
ಮನೆಯಲ್ಲಿ ಚಿನ್ನ- ಬೆಳ್ಳಿ ಇಟ್ಟುಕೊಂಡರೆ ಕಳ್ಳಕಾಕರ ಭಯವೆಂದು ಬ್ಯಾಂಕ್ ಲಾಕರ್ಗಳಲ್ಲಿ ಇವುಗಳನ್ನು ಇಡುವವರೇ ಬಹುತೇಕ ಎಲ್ಲರೂ. ಆದರೆ ಬ್ಯಾಂಕ್ನಲ್ಲಿ ಅದರಲ್ಲಿಯೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ಯಂಥ ರಾಷ್ಟ್ರೀಕೃತ ಬ್ಯಾಂಕ್ಗಳ ಲಾಕರ್ನಲ್ಲಿ ಇಟ್ಟ ಚಿನ್ನ ಬೆಳ್ಳಿ ಗಾಯಬ್ ಆದರೆ ಕಥೆ ಏನಾಗಬೇಡ? ಅದೂ ಎರಡು ಕೋಟಿ ಮೌಲ್ಯದ ಚಿನ್ನ, ಬೆಳ್ಳಿ! ಇಂಥದ್ದೊಂದು ಘಟನೆ ನಡೆದಿದ್ದು, ಗ್ರಾಹಕರು ಬೆಚ್ಚಿ ಬಿದ್ದಿದ್ದಾರೆ. ಲಾಕರ್ ತಮ್ಮ ಹೆಸರಿನಲ್ಲಿಯೇ ಇರುವಾಗ, ನಕಲಿ ಕೀಯನ್ನು ಬೇರೆಯವರಿಗೆ ನೀಡಿ 2 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ಗಾಯಬ್ ಮಾಡಲಾಗಿದೆ ಎನ್ನುವ ಗಂಭೀರ ಘಟನೆ ಇದಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರು ಇಂಥ ಬ್ಯಾಂಕ್ ಮೇಲೆಯೂ ನಂಬಿಕೆ ಕಳೆದುಕೊಳ್ಳುವಂತಾಗಿದ್ದು, ಈ ಸುದ್ದಿ ಗ್ರಾಹಕರಲ್ಲಿ ಭಾರಿ ಚಿಂತೆಯನ್ನು ಉಂಟು ಮಾಡಿದೆ.