Headlines

ಕರ್ನಾಟಕದ ವಿವಿಧ ಬ್ಯಾಂಕುಗಳಲ್ಲಿ ಕ್ಲೇಮ್ ಆಗದೇ ಉಳಿದಿರುವ ಹಣ ಎಷ್ಟು ಗೊತ್ತಾ? ಅನ್​ಕ್ಲೇಮ್ಡ್ ಡೆಪಾಸಿಟ್ ಮರಳಿಪಡೆಯುವುದು ಹೇಗೆ?

ಕರ್ನಾಟಕದ ವಿವಿಧ ಬ್ಯಾಂಕುಗಳಲ್ಲಿ ಕ್ಲೇಮ್ ಆಗದೇ ಉಳಿದಿರುವ ಹಣ ಎಷ್ಟು ಗೊತ್ತಾ? ಅನ್​ಕ್ಲೇಮ್ಡ್ ಡೆಪಾಸಿಟ್ ಮರಳಿಪಡೆಯುವುದು ಹೇಗೆ?


ಮಂಗಳೂರು, ಡಿಸೆಂಬರ್ 25: ಕರ್ನಾಟಕದ ವಿವಿಧ ಬ್ಯಾಂಕುಗಳಲ್ಲಿ ಹತ್ತಕ್ಕೂ ಹೆಚ್ಚು ವರ್ಷಗಳಿಂದ ಕ್ಲೇಮ್ ಆಗದೇ ಉಳಿದಿರುವ ಹಣ 3,400 ಕೋಟಿ ರೂನಷ್ಟಿದೆ. ಆರ್ಬಿಐ (ಆರ್‌ಬಿಐ) ಬೆಂಗಳೂರು ಪ್ರಾದೇಶಿಕ ಕಚೇರಿಯ ಸಹಾಯಕ ಜನರಲ್ ಮ್ಯಾನೇಜರ್ ಅರುಣ್ ಕುಮಾರ್ ಈ ಮಾಹಿತಿ ನೀಡಿದ್ದಾರೆ. ಜಿಲ್ಲಾ ಸಮಾಲೋಚನ ಸಮಿತಿ (ಡಿಸಿಸಿ) ಮತ್ತು ಜಿಲ್ಲಾ ಮಟ್ಟದ ಪರಾಮರ್ಶೆ ಸಮಿತಿ (ಡಿಎಲ್ ಆರ್ ಸಿ) ಸಭೆಯಲ್ಲಿ ಆರ್ ಬಿಐ ಅಧಿಕಾರಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಹತ್ತಕ್ಕೂ ಹೆಚ್ಚು ವರ್ಷಗಳಿಂದ ಬ್ಯಾಂಕ್ ಖಾತೆಗಳು, ಡೆಪಾಸಿಟ್ ಪ್ಲಾನ್‌ಗಳು ಬಳಕೆಯಲ್ಲಿಲ್ಲದ ಕಾರಣ ಅದನ್ನು ಬಿಐನ ಠೇವಣಿದಾರ ಶಿಕ್ಷಣ ಮತ್ತು ಜಾಗೃತಿ ನಿಧಿ (ಡಿಐಇಎಫ್) ಎನ್ನುವ ವಿಶೇಷ ನಿಧಿಗೆ ವರ್ಗಾವಣೆ ಮಾಡಲಾಗಿದೆ. ರಾಷ್ಟ್ರಾದ್ಯಂತ ಎಲ್ಲಾ ಬ್ಯಾಂಕುಗಳ ನಿಷ್ಕ್ರಿಯ ಅಕೌಂಟ್‌ಗಳಿಂದ ಆರ್ ಬಿಐನ ಡಿಐಎಫ್‌ಎಫ್ ಫಂಡ್‌ಗೆ ವರ್ಗಾವಣೆ ಆಗಿರುವುದು ಒಟ್ಟು ಮೊತ್ತ ಸುಮಾರು 75,000 ಕೋಟಿ ರೂ ಆಸುಪಾಸು ಇದೆ. ಈ ಮೇಲಿನ ಕರ್ನಾಟಕದ ಬ್ಯಾಂಕುಗಳ ಠೇವಣಿದಾರರ ಅನ್ಕ್ಲೇಮ್ಡ್ ಡೆಪಾಸಿಟ್ಗಳ ಮೊತ್ತವೇ 3,400 ಕೋಟಿ ರೂ ಇದೆ.

ಇದನ್ನೂ ಓದಿ: ಬರಲಿವೆ ಹೊಸ ವಿಮಾನಗಳು; ಶಂಖ್ ಏರ್ ಆಯ್ತು, ಈಗ ಅಲ್ ಹಿಂದ್ ಏರ್‌ಗಳು ಮತ್ತು ಫ್ಲೈ ಎಕ್ಸ್‌ಪ್ರೆಸ್‌ಗೂ ಸಿಕ್ಕಿತು ಎನ್ ಒಸಿ

