ಸೆಲೆಬ್ರಿಟಿಗಳ ಹೆಸರಲ್ಲಿ ಸಾಕಷ್ಟು ವಂಚನೆ ನಡೆಯುತ್ತಿದೆ. ಈಗ ರುಕ್ಮಿಣಿ ವಸಂತಗೂ ಇದೆ ತೊಂದರೆ ಎದುರಾಗಿದೆ. ‘ಕಾಂತಾರ: ಅಧ್ಯಾಯ 1’ ಸಿನಿಮಾದಲ್ಲಿ (ಕಾಂತಾರ: ಅಧ್ಯಾಯ 1) ಕನಕಾವತಿ ಹೆಸರಿನ ಪಾತ್ರ ಮಾಡಿ ರುಕ್ಮಿಣಿ ವಸಂತ್ ಗಮನ ಸೆಳೆದರು. ಈಗ ಅವರಿಗೆ ಕಳ್ಳರ ಕಾಟ ಶುರುವಾಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವರು ಪೋಸ್ಟ್ ಮಾಡಿ ಮಾಹಿತಿ ನೀಡಿದ್ದಾರೆ. ಹೆಸರಲ್ಲಿ ಯಾರು ಮೋಸ ಮಾಡುತ್ತಿದ್ದಾರೆ ತಮ್ಮ ಬಗ್ಗೆ ಅವರಿಗೆ ಮಾಹಿತಿ ಇದೆ.
9445893273 ಸಂಖ್ಯೆಯ ನಂಬರ್ ಇಂದ ವ್ಯಕ್ತಿಯೋರ್ವ ವಿವಿಧ ಜನರಿಗೆ ಕರೆ ಮಾಡಲಾಗುತ್ತಿದೆ. ಕರೆ ಮಾಡಿ ಮೋಸ ಮಾಡುತ್ತಿರುವುದು ಅವರ ಗಮನಕ್ಕೆ ಬಂದಿದೆ. ಹೀಗಾಗಿ, ಎಚ್ಚರಿಕೆ ಸೂಚನೆ. ‘ಈ ಮೊಬೈಲ್ ಸಂಖ್ಯೆ ನನಗೆ ಸೇರಿದ್ದಲ್ಲ. ಇದರಿಂದ ಬರುವ ಯಾವುದೇ ಮೆಸೇಜ್ ಅಥವಾ ಕರೆ ಬಂದರೆ ಅದು ಫೇಕ್. ಅದು ನಾನಲ್ಲ ಎಂದು ಸ್ಪಷ್ಟಪಡಿಸುತ್ತೇನೆ. ದಯವಿಟ್ಟು ಅಂತಹ ಸಂದೇಶಗಳಿಗೆ ಪ್ರತಿಕ್ರಿಯೆ ಬೇಡ ಅಥವಾ ತೊಡಗಿಸಿಕೊಳ್ಳಬೇಡಿ ಎಂದು ರುಕ್ಮಿಣಿ ವಸಂತ್ ಬರೆದುಕೊಂಡಿದ್ದಾರೆ.
🚨 ಪ್ರಮುಖ ಎಚ್ಚರಿಕೆ ಮತ್ತು ಜಾಗೃತಿ ಸಂದೇಶ 🚨
9445893273 ನಂಬರ್ ಬಳಸಿ ವ್ಯಕ್ತಿಯೋರ್ವ ನನ್ನನ್ನು ಯಾಮಾರಿಸಿ ಸುಳ್ಳು ನೆಪದಲ್ಲಿ ವಿವಿಧ ಜನರನ್ನು ತಲುಪುತ್ತಿರುವುದು ನನ್ನ ಗಮನಕ್ಕೆ ಬಂದಿದೆ.
ಈ ಸಂಖ್ಯೆ ನನಗೆ ಸಂಬಂಧಿಸಿಲ್ಲ ಮತ್ತು ಯಾವುದೇ ಸಂದೇಶಗಳು ಅಥವಾ ಕರೆಗಳು ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ…
— ರುಕ್ಮಿಣಿ (@rukminitweets) ನವೆಂಬರ್ 7, 2025
‘ಈ ರೀತಿ ಮೋಸ ಮಾಡಿದರೆ ಸೈಬರ್ ಅಪರಾಧದ ವ್ಯಾಪ್ತಿಗೆ ಬರುತ್ತದೆ. ವಂಚನೆ ಮತ್ತು ದಾರಿತಪ್ಪಿಸುವ ಚಟುವಟಿಕೆಗಳಲ್ಲಿ ಭಾಗವಹಿಸಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ. ಈ ಬಗ್ಗೆ ಏನಾದರೂ ಸ್ಪಷ್ಟನೆ ಬೇಕಿದ್ದರೆ ನನ್ನ ಅಥವಾ ನನ್ನ ತಂಡವನ್ನು ಸಂಪರ್ಕಿಸಿ. ನಿಮ್ಮ ತಿಳುವಳಿಕೆ ಮತ್ತು ಸಹಕಾರಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಆನ್‌ಲೈನ್‌ನಲ್ಲಿ ಜಾಗರೂಕರಾಗಿರಿ ಮತ್ತು ಸುರಕ್ಷಿತವಾಗಿರಿ’ ಎಂದು ರುಕ್ಮಿಣಿ ವಸಂತ್ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ರುಕ್ಮಿಣಿ ವಸಂತ್‌ಗೆ ಅದೃಷ್ಟ ಖುಲಾಯಿಸಿತು, ಲೆಜೆಂಡರಿ ನಿರ್ದೇಶಕನ ಸಿನಿಮಾದಲ್ಲಿ ಅವಕಾಶ
ಸೆಲೆಬ್ರಿಟಿಗಳ ಹೆಸರಲ್ಲಿ ಅನೇಕ ವಂಚನೆಗಳು ನಡೆಯುತ್ತಿರುವುದು ಬೆಳಕಿಗೆ ಬರುತ್ತಿದೆ. ಫೇಕ್ ಸೋಶಿಯಲ್ ಮೀಡಿಯಾ ಖಾತೆಗಳನ್ನು ಸೃಷ್ಟಿಸಿ ಮೋಸ ಮಾಡಲಾಗುತ್ತಿದೆ. ಇದು ಗಮನಕ್ಕೆ ಬಂದ ತಕ್ಷಣ ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ನೀಡಿ ಎಚ್ಚರಿಕೆ ನೀಡುವ ಕೆಲಸ ಮಾಡಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 10:10 am, ಶನಿ, 8 ನವೆಂಬರ್ 25