ರಕ್ಷಿತ್​ ಶೆಟ್ಟಿಯ ಇನ್ನೊಂದು ಮುಖ ಬಿಚ್ಚಿಟ್ಟ ರುಕ್ಮಿಣಿ ವಸಂತ್​: 'ಸಪ್ತಸಾಗರದಾಚೆ' ಶೂಟಿಂಗ್​ನಲ್ಲಿ ರಾತ್ರಿ ನಡೆದದ್ದೇನು?

ರಕ್ಷಿತ್​ ಶೆಟ್ಟಿಯ ಇನ್ನೊಂದು ಮುಖ ಬಿಚ್ಚಿಟ್ಟ ರುಕ್ಮಿಣಿ ವಸಂತ್​:  'ಸಪ್ತಸಾಗರದಾಚೆ' ಶೂಟಿಂಗ್​ನಲ್ಲಿ  ರಾತ್ರಿ ನಡೆದದ್ದೇನು?

ರಕ್ಷಿತ್​ ಶೆಟ್ಟಿಯ ಇನ್ನೊಂದು ಮುಖ ಬಿಚ್ಚಿಟ್ಟ ರುಕ್ಮಿಣಿ ವಸಂತ್​:  'ಸಪ್ತಸಾಗರದಾಚೆ' ಶೂಟಿಂಗ್​ನಲ್ಲಿ  ರಾತ್ರಿ ನಡೆದದ್ದೇನು?

’ಸಪ್ತಸಾಗರದಾಚೆ ಎಲ್ಲೋ’ ಸಹನಟ ರಕ್ಷಿತ್ ಶೆಟ್ಟಿ ಅವರ ವಿಭಿನ್ನ ವ್ಯಕ್ತಿತ್ವದ ಬಗ್ಗೆ ನಟಿ ರುಕ್ಮಿಣಿ ವಸಂತ್ ಮಾತನಾಡಿದ್ದಾರೆ. ಸಿನಿಮಾ ಶೂಟಿಂಗ್​ನಲ್ಲಿ ಮಧ್ಯರಾತ್ರಿ 2 ಗಂಟೆಗೆ ನಡೆದ ಘಟನೆಯ ಬಗ್ಗೆಯೂ ಅವರು ವಿವರಿಸಿದ್ದಾರೆ.

ಸ್ಯಾಂಡಲ್​ವುಡ್​ ಸ್ಟಾರ್​ ನಟರಾದ ರಕ್ಷಿತ್​ ಶೆಟ್ಟಿ ಮತ್ತು ರುಕ್ಮಿಣಿ ವಸಂತ್​ ಅವರ ಸಪ್ತಸಾಗರದಾಚೆ ಎಲ್ಲೋ (Sapta Sagaradaache Ello) ಎ ಮತ್ತು ಬಿ ಸೈಡ್​ಗಳು ಬ್ಲಾಕ್​ಬಸ್ಟರ್​ ಆಗಿದ್ದ ಸಿನಿಮಾ. ಇದರಿಂದ ಅವರಿಬ್ಬರ ಕೆಮೆಸ್ಟ್ರಿಯಲ್ಲಿ ಕೋಟ್ಯಂತರ ಮಂದಿ ಇಷ್ಟಪಟ್ಟಿದ್ದಾರೆ. ಈ ಸಿನಿಮಾದ ಬಳಿಕ ರುಕ್ಮಿಣಿ ವಸಂತ್​ ಅವರಿಗೆ ಹಲವು ಅವಕಾಶಗಳು ಅರಸಿ ಬಂದದ್ದೂ ನಿಜ.

ಅಷ್ಟಕ್ಕೂ ರಕ್ಷಿತ್​ ಶೆಟ್ಟಿ ಅವರು, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ , ಎರಡು ಫಿಲ್ಮ್‌ಫೇರ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡವರು. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಎರಡೂ ಸೈಡ್​ಗಳು ರಿಲೀಸ್​ ಆದ ಮೇಲೆ ಸ್ವಲ್ಪ ಸೈಲೆಂಟ್​ ಆಗಿದ್ದಾರೆ. ಅವರ ಬಹುನಿರೀಕ್ಷಿತ ರಿಚರ್ಡ್ ಆ್ಯಂಟೋನಿ ಚಿತ್ರೀಕರಣವನ್ನು ಯಾವಾಗ ಪ್ರಾರಂಭಿಸುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಇದರ ನಡುವೆಯೇ Rapid Rashmi ಯುಟ್ಯೂಬ್​ ಚಾನೆಲ್​ಗೆ ರುಕ್ಮಿಣಿ (Rukmini Vasanth) ಅವರು ನಟ ರಕ್ಷಿತ್​ ಶೆಟ್ಟಿ ಅವರ ಇನ್ನೊಂದು ಮುಖವನ್ನೂ ಪರಿಚಯಿಸಿದ್ದಾರೆ.

