಲಾಟ್‌ಫಾರ್ಮ್ ಮೇಲೆ ಹಾಕಿದರು. ಆಕೆ ಬರುವುದು ಚೂರು ತಡವಾಗಿದ್ದರೂ ಆ ವ್ಯಕ್ತಿಯ ಕಾಲು ತುಂಡಾಗಬಹುದಿತ್ತು ಅಥವಾ ಪ್ರಾಣವೇ ಹೋಗಬಹುದಿತ್ತು. ಆಕೆಯ ಸಮಯ ಈ ರೈಲು ನಿಲ್ದಾಣದ ಸಿಟಿವಿಯಲ್ಲಿ ಸೆರೆ ಸಿಕ್ಕಿತು, ಇಲಾಖೆಯು ಇದನ್ನು ತನ್ನ ಎಕ್ಸ್ ಪೇಜಿನಲ್ಲಿ ಹಂಚಿಕೊಂಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