ಬೆಂಗಳೂರು, ಅಕ್ಟೋಬರ್ 22: ಆರ್ಎಸ್ಎಸ್ನ ಪಥಸಂಚಲನದಲ್ಲಿ ಭಾಗವಹಿಸಿದ್ದ ಸರ್ಕಾರಿ ನೌಕರರ ಅಮಾನತಿನ ಕುರಿತು ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, ‘ನಾನು ಮಂತ್ರಿಯಂದ ಮಾತ್ರಕ್ಕೆ ನನಗೆ ಬೇಕಾದ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ನನಗೂ ನಿಯಮಾವಳಿಗಳಿವೆ. ಅದಕ್ಕನುಗುಣವಾಗಿಯೇ ಮಾನತಿನ ನಿರ್ಧಾರ ತೆಗೆದುಕೊಂಡಿರುವುದು’ ಎಂದರು.
ಬೆಂಗಳೂರಿನಲ್ಲಿ ಮಧ್ಯದವರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, ‘ನಾನು ದಲಿತ ಸಂಘಟನೆಗಳ ಪ್ರಾಯೋಜಕತ್ವ ವಹಿಸಿದ್ದೇನೆಂದರೆ ಆರ್ಎಸ್ಎಸ್ ಎಸ್ನ ಪ್ರಾಯೋಜಕರು ಯಾರು? ಅವರದೊಂದು ನೋಂದಣಿಯ ಸಂಘಟನೆ. ಇಂತಹ ಸಂಘಟನೆಗೆ ಬಟ್ಟೆ ಹೊಲಿಸಲು, ಕಟ್ಟಡ ಕಟ್ಟಿಸಲು ಹಣ ಎಲ್ಲಿಂದ ಬರುತ್ತಿದೆ’ ಎಂದು ಕೇಳಿದರು.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.