ರಕ್ಷಿತ್​ ಅವರು ತುಂಬಾ ಡಿಫರೆಂಟ್​. ಅವರು ತಮ್ಮ ಪ್ರತಿಯೊಂದು ಸಿನಿಮಾವನ್ನೂ ಆಧ್ಯಾತ್ಮಿಕ ದೃಷ್ಟಿಯಲ್ಲಿ ನೋಡುತ್ತಾರೆ. ತಮ್ಮ ಸಿನಿಮಾಕ್ಕಾಗಿ ತುಂಬಾ ಸುಂದರವಾಗಿ ತಯಾರಿ ನಡೆಸುತ್ತಾರೆ. ಸಿನಿಮಾ ಬಿಡುಗಡೆಯಾದಾಗ ದುಡ್ಡು, ಮಾರ್ಕೆಟ್​ ಎಲ್ಲಾ ನೋಡುವುದು ಸಾಮಾನ್ಯ. ಆದರೆ, ಅವರು ನೋಡುವ ದೃಷ್ಟಿಯೇ ಬೇರೆ. ಸ್ಪಿರಿಚ್ಯುವಲ್​ ಆಗಿ ನೋಡುವುದರಿಂದ ಅವರು ಈ ಮಟ್ಟಿನ ಯಶಸ್ಸನ್ನು ಗಳಿಸಿದ್ದಾರೆ ಎಂದಿದ್ದಾರೆ ರುಕ್ಮಿಣಿ ವಸಂತ್​

ಇದೇ ವೇಳೆ ಮಧ್ಯರಾತ್ರಿ 2 ಗಂಟೆಗೆ ನಡೆದ ಘಟನೆಯೊಂದನ್ನೂ ಈ ಸಂದರ್ಭದಲ್ಲಿ ಅವರು ನೆನಪು ಮಾಡಿಕೊಂಡಿದ್ದಾರೆ. ರಕ್ಷಿತ್​ ಶೆಟ್ಟಿ (Rakshit Shetty) ಅವರು ಎಷ್ಟೊಂದು ಕೂಲ್​ ಆಗಿ ಇರುತ್ತಾರೆ, ಪರಿಸ್ಥಿತಿಯನ್ನು ಹೇಗೆ ಮ್ಯಾನೇಜ್​ ಮಾಡುತ್ತಾರೆ ಎನ್ನುವ ಬಗ್ಗೆ ಅವರು ತಿಳಿಸಿದ್ದಾರೆ.

ಸಾಮಾನ್ಯವಾಗಿ ಶೂಟಿಂಗ್​ನಲ್ಲಿ ಸಿನಿಮಾದ ಕಾಸ್ಟ್ಯೂಮ್​ನಲ್ಲಿ ಇರುವ ಕಾರಣ, ಅದು ಲೀಕ್ ಆಗುತ್ತದೆ ಎನ್ನುವ ಕಾರಣಕ್ಕೆ ಫೋಟೋ ಕೊಡುವಂತಿಲ್ಲ. ಇದು ನಮಗೆ ಇರುವ ಕಡ್ಡಾಯ ನಿಯಮ. ಆದರೆ ಸಪ್ತಸಾಗರದಾಚೆ ಎಲ್ಲೋ ಸಿನಿಮಾದ ಶೂಟಿಂಗ್​ ವೇಳೆ ಮಧ್ಯರಾತ್ರಿ 2 ಗಂಟೆಗೆ ಬಂದ ಅಭಿಮಾನಿಯೊಬ್ಬ ಫೋಟೋಗಾಗಿ ವಿಪರೀತ ಗಲಾಟೆ ಮಾಡಿದ. ಫೋಟೋ ಕೊಡಲಿಲ್ಲ ಎನ್ನುವ ಕಾರಣಕ್ಕೆ ಸಿಕ್ಕಾಪಟ್ಟೆ ರೇಗಾಡಿದ ಎಂದು ನೆನಪಿಸಿಕೊಡಿದ್ದಾರೆ.

ಆ ಬಳಿಕ, ರಕ್ಷಿತ್​ ಶೆಟ್ಟಿ ಅವರು ಅಷ್ಟು ಬಿಜಿ ಇದ್ದರು ಕೂಡ ಕಾಮ್​ ಆಗಿ ಆ ವ್ಯಕ್ತಿಯ ಬಳಿ ಅರ್ಧ ಗಂಟೆ ಚರ್ಚಿಸಿ ಇರುವ ವಿಷಯವನ್ನು ಮನವರಿಕೆ ಮಾಡಿಕೊಟ್ಟರು. ಪರಿಸ್ಥಿತಿಯನ್ನು ಅಷ್ಟು ಕೂಲ್​ ಆಗಿ ಹ್ಯಾಂಡಲ್​ ಮಾಡಿದರು. ಅವರು ಕೇವಲ ಒಬ್ಬ ನಟ ಮಾತ್ರವಲ್ಲ, ವಿಭಿನ್ನ ರೀತಿಯ ವ್ಯಕ್ತಿತ್ವವೂ ಅವರಲ್ಲಿ ಇರುವುದನ್ನು ಅವರಿಂದ ನೋಡಿ ಎಲ್ಲರೂ ಕಲಿಯಬೇಕು ಎಂದು ಶ್ಲಾಘಿಸಿದ್ದಾರೆ.

Source link

Leave a Reply

Your email address will not be published. Required fields are marked *