Headlines

ಪ್ರತಿಯೊಂದು ಯಶಸ್ಸಿನ ಹಿಂದಿರೋ ದೇಗುಲದ ಸೀಕ್ರೆಟ್​ ರಿವೀಲ್​ ಮಾಡಿದ ನಟಿ Rukmini Vasanth

ಪ್ರತಿಯೊಂದು ಯಶಸ್ಸಿನ ಹಿಂದಿರೋ ದೇಗುಲದ ಸೀಕ್ರೆಟ್​ ರಿವೀಲ್​ ಮಾಡಿದ ನಟಿ Rukmini Vasanth

ಪ್ರತಿಯೊಂದು ಯಶಸ್ಸಿನ ಹಿಂದಿರೋ ದೇಗುಲದ ಸೀಕ್ರೆಟ್​ ರಿವೀಲ್​ ಮಾಡಿದ ನಟಿ Rukmini Vasanth

’ಸಪ್ತ ಸಾಗರದಾಚೆ ಎಲ್ಲೋ’ ಮತ್ತು ‘ಕಾಂತಾರ’ ಚಿತ್ರಗಳ ಮೂಲಕ ಖ್ಯಾತಿ ಗಳಿಸಿದ ನಟಿ ರುಕ್ಮಿಣಿ ವಸಂತ್, ತಮ್ಮ ಯಶಸ್ಸಿನ ಹಿಂದಿನ ರಹಸ್ಯವನ್ನು ಹಂಚಿಕೊಂಡಿದ್ದಾರೆ. ಬೆಂಗಳೂರಿನ ದೇವಸ್ಥಾನವೇ ತಮ್ಮ ವೃತ್ತಿಜೀವನದ ಯಶಸ್ಸಿಗೆ ಕಾರಣ ಎಂದು ಅವರು ಬಹಿರಂಗಪಡಿಸಿದ್ದಾರೆ.

ಕಾಂತಾರಾ ಚಾಪ್ಟರ್​-1 ಮೂಲಕ ಕನಕವತಿಯಾಗಿ ಮಿಂಚಿರುವ ನಟಿ ರುಕ್ಮಿಣಿ ವಸಂತ್​ ಅವರು ಸಕತ್​ ಫೇಮಸ್​ ಆಗಿದ್ದು, ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಎ ಮತ್ತು ಬಿ ಸಿನಿಮಾಗಳ ಮೂಲಕ.

1994ರಲ್ಲಿ ಜನಿಸಿರುವ ನಟಿ ರುಕ್ಮಿಣಿ ಅವರಿಗೆ ಈಗ 32 ವರ್ಷ ವಯಸ್ಸು. ಅಶೋಕ ಚಕ್ರ ಪಡೆದ ಕರ್ನಲ್​ ವಸಂತ್​ ವೇಣುಗೋಪಾಲ ಅವರ ಪುತ್ರಿ ರುಕ್ಮಿಣಿ ಅವರಿಗೆ ಬಣ್ಣದ ಲೋಕ ಕೈಬೀಸಿ ಕರೆದದ್ದು, 2019ರಲ್ಲಿ ಬಿಡುಗಡೆಯಾದ ಬೀರಬಲ್ ಟ್ರೈಲಾಜಿ ಪ್ರಕರಣ 1.

ಆದರೆ ಅವರ ಕೈಹಿಡಿದದ್ದು 2023ರಲ್ಲಿ ಬಿಡುಗಡೆಯಾದ ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಎ ಮತ್ತು ಅದೇ ವರ್ಷ ಬಿಡುಗಡೆಯಾದ ಸೈಡ್​-ಬಿನಲ್ಲಿ ಪ್ರಿಯಾ ಪಾತ್ರದಲ್ಲಿ ಮಿಂಚಿದಾಗ. ಇದೇ ಸಾಲಿನಲ್ಲಿ ಬಾನ ದಾರಿಯಲ್ಲಿ ಅವರು ನಟಿಸಿದ್ದರೂ, ಅವರಿಗೆ ಸಕತ್​ ಹೆಸರು ತಂದುಕೊಟ್ಟಿದ್ದು ಮಾತ್ರ ಸಪ್ತ ಸಾಗರದಾಚೆ ಎಲ್ಲೋ ಚಿತ್ರ.

ಇದಾದ ಬಳಿಕ ಬಘೀರ್​, ಭೈರತಿ ರಣಗಲ್​ನಲ್ಲಿ ನಟಿಸಿದರೂ, ಅವರನ್ನು ಪ್ಯಾನ್​ ಇಂಡಿಯಾ ಮೀರಿದ ನಟಿಯನ್ನಾಗಿಸಿದ್ದು ಕಳೆದ ವರ್ಷ ಬಿಡುಗಡೆಯಾದ ಕಾಂತಾರ ಚಾಪ್ಟರ್​-1 ಕನಕವತಿ ರೋಲ್​.

ತಮ್ಮ ಈ ಎಲ್ಲಾ ಯಶಸ್ಸನ್ನು ಅವರು ಬೆಂಗಳೂರಿನ ದೇವಾಲಯವೊಂದಕ್ಕೆ ಸಮರ್ಪಿಸಿದ್ದಾರೆ. Rapid Rashi ಯುಟ್ಯೂಬ್​ ಚಾನೆಲ್​ ಜೊತೆ ಮಾತನಾಡಿರುವ ರುಕ್ಮಿಣಿ ವಸಂತ್​ ( Rukmini Vasanth) ಅವರು, ತಮ್ಮನ್ನು ಕೈಹಿಡಿದಿರುವ ಎರಡು ದೇವಸ್ಥಾನಗಳ ಪರಿಚಯವನ್ನು ಮಾಡಿಸಿದ್ದಾರೆ.

ಬೆಂಗಳೂರಿನ ಸದಾಶಿವನಗರದಲ್ಲಿ ಇರುವ ಗಣಪತಿ ದೇವಸ್ಥಾನದಲ್ಲಿ ನನಗೆ ತುಂಬಾ ಶಾಂತಿ ಸಿಗುತ್ತದೆ. ಆದರೆ ನನ್ನನ್ನು ಕೈಹಿಡಿದು ನಡೆಸಿದ್ದು, ಮೈಸೂರು ರಸ್ತೆಯಲ್ಲಿ ಇರುವ ಗಾಳಿ ಆಂಜನೇಯ ದೇವಸ್ಥಾನ ಎಂದು ಹೇಳಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಬಹುತೇಕ ಶೂಟಿಂಗ್​ ಇಲ್ಲಿಯೇ ಹತ್ತಿರದಲ್ಲಿ ನಡೆದದ್ದರಿಂದ ತುಂಬಾ ಸಲ ಈ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದೇನೆ. ದಿನವೂ ಬೆಳಿಗ್ಗೆ ಇಲ್ಲಿಂದಲೇ ನನ್ನ ಪಯಣ ಶುರುವಾಗುತ್ತಿತ್ತು. ಈ ದೇವಸ್ಥಾನ ನನಗೆ ತುಂಬಾ ಕೊಟ್ಟಿದೆ ಎಂದು ಯಶಸ್ಸಿನ ಬಗ್ಗೆ ತಿಳಿಸಿದ್ದಾರೆ ನಟಿ.

Source link

Leave a Reply

Your email address will not be published. Required fields are marked *