ಸಮಾಧಾನದ ಸಂಗತಿ ಎಂದರೆ, ಕ್ಲೀಮ್ ಆಗದ ಶೇ. 80ರಷ್ಟು ಅಕೌಂಟ್‌ಗಳಲ್ಲಿ ಇರುವ ಹಣ 10,000 ರೂಗಿಂತ ಕಡಿಮೆ. ಹಲವು ಹಿಂದೆಯೇ ಇವು ನಿಷ್ಕ್ರಿಯಗೊಂಡಿವೆ. ಮೊಬೈಲ್ ನಂಬರ್ ಅಪ್‌ಡೇಟ್ ಆಗದೇ ಇರುವುದು, ಕೆವೈಸಿ ಅಪ್‌ಡೇಟ್ ಆಗಿರುವುದು, ಖಾತೆದಾರರು ಜೀವಂತ ಇಲ್ಲದಿರುವುದು, ಇತ್ಯಾದಿ ಕಾರಣಕ್ಕೆ ಅಕೌಂಟ್‌ಗಳು ಇನಾಪರೇಟಿವ್ ಆಗಿವೆ.

ಗ್ರಾಹಕರಿಗೆ ಹಣ ಮರಳಿಸಲು ಆರ್ ಬಿಐ ಅಭಿಯಾನ

ಬ್ಯಾಂಕುಗಳಲ್ಲಿ ಕ್ಲೇಮ್ ಆಗದೇ ಉಳಿದಿರುವ ಹಣವನ್ನು ಖಾತೆದಾರರಿಗೆ ಅಥವಾ ವಾರಸುದಾರರಿಗೆ ತಲುಪಿಸಲು ಆರ್ ಬಿಐ ಒಂದು ದೊಡ್ಡ ಅಭಿಯಾನವನ್ನೇ ನಡೆಸಿದೆ. ಮೂರು ತಿಂಗಳ ಹಿಂದೆ ಪ್ರಾರಂಭವಾದ ಈ ‘ನಿಮ್ಮ ಹಣ ನಿಮ್ಮ ಹಕ್ಕು’ ಕೆಂಪೇನ್ ಡಿಸೆಂಬರ್ 31 ರವರೆಗೂ ಇರಲಿದೆ. ಈ ಅಕೌಂಟ್‌ಗಳ ಖಾತೆದಾರರನ್ನು ಗುರುತಿಸಿ, ಅವರು ಜೀವಂತವಾಗಿದ್ದರೆ ಖಾತೆಯನ್ನು ಸಕ್ರಿಯಗೊಳಿಸುತ್ತದೆ ಅಥವಾ ಹಣವನ್ನು ಮರಳಿಸುವುದೋ ಮಾಡುತ್ತದೆ. ಜೀವಂತ ಇಲ್ಲದಿದ್ದರೆ ವಾರಸುದಾರರಿಗೆ ಹಣ ಮರಳಿಸುವ ಪ್ರಯತ್ನ.

ವಾರಸುದಾರರು ಹಣ ಕ್ಲೇಮ್ ಮಾಡುವುದು ಹೇಗೆ?

ಆರ್ಬಿಐ ಪ್ರಕಟಿಸಿರುವ ಮಾಹಿತಿ ಪ್ರಕಾರ, ಆನ್‌ಕ್ಲೇಮ್ಡ್ ಡೆಪಾಸಿಟ್‌ಗಳು ಎಂದು ವೀಕ್ಷಿಸಲು ಪ್ರತ್ಯೇಕ ಪೋರ್ಟಲ್ ರಚಿಸಲಾಗಿದೆ: udgam.rbi.org.in/

ಇದನ್ನೂ ಓದಿ: ಭಾರತದೊಂದಿಗೆ ಇದು ಕೆಟ್ಟ ಒಪ್ಪಂದ: ನ್ಯೂಜಿಲೆಂಡ್ ಸರ್ಕಾರದೊಳಗೆಯೇ ಅಪಸ್ವರ; ಇವರ ತಕರಾರುಗಳೇನು?

ಇಲ್ಲಿಗೆ ಹೋಗಿ ಖಾತೆದಾರರ ಹೆಸರು, ಬ್ಯಾಂಕನ್ನು ಆಯ್ಕೆ ಮಾಡಿಕೊಳ್ಳಿ, ಪ್ಯಾನ್ ಅಥವಾ ವೋಟರ್ ಐಡಿ, ಡಿಎಲ್, ಪಾಸ್‌ಪೋರ್ಟ್ ನಂಬರ್‌ನಿಂದ ಸರ್ಚ್ ಮಾಡಿ ನಿಮ್ಮದೋ ಅಥವಾ ಪೋಷಕರದ್ದೋ ಅನ್‌ಕ್ಲೇಮ್ಡ್ ಡೆಪಾಸಿಟ್ ಇದ್ದರೆ ಪತ್ತೆ ಮಾಡಬಹುದು.

ಅಥವಾ, ಕ್ಲೇಮ್ ಆಗದೇ ಯಾವುದಾದರೂ ಖಾತೆ ಇದೆ ಗೊತ್ತಾದರೆ, ನೀವೇ ಖುದ್ದಾಗಿ ಆ ಬ್ಯಾಂಕ್ ಕಚೇರಿಗೆ ಹೋಗಿ ಕೆವೈಸಿ ದಾಖಲೆಗಳನ್ನು ಸಲ್ಲಿಸಿದರೆ ಹಣವನ್ನು ಮರಳಿ ಪಡೆಯಬಹುದು.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